ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉತ್ತಮ ರಸ್ತೆಯಿಂದ ಜೀವನ ಸುಧಾರಣೆ

Lingaraj Badiger
Updated On : 16 Nov 2013, 11:55 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ನ. 15
ಗ್ರಾಮೀಣ ಪ್ರದೇಶದ ರಸ್ತೆಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದಲ್ಲಿ ಗ್ರಾಮೀಣ ಜನರ ಬದುಕು ಸುಧಾರಣೆಯಾಗಲು ಸಾಧ್ಯವೆಂದು ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯಪಟ್ಟರು.
ಅವರು ಸಮೀಪದ ಬಾಲೆಹೊಸೂರು ಗ್ರಾಮದಲ್ಲಿ ಈಚೆಗೆ ಲೋಕೋಪಯೋಗಿ ಇಲಾಖೆಯಿಂದ ಗಜೇಂದ್ರಗಡ-ಸೊರಬ ರಾಷ್ಟ್ರೀಯ ಹೆದ್ದಾರಿ 136 ರಸ್ತೆ ಸುಧಾರಣೆಯ ಅಡಿಯಲ್ಲಿ ಬಾಲೆಹೊಸೂರು ಗ್ರಾಮದಲ್ಲಿನ 3.18 ಕಿ.ಮೀ. ರಸ್ತೆ ಖಡೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆ ಮಾಡುವ ಮೂಲಕ ಗ್ರಾಮಗಳು ಎಲ್ಲ ಮೂಲ ಸೌಲಭ್ಯ ಪಡೆಯಬೇಕು ಎನ್ನುವುದು ತಮ್ಮ ಗುರಿಯಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ರಸ್ತೆ ಕಾಮಗಾರಿಯು ಈ ಮೊದಲು ತಯಾರಿಸಿದ ಯೋಜನೆಯ ಪ್ರಕಾರ ನಡೆಯಬೇಕು ಹಾಗೂ ಉತ್ತಮ ಗುಣಮಟ್ಟದ ಕಾಮಗಾರಿಯು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಪಿಡಬ್ಲ್ಯೂಡಿ ಅಭಿಯಂತರಿಗೆ ಸೂಚಿಸಿದರು.
ಬಾಲೆಹೊಸೂರ ಗ್ರಾಮವು ತಾಲೂಕಿನ ಕೊನೆಯ ಹಳ್ಳಿಯಾಗಿದ್ದು, ಈ ಗ್ರಾಮಕ್ಕೆ ಕುಡಿಯುವ ನೀರು, ಶೌಚಾಲಯಗಳ ನಿರ್ಮಾಣ, ನಮ್ಮ ಹೊಲ ನಮ್ಮ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ತಾವು ಸಿದ್ಧ ಎಂದರು.
ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ, ಗ್ರಾಪಂ ಅಧ್ಯಕ್ಷೆ ಮಾಲತಿ ಬಾರ್ಕಿ, ಉಪಾಧ್ಯಕ್ಷ ಮುದಕಪ್ಪ ಒಂಟಿ, ಗ್ರಾಪಂ ಸದಸ್ಯ ಬಸವರಾಜ ನೀಲಣ್ಣವರ, ಫಕ್ಕೀರೇಶ ಮ್ಯಾಟಣ್ಣವರ, ಶಿವು ಕಬ್ಬೇರ, ಡಿ.ಕೆ. ಹೊನ್ನಪ್ಪನವರ, ಲಕ್ಷ್ಮಣಗೌಡ ಪಾಟೀಲ, ಜಿ.ಆರ್. ಕೊಪ್ಪದ, ನಿಂಗಪ್ಪ ಜಾಲವಾಡಗಿ, ಬಾಬಣ್ಣ ಮುಂಡವಾಡ, ಭರತರಾಜ ಗುಡಗೇರಿ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರ ಪ್ರಕಾಶಗೌಡ ಪಾಟೀಲ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement