ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೈದ್ಯರು ಹಣದ ಬೆನ್ನು ಹತ್ತದೇ ಉತ್ತಮ ಸೇವೆ ನೀಡಿ

Mainashree
Updated On : 15 Nov 2013, 11:25 am

ಗದಗ: ವೈದ್ಯರ ಕೆಲಸ ಬರೀ ಹಣ ಗಳಿಸುವುದಲ್ಲ. ಬಡವರು, ರೋಗಿಗಳ ಸೇವೆ ಮಾಡುವುದು ಪುಣ್ಯದ ಕೆಲಸವಲ್ಲದೆ, ಅದು ವೈದ್ಯರ ವೃತ್ತಿ ಧರ್ಮವೂ ಹೌದು ಎನ್ನುವುದನ್ನು ಗಿನ್ನಿಸ್ ದಾಖಲೆ ಬರೆದ ಹೆಮ್ಮೆಯ ಕನ್ನಡಿಗ, ನೇತ್ರ ವೈದ್ಯ ಡಾ. ಎಂ.ಸಿ. ಮೋದಿ ಅವರ ಜೀವನ ನಿರ್ದೇಶಿಸುತ್ತದೆ ಎಂದು ನಗರದ ಚಿಕ್ಕಮಕ್ಕಳ ತಜ್ಞ ಡಾ. ಎನ್.ಬಿ. ನಿಂಬಣ್ಣವರ ಹೇಳಿದರು.
ತೋಂಟದಾರ್ಯ ಮಠದಲ್ಲಿ ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ 2145ನೇ ಶಿವಾನುಭವದಲ್ಲಿ ಖ್ಯಾತ ನೇತ್ರ ತಜ್ಞ, ಪದ್ಮಭೂಷಣ ಲಿಂ. ಡಾ. ಎಂ.ಸಿ. ಮೋದಿ ಅವರ ಕುರಿತು ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಲಿಂಗಾಯತ ಪುಣ್ಯಪುರುಷ ಮಾಲೆಯ 238ನೇ ಕೃತಿಯಾಗಿ ಪ್ರಕಟಿತ ಡಾ. ಎಂ.ಸಿ. ಮೋದಿ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಿವಾನುಭವ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಜ. ತೋಂಟದ ಡಾ. ಸಿದ್ದಲಿಂಗ ಶ್ರೀ, ಡಾ. ಮೋದಿ ತಮ್ಮ ಕಾಲದಲ್ಲಿಯೇ ಬದುಕಿದ್ದ ಮಹಾತ್ಮಗಾಂಧೀಜಿ ಅವರ ಜೀವನದ ತತ್ವಾದರ್ಶಗಳಿಂದ ಪ್ರೇರಿತರಾಗಿದ್ದರು. ನೇತ್ರ ಚಿಕಿತ್ಸೆಯನ್ನು ದೈನಂದಿನ ಪವಿತ್ರ ಕಾಯಕವನ್ನಾಗಿಸಿಕೊಂಡು ಬೆಳೆದು ಬಂದ ಡಾ. ಮೋದಿ ಅವರು ವಿಶ್ವದಲ್ಲಿಯೇ ಮೊದಲ ಸಂಚಾರಿ ನೇತ್ರ ಚಿಕಿತ್ಸಾಲಯ ತೆರೆದ ಮೊದಲ ವೈದ್ಯರಲ್ಲದೆ, ನೇತ್ರ ಚಿಕಿತ್ಸೆಗೆಂದು ಆಗಮಿಸುವ ಜನಸಾಮಾನ್ಯರಿಗೆಲ್ಲ ಪ್ರಸಾದ ವ್ಯವಸ್ಥೆ ಕೂಡ ಮಾಡಿದ ಮೊದಲ ವೈದ್ಯರಾಗಿದ್ದರು ಎಂದರು. ಬೆಂಗಳೂರಿನ ಡಾ. ಮೋದಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮುನಿರಾಜು, ಗ್ರಂಥದಾನಿ ಅಂತೂರ ಬೆಂತೂರಿನ ಸುಭಾಶ್ಚಂದ್ರಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಬಸಪ್ಪ ಪಲ್ಲೇದ, ಸಂಗಪ್ಪ ಆಗಡಿ, ಮಹಾದೇವಪ್ಪ ಪಲ್ಲೇದ, ವಿರೂಪಾಕ್ಷಪ್ಪ ಕುಡುವಕ್ಕಲಿಗರ, ಚಂಬವ್ವ ಅಗಡಿ, ಜ್ಯೋತಿ ಮಸ್ಕಿ, ಮಹಾಂತೇಶ ಮಸ್ಕಿ ದಂಪತಿ ಇತರರು ಪಾಲ್ಗೊಂಡಿದ್ದರು. ಪ್ರೊ. ಎಸ್.ಎನ್. ಆದಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕ್ರಪ್ಪ ಅಂಗಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement