ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸವಿತಾ ಸಮಾಜ ಸಮ್ಮೇಳನಕ್ಕೆ ಜಿ. ಪರಮೇಶ್ವರಗೆ ಆಹ್ವಾನ

Mainashree
Updated On : 15 Nov 2013, 11:25 am

ಗದಗ: ನಗರದಲ್ಲಿ ಜರುಗಲಿರುವ ರಾಜ್ಯ ಮಟ್ಟದ ಸವಿತಾ ಸಮಾಜದ ಮಹಾಸಮ್ಮೇಳನಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರಿಗೆ ರಾಜ್ಯ ಸವಿತಾ ಸಮಾಜ ಗದಗ ಜಿಲ್ಲಾ ಘಟಕ, ಸಮಾಜದ ಮುಖಂಡ ರಾಮಣ್ಣ ರಾಂಪುರ ನೇತೃತ್ವದಲ್ಲಿ ಮನವಿ ಸಲ್ಲಿಸಿದೆ.
ಮಂಗಳವಾರ ನಗರದ ಕಾಟನ್ ಸೇಲ್ ಸೊಸೈಯಿಟಿ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪರಮೇಶ್ವರ ಅವರಿಗೆ ಮನವಿ ಅರ್ಪಿಸಿ, ಡಿಸೆಂಬರ್ 17 ರಂದು ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜರುಗಲಿರುವ ರಾಜ್ಯಮಟ್ಟದ ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸವಿತಾ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ವಿಚಾರಗಳನ್ನು ಸರ್ಕಾರಕ್ಕೆ ತಿಳಿಸುವ ಮೂಲಕ ಸವಿತಾ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕೋರಿದರು. ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿಕುಮಾರ ರಾಯಚೂರ, ಜಿಲ್ಲಾ ಸಂಚಾಲಕ ರಾಜು ಗೌಡರ, ಗೌರವಾಧ್ಯಕ್ಷ ವೆಂಕಟೇಶ ರಾಂಪುರ, ಉಪಾಧ್ಯಕ್ಷ ಆಂಜನೇಯ ಆಧೋನಿ, ಜಿಲ್ಲಾ ಪ್ರತಿನಿಧಿ ಹನುಮಂತ ರಾಂಪುರ, ಉಪಾಧ್ಯಕ್ಷ ಜಗನ್ನಾಥ ಕ್ಷೀರಸಾಗರ, ವಿಶಾಲ ಮಾನೆ, ಪ್ರಕಾಶ ಮಾನೆ, ಪಾಂಡಪ್ಪ ರಾಂಪುರ, ಅಣ್ಣಪ್ಪ ರಾಂಪುರ, ವೆಂಕಟೇಶ ಬಯಲಗುಟ್ಟ, ಜೊದು ರಾಂಪುರ, ಮಂಜುನಾಥ ಬಯಲಗುಡ್ಡ, ಬಾಪು ರಾಯಚೂರ, ಜೋತಿರಾಮ ಮಾನೆ, ರಾಘವೇಂದ್ರ ಗೌಡರ, ದಿಲೀಪ ಸೊಳಂಕಿ, ಪರಶುರಾಮ ರಾಂಪುರ, ರಾಜೇಶ ಗೌಡರ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement