ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಉದ್ಘಾಟನಾ ಸಮಾರಂಭ

Lingaraj Badiger
Updated On : 19 Nov 2013, 10:57 am

ಗದಗ: ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಗದಗ, ಕೆಸಿಸಿ ಬ್ಯಾಂಕ್ ಧಾರವಾಡ, ಮೃಡಗಿರಿ ಸಕ್ಕರೆ ಕಾರ್ಖಾನೆ ಗಂಗಾಪುರ, ಪಿಎಲ್‌ಡಿ ಬ್ಯಾಂಕ್ ಮುಂಡರಗಿ, ಟಿ.ಎ.ಪಿ.ಸಿ.ಎಂ.ಎಸ್. ಮುಂಡರಗಿ, ಮುಂಡರಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಇತರೆ ಸಹಕಾರಿ ಸಂಘಗಳ ಆಶ್ರಯದಲ್ಲಿ ಜಿಲ್ಲೆಯ ಮುಂಡರಗಿ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ನ. 19ರ ಮಧ್ಯಾಹ್ನ 1 ಗಂಟೆಗೆ ಪಂಚಾಯತ್ ರಾಜ್ ಸಂಸ್ಥೆಗಳು ಸಹಕಾರಿ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಆಹಾರ ಭದ್ರತೆ ಮತ್ತು ಅಂತಾರಾಷ್ಟ್ರೀಯ ಶೌಚಾಲಯ ದಿನದ ಹಾಗೂ ಸನ್ಮಾನ, ಅಭಿನಂದನಾ ಕಾರ್ಯಕ್ರಮ, ಸ್ವಸಹಾಯ ಸಂಘಗಳಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಶಾಸಕ ರಾಮಕೃಷ್ಣ ದೊಡ್ಡಮನಿ ಉದ್ಘಾಟಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು.  ವೈ.ಎನ್. ಗೌಡರ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಹಾಲಪ್ಪ ಕಬ್ಬೇರಹಳ್ಳಿ, ಹಾಲಪ್ಪ ಉಳ್ಳಾಗಡ್ಡಿ, ನಾರಾಯಣಪ್ಪ ಇಲ್ಲೂರ, ವಿ.ಎಸ್. ಯರಾಶಿ, ಅಪ್ಪಣ್ಣ ಪದಕಿ, ಮಂಜುಳಾ ಶೀಗೇನಹಳ್ಳಿ, ಎಸ್.ಬಿ. ಬಾರಿಕಾಯಿ ಮುಂತಾದವರು ಉಪಸ್ಥಿತರಿರುವರು.
23ರಂದು ಪುತ್ಥಳಿ ಅನಾವರಣ
ಗದಗ:  ಸ್ಥಳೀಯ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಗೌರವ ಕಾರ್ಯದರ್ಶಿ ದಿ. ಸಿ.ಎಸ್. ಪಾಟೀಲರ 101ನೇ ಜನ್ಮ ದಿನಾಚರಣೆ ಹಾಗೂ ಪುತ್ಥಳಿ ಅನಾವರಣ ಸಮಾರಂಭವು ನ. 23ರ ಬೆಳಗ್ಗೆ 9ಕ್ಕೆ ಸ್ಥಳೀಯ ಸಿ.ಎಸ್.ಪಾಟೀಲ ಪ್ರೌಢಶಾಲಾ ಮೈದಾನದಲ್ಲಿ ಜರುಗಲಿದೆ. ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹಾಗೂ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು.  ಸಚಿವ ಎಚ್.ಕೆ. ಪಾಟೀಲ ಪುತ್ಥಳಿ ಅನಾವರಣಗೊಳಿಸುವರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಡಿ.ಆರ್. ಪಾಟೀಲ, ಅಂದಾನಪ್ಪ ಪಟ್ಟಣಶೆಟ್ಟಿ, ಈಶಪ್ಪ ಕರಿಬಿಷ್ಠಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಜಿ. ಅಣ್ಣಿಗೇರಿ, ಕೆ.ವಿ. ಬಾಳಿಕಾಯಿ, ವೀರನಗೌಡ ಪಾಟೀಲ ಪಾಲ್ಗೊಳ್ಳುವರು. ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ವಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸುವರು. ವಿದ್ಯಾವರ್ಧಕ ಸಂಘದ ಸದಸ್ಯ ಹಾಗೂ ಪುತ್ಥಳಿಯ ದಾನಿ ಗಿರಿಯಪ್ಪಗೌಡ ಪಾಟೀಲ ಮತ್ತು ಶಿಲ್ಪಿ ವೀರೇಶ ಮಾಯಾಚಾರ ಅವರನ್ನು ಸನ್ಮಾನಿಸಲಾಗುವುದು.
ಜೂಜಾಟ: ಐವರ ಬಂಧನ
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅಕ್ಕಿಗುಂದ ತಾಂಡಾದ ಸಮುದಾಯ ಭವನದ ಹತ್ತಿರದ ಬಯಲು ಜಾಗೆಯಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿಗಳಾದ ದಾವಲಸಾಬ್ ಹಣಗಿ, ಶೇಖಪ್ಪ ಲಮಾಣಿ, ಶಂಕ್ರಪ್ಪ ದೊಡ್ಡಮನಿ, ಲಕ್ಷ್ಮಣ ಲಮಾಣಿ, ಸೋಮಣ್ಣ ಲಮಾಣಿ ಬಂಧಿತ ಆರೋಪಿಗಳು. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement