ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಹಿಂದ ಶೈಕ್ಷಣಿಕ ಪ್ರವಾಸ ಕುರಿತು ಅಭಿಪ್ರಾಯಗಳು

Lingaraj Badiger
Updated On : 16 Nov 2013, 11:41 am

ಮಕ್ಕಳೇ ದೇವರು ಎಂಬ ನಾಣ್ಣುಡಿಯಂತೆ ಬದುಕುತ್ತಿರುವ ಭಾರತ ದೇಶದಲ್ಲಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿಯೇ ಇಂತಹ ಗೊಂದಲಕಾರಿ ಸಂಸ್ಕೃತಿಯನ್ನು ಬಿತ್ತುತ್ತಿರುವ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸವನ್ನು ರಾಜ್ಯ ಸರ್ಕಾರ ನಿಲ್ಲಿಸಲಿ. ಇಲ್ಲವೇ ಎಲ್ಲ ವರ್ಗದ ಪ್ರಾಥಮಿಕ ಶಾಲೆ ಮಕ್ಕಳಿಗೆ ವಿಸ್ತರಿಸಲಿ.
ಪ್ರೊ. ಎಸ್.ವಿ.ಸಂಕನೂರ, ನಿವೃತ್ತ ಪ್ರಾಚಾರ್ಯರು
ಇಂದು ಶಿಕ್ಷಕರೇ ವಿದ್ಯಾರ್ಥಿಗಳಿಗೆ ಜಾತಿವಾದ ಕಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರ್ಕಾರ ರೂಪಿಸಿರುವ ಪ.ಜಾತಿ, ಪಂ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ. ಇದು ಮಕ್ಕಳಲ್ಲಿ ಜಾತಿ ಭೇದ ಬಿತ್ತುವಂಥ ಸಂಸ್ಕೃತಿಯಾಗಿದೆ. ಇದನ್ನು ಸರ್ಕಾರ ಕೈಬಿಡಬೇಕು.
ಎಂ.ಎಂ. ಹಿರೇಮಠ, ನ್ಯಾಯವಾದಿ
ಸರ್ವರಿಗೂ ಸಮಾನ ಶಿಕ್ಷಣ ನೀಡುವಂತೆ ಸರ್ಕಾರವು ಒಂದೆಡೆ ಹೇಳಿಕೊಂಡರೆ ಮತ್ತೊಂದೆಡೆ ಗೊಂದಲದ ಯೋಜನೆ ರೂಪಿಸುತ್ತಿದೆ. ಸರ್ಕಾರಕ್ಕೆ ಪ. ಜಾತಿ, ಪಂಗಡ ವಿದ್ಯಾರ್ಥಿಗಳು ಅಷ್ಟೇ ಕಣ್ಣಿಗೆ ಕಾಣುವಂತಾಗಿರುವುದು ಖಂಡನಾರ್ಹ.
ಸೋಮು ಹುಡೇದಮನಿ, ಗ್ರಾಪಂ ಮಾಜಿ ಅಧ್ಯಕ್ಷ
ಕರ್ನಾಟಕ ದರ್ಶನ ಸಾಕಷ್ಟು ಉಪಯುಕ್ತವಾಗಿದೆ. ಆದರೆ, ಇದನ್ನು ಕೆಲವಷ್ಟೇ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದೇ ಸಮಾಜದಲ್ಲಿರುವ ಎಲ್ಲಾ ಬಡವರಿಗೂ ವಿಸ್ತರಿಸಬೇಕು. ಇಲ್ಲವಾದಲ್ಲಿ ಬಾಲ್ಯಾವಸ್ಥೆಯಿಂದಲೇ ಮಕ್ಕಳಲ್ಲಿ ಜಾತೀಯತೆ ಮೂಡುತ್ತದೆ. ನಮ್ಮದು ಜಾತ್ಯತೀತ ದೇಶವಾಗಿದೆ. ಯೋಜನೆಗಳು ಮಕ್ಕಳಲ್ಲಿ ಗೊಂದಲ ಉಂಟುಮಾಡುವುದು ಬೇಡ.
ಗಣೇಶಸಿಂಗ್ ಬ್ಯಾಳಿ,
ಖಾಸಗಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷರು
ಸರ್ಕಾರವು ರೂಪಿಸಿದ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸವು ಉತ್ತಮ ಯೋಜನೆಯಾಗಿದೆ. ಆದರೆ, ಸರ್ಕಾರ ಈ ಯೋಜನೆಯನ್ನು ಎಲ್ಲಾ ಬಡಮಕ್ಕಳಿಗೂ ನೀಡುವಂತಾಗಬೇಕು.
ಅಕ್ಷಯ ಹಿರೇಮಠ, ವಿದ್ಯಾರ್ಥಿ
ಕರ್ನಾಟಕ ದರ್ಶನವನ್ನು ರಾಜ್ಯದಲ್ಲಿರುವ ಎಲ್ಲಾ ಬಡವರಿಗೂ ನೀಡಿ, ರಾಜ್ಯವನ್ನು ಕೆಲವಷ್ಟೇ ಜನರು ನೋಡುವುದು ಸರಿಯಲ್ಲ, ಉಳ್ಳವರ ಮಕ್ಕಳು ಹೇಗಾದರೂ ನೋಡುತ್ತಾರೆ. ರಾಜ್ಯದಲ್ಲಿರುವ ಇನ್ನುಳಿದ ಬಡ ಮಕ್ಕಳು ಸರ್ಕಾರದ ಯೋಜನೆಯಿಂದ ವಂಚಿತ ಆಗಬಾರದು. ಅದಕ್ಕಾಗಿ ಎಲ್ಲಾ ಬಡವರಿಗೂ ಯೋಜನೆ ವಿಸ್ತರಿಸಿ.
ಮಾಂತೇಶ ಚವ್ಹಾಣ, ವಿದ್ಯಾರ್ಥಿ
ನಮ್ಮ ಸಮಾಜದಲ್ಲಿರುವ ಎಲ್ಲಾ ವರ್ಗಗಳಲ್ಲಿಯೂ ಬಡವರಿದ್ದಾರೆ. ಯೋಜನೆಗಳು ಬಡವರಿಗಾಗಿಯೇ ಜಾರಿಗೆ ಬರಬೇಕು. ಆದರೆ, ಅದು ಕೆಲವಷ್ಟೇ ಜನರಿಗೆ ಸೀಮಿತವಾಗಬಾರದು. ಅದಕ್ಕಾಗಿ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು ಎಲ್ಲರಿಗೂ ನೀಡಿ.
ಗೀತಾ ಕೆಂಪಣ್ಣವರ, ವಿದ್ಯಾರ್ಥಿ
ಎಲ್ಲ ಮಕ್ಕಳು ಒಂದೇ, ಬಾಲ್ಯಾವಸ್ಥೆಯಲ್ಲಿಯೇ ಗೊಂದಲ ಮೂಡಿಸುವುದು ತಪ್ಪು ಅದಕ್ಕಾಗಿ ರಾಜ್ಯದ ಮಾಹಿತಿಯನ್ನು ಮಕ್ಕಳಿಗೆ ನೀಡುವ ಸಂದರ್ಭದಲ್ಲಿ ಮಕ್ಕಳಲ್ಲಿ ಜಾತಿ ಭಾವನೆ ಮೂಡಬಾರದು, ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು ಎಲ್ಲ ಬಡವರಿಗೂ ವಿಸ್ತರಿಸಿರಿ.
ಕವಿತಾ ಹೊಸಮನಿ, ವಿದ್ಯಾರ್ಥಿನಿ
ರಾಜ್ಯದಲ್ಲಿ ಎಲ್ಲ ಸಮುದಾಯ ವಾಸಿಸುತ್ತಿದ್ದು, ಎಲ್ಲೆಡೆಯೂ ಬಡವರಿದ್ದಾರೆ. ಸರ್ಕಾರ ಕೆಲವೇ ಜನರಿಗೆ ಶೈಕ್ಷಣಿಕ ಪ್ರವಾಸದ ಅವಕಾಶ ನೀಡದೇ ಸಮಾಜದಲ್ಲಿರುವ ಎಲ್ಲಾ ಬಡವರಿಗೂ ಈ ಯೋಜನೆಯನ್ನು ವಿಸ್ತರಿಸಬೇಕು.
ಕಿರಣ ಪಾಯಪ್ಪಗೌಡ್ರ, ವಿದ್ಯಾರ್ಥಿ
ಶಿಕ್ಷಕರು ವಿದ್ಯಾರ್ಥಿಗಳಿಗೆ ಜಾತಿ, ಭೇದ-ಭಾವವಿಲ್ಲದೇ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಇಂದು ಶಿಕ್ಷಕರೇ ವಿದ್ಯಾರ್ಥಿಗಳಿಗೆ ಜಾತಿವಾದ ಕಲಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ರಾಜ್ಯ ಸರ್ಕಾರದ ಕರ್ನಾಟಕ ದರ್ಶನದ ಸೌಲಭ್ಯವನ್ನು ಎಲ್ಲರಿಗೂ ನೀಡಿರಿ.
ಪ್ರವೀಣ ಅಕ್ಕಿ, ವಿದ್ಯಾರ್ಥಿ
ಶಾಲೆಯಲ್ಲಿ ಎಲ್ಲ ವರ್ಗದ ಜನರಿಗೆ ಸಮಾನವಾದ ಶಿಕ್ಷಣ ನೀಡುವಂತೆ ಸರ್ಕಾರವು ಒಂದೆಡೆ ಹೇಳಿಕೊಂಡರೆ ಮತ್ತೊಂದೆಡೆ ಈ ರೀತಿಯ ಗೊಂದಲದ ಯೋಜನೆ ರೂಪಿಸುತ್ತಿದೆ. ಆದರೆ, ಸರ್ಕಾರ ಮಾತ್ರ ಕೇವಲ ಒಂದೇ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದು ಇದು ಸರಿಯಾದ ಬೆಳವಣಿಗೆಯಲ್ಲ.
ಸಂತೋಷ ಭಾಲ್ಕಿ, ವಿದ್ಯಾರ್ಥಿ
ಜನರು ಸಹಬಾಳ್ವೆಯಿಂದ ಜೀವನ ನಡೆಸುವ ಮೂಲಕ ಇತರೆ ದೇಶಗಳಿಗೆ ಮಾದರಿಯಾಗಿದ್ದೇವೆ. ಮಕ್ಕಳ ಮನಸ್ಸು ಮೃದು. ಹಾಗಾಗಿ ಜಾತಿ ಮನೋಭಾವನೆಯಂತಹ ವಾತಾವರಣ ನಿರ್ಮಾಣವಾಗುವ ಯೋಜನೆ ಜಾರಿಗೆ ಬರಬಾರದು. ಸಮಾಜದಲ್ಲಿರುವ ಎಲ್ಲಾ ಬಡ ಮಕ್ಕಳು ಒಂದೇ.
ನಯನಾ ಕಿನ್ನಾಳ, ವಿದ್ಯಾರ್ಥಿನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement