ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿ: ರ್ಯಾಲಿ ಯಶಸ್ಸಿಗೆ ಪಂಜಿನ ಮೆರವಣಿಗೆ

Mainashree
Updated On : 17 Nov 2013, 11:22 am

ಮುಂಡರಗಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಬೆಂಗಳೂರಿನಲ್ಲಿ ನಡೆಯುವ ಸಮಾವೇಶ ಯಶಸ್ಸಿಗಾಗಿ ಪಂಜಿನ ಮೆರವಣಿಗೆ ಕಾರ್ಯಕ್ರಮವನ್ನು ಇಲ್ಲಿನ ಕೋಟೆ ಭಾಗದ ಮಾರುತಿ ದೇವಸ್ಥಾನದಿಂದ ಶುಕ್ರವಾರ ರಾತ್ರಿ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದರು.
ಪಂಜಿನ ಮೆರವಣಿಗೆಯನ್ನು ಬಿಜೆಪಿ ಹಿರಿಯ ಮುಖಂಡ ಕರಬಸಪ್ಪ ಹಂಚಿನಾಳ ಉದ್ಘಾಟಿಸಿ ಮಾತನಾಡಿ, ನ. 17 ರಂದು ಬೆಂಗಳೂರಿನಲ್ಲಿ ನಡೆಯುವ ಮೋದಿ ಅವರ ಕಾರ್ಯಕ್ರಮದ ಯಶಸ್ಸಿಗಾಗಿ ಬಿಜೆಪಿ ಕಾರ್ಯಕರ್ತರು ಪಂಜಿನ ಮೆರವಣಿಗೆಯನ್ನು ಹಮ್ಮಿಕೊಂಡು ಅವರ ಕಾರ್ಯಕ್ರಮಕ್ಕೆ ಬಲ ತಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವುದರೊಂದಿಗೆ ಮೋದಿ ಅವರ ಕೈ ಬಲಪಡಿಸಲಿದೆ ಎಂದರು.  ಯುವ ಮುಖಂಡ ನಿಂಗನಗೌಡ ಹರ್ತಿ ಮಾತನಾಡಿ, ಭಾರತದ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎನ್ನುವುದು 100 ಕ್ಕೆ 100ರಷ್ಟು ಸತ್ಯವಾದುದು. ಅವರು ಗುಜರಾತಿನಲ್ಲಿ ಈಗಾಗಲೇ ನಡೆಸುತ್ತಿರುವ ಸ್ವಚ್ಛ ಆಡಳಿತ, ಅಭಿವೃದ್ಧಿ ಪರ ಚಿಂತನೆಗಳು ಅವರನ್ನು ಪ್ರಧಾನಿಯನ್ನಾಗಿಸುತ್ತವೆ ಎಂದರು. ರಜನಿಕಾಂತ ದೇಸಾಯಿ, ಮಂಜುನಾಥ ಇಟಗಿ, ಪ್ರಭು ಅಬ್ಬಿಗೇರಿ, ಶಂಕರಗೌಡ ಪಾಟೀಲ, ಶ್ರೀನಿವಾಸ ಅಬ್ಬಿಗೇರಿ, ಬಸವರಾಜ ಮುಂಡವಾಡ, ಬಿ.ಎಸ್. ಸಸಿಮಠ, ಚಿನ್ನಪ್ಪ ವಡ್ಡಟ್ಟಿ, ಚಂದ್ರಕಾಂತ ಚಿಕ್ಕಣ್ಣವರ, ಶಿವು ನಾಡಗೌಡ್ರ ಮುಂತಾದವರಿದ್ದರು. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಯುವ ಬಿಜೆಪಿ ಅಧ್ಯಕ್ಷ ದೇವಪ್ಪ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ಜರುಗಿ, ಬೆಂಗಳೂರಿನ ನರೇಂದ್ರ ಮೋದಿ ಕಾರ್ಯಕ್ರಮ ಯಶಸ್ಸಿಗೆ ಹಾರೈಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement