ಕಾಮಗಾರಿ ವೀಕ್ಷಣೆ
ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ರಸ್ತೆಯಲ್ಲಿ ನಡೆಯುತ್ತಿರುವ ತಾಲೂಕು ಆದರ್ಶ ವಿದ್ಯಾಲಯ ಶಾಲೆಯ ನೂತನ ಕಟ್ಟಡ ಕಾಮಗಾರಿಯನ್ನು ಗುರುವಾರ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ವೀಕ್ಷಿಸಿದರು. ಪರಶುರಾಮ ಕಿಳ್ಳಿಕ್ಯಾತರ, ಮಾಜಿ ಅಧ್ಯಕ್ಷ ಕೊಪಣ್ಣ ಕೊಪಣ್ಣವರ, ಕೋಟೆಪ್ಪ ಚೌಡಕಿ, ಬಸಣ್ಣ ಹೂಲಿಕಟ್ಟಿ, ಮಾರುತಿ ಗಾಂಜೀ, ಹನಮಂತಪ್ಪ ಡೊಳ್ಳಿನ, ಹುಸೇನಸಾಬ ತಪ್ಪಡಿ, ಸುರೇಶ ಕೋದಾಂಪುರ, ಬಸವರಾಜ ಮುಂದಿನಮನಿ, ಹನಮಪ್ಪ ಕಾಗನೂರ, ಎ.ಪಿ. ದಂಡಿನ ಇದ್ದರು.
ಶೌಚಾಲಯ ಉದ್ಘಾಟನೆ
ಗದಗ: ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಜಿಪಂ ಗದಗ, ತಾಪಂ ಗದಗ ಹಾಗೂ ಗ್ರಾಪಂ ಕುರ್ತಕೋಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾಗಾಂಧೀಜಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ನಿರ್ಮಿಸಿದ ಶೌಚಾಲಯ ಹಾಗೂ ಸ್ನಾನದ ಗೃಹವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಸಿಇಒ ವೀರಣ್ಣ ತುರಮರಿ, ಕುರ್ತಕೋಟಿ ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ ಮುಂತಾದವರು ಉಪಸ್ಥಿತರಿದ್ದರು.
ಮೈದಾನಕ್ಕೆ ಭೂಮಿಪೂಜೆ
ಮುಂಡರಗಿ: ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗಳನ್ನು ಮಾಡುವ ಮೂಲಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುವಂತೆ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೂಚಿಸಿದರು. ಅವರು ಗುರುವಾರ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರು. 3 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಟದ ಮೈದಾನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಕಾಮಗಾರಿ ನಡೆಸುವ ಸಂದರ್ಭದಲ್ಲಿ ಗ್ರಾಮದ ಜನರು, ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು. ಹಮ್ಮಿಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಗ್ರಾಪಂ ಅಧ್ಯಕ್ಷ ಪರಶುರಾಮ ಕಿಳ್ಳಿಕ್ಯಾತರ, ಮಾಜಿ ಅಧ್ಯಕ್ಷ ಕೊಪಣ್ಣ ಕೊಪಣ್ಣವರ, ಕೋಟೆಪ್ಪ ಚೌಡಕಿ, ಬಸಣ್ಣ ಹೂಲಿಕಟ್ಟಿ, ಮಾರುತಿ ಗಾಂಜಿ, ಹನುಮಂತಪ್ಪ ಡೊಳ್ಳಿನ, ಹುಸೇನಸಾಬ್ ತಪ್ಪಡಿ, ಸುರೇಶ ಕದಾಂಪುರ, ಬಸವರಾಜ ಮುಂದಿನಮನಿ, ಹನುಮಪ್ಪ ಕಾಗನೂರ, ಎ.ಪಿ. ದಂಡೀನ, ತಾಪಂ ಇಒ ಡಿ. ಮೋಹನ್, ಜಿಪಂ ಅಭಿಯಂತರ ಕೆ.ಬಿ. ಗಂಜಿಹಾಳ, ಪಿಡಿಒ ಎಚ್.ಎಂ. ಕಾತರಕಿ ಇದ್ದರು.
ಭಾಗ್ಯಶ್ರೀಗೆ ಕನ್ನಡ ಮಾಧ್ಯಮ ಪ್ರಶಸ್ತಿ
ನರಗುಂದ: 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುವ ನರಗುಂದದ ಭಾಗ್ಯಶ್ರೀ ಡಂಬಳ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಈಚೆಗೆ ಕನ್ನಡ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಟ್ಟ ಜೀವನಾನುಭವದ ದಿಟ್ಟ ಕವಿ ಬೇಂದ್ರೆ: ತಮ್ಮನಗೌಡರ
ಗದಗ: ತಮ್ಮ ಜೀವನದಲ್ಲಿ ಪಡೆದ ಪ್ರತಿ ಅನುಭವವನ್ನು ಸಮ್ಮಿಳಿತಗೊಳಿಸಿ ಆ ಅನುಭವಗಳನ್ನೇ ತಮ್ಮ ಕಾವ್ಯದ ಮೂಲಕ ಜನರಿಗೆ ತಿಳಿಸಿಕೊಟ್ಟ ಕೀರ್ತಿ ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ ಡಾ. ಸಂಗಮೇಶ ತಮ್ಮನಗೌಡರ ಹೇಳಿದರು.
ಅವರು ಈಚೆಗೆ ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಉತ್ತರ ಕರ್ನಾಟಕದ ಜನಪದ ಸೊಗಡು, ಮಣ್ಣಿನ ವಾಸನೆ, ಜೀವನದ ತೊಂದರೆ ಕಷ್ಟ-ನಷ್ಟ, ಸತಿ-ಪತಿಯಿರ ಸರಸ ಸಲ್ಲಾಪವನ್ನು ತಮ್ಮ ಕಾವ್ಯದ ಮೂಲಕ ಜನ ಮನಸದಲ್ಲಿ ಶಾಶ್ವತವಾದ ನೆಲೆಯನ್ನು ಕಂಡುಕೊಂಡವರು ದ.ರಾ. ಬೇಂದ್ರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾ. ಎಂ.ಸಿ. ಕಟ್ಟಿಮನಿ ಮಾತನಾಡಿ, ಬೇಂದ್ರೆಯವರ ಸಾಹಿತ್ಯ ಅಧ್ಯಯನವನ್ನು ಮಾಡಿದರೆ ಉತ್ತಮ ಸಂಸ್ಕೃತಿ ಪಡೆದುಕೊಳ್ಳುವದರ ಜತೆಗೆ ಜೀವನದ ಸಾರವನ್ನು ಅರಿಯಲು ಸಾಧ್ಯವೆಂದರು. ಮೇಘಾ ಕವಲೂರ ಪ್ರಾರ್ಥಿಸಿದರು. ಕಿಶೋರಬಾಬು ನಾಗರಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಜಿ. ಹಿರೇಮಠ, ಪಿ.ಆರ್. ಇನಾಮದಾರ, ಬಿ.ಎಸ್. ರಾಠೋಡ, ಎಸ್.ಎ. ಪೀರಜಾದೆ, ಪಿ.ಜಿ. ಕಟ್ಟಿಮನಿ, ಜೆ.ಡಿ. ಸಂಶಿ, ಜಿ.ಎಸ್. ಯತ್ನಟ್ಟಿ. ಬಿ.ಬಿ. ಮಿರ್ಜಿ ವಂದಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು.