ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉತ್ಸಾಹದಿಂದಿರಲು ಕ್ರೀಡೆ ಪಾತ್ರ ಮುಖ್ಯ

Lingaraj Badiger
Updated On : 19 Nov 2013, 10:56 am

ಶಿರಹಟ್ಟಿ:  ವಿದ್ಯಾರ್ಥಿಗಳು ದೇಹ ಹಾಗೂ ಮನಸ್ಸನ್ನು ಉತ್ಸಾಹ ಹುಮ್ಮಸ್ಸಿನಿಂದಿಡುವಲ್ಲಿ ನಿರಂತರ ಕ್ರೀಡಾ ಅಭ್ಯಾಸವು ಪ್ರಮುಖ ಪಾತ್ರ ವಹಿಸಲಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಈಚೆಗೆ ತಾಲೂಕಿನ ಮಾಚೇನಹಳ್ಳಿ ಗ್ರಾಮದ ನಿಂಗರಡ್ಡಿ ತಿಮ್ಮರಡ್ಡಿ ತಾರೀಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಆಟದ ಮೈದಾನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತ            ನಾಡಿದರು.
ದೇಶಿ ಕ್ರೀಡೆಗೆ ಆದ್ಯತೆ ನೀಡಬೇಕು ಹಾಗೂ ಮಹತ್ವ ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸುಸಂಸ್ಕೃತ ಮತ್ತು ಸುಸಜ್ಜಿತವಾದ ಆಟದ ಮೈದಾನ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರತಿಭೆಗಳು ಪಾಲ್ಗೊಂಡು ಉತ್ತಮ ಪ್ರದರ್ಶನ ತೋರಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಬೇಕು ಎಂದರು.
ಮಕ್ಕಳು ನಿರಂತರ ಕ್ರೀಡಾ ಅಭ್ಯಾಸ ಮಾಡುವುದರಿಂದ ಕ್ರೀಡಾ ಚಟುವಟಿಕೆಯಲ್ಲಿ ಸಾಧನೆಗೈಯಲು ಸಹಕಾರಿ ಹಾಗೂ ದೈನಂದಿನ ಕಾರ್ಯ ಮಾಡಲು ದೇಹ ಮನಸ್ಸು ಉತ್ಸಾಹದಿಂದ ಇರಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ತಾಪಂ ಇಒ ವೈ.ಎಲ್. ಹಂಪಣ್ಣ ಹಾಗೂ ಗ್ರಾಪಂ ಸದಸ್ಯ ಶಂಕರ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ, ಗ್ರಾಪಂ ಅಧ್ಯಕ್ಷೆ ಗೌರಮ್ಮ ಕಲ್ಲೇದಾರ, ಉಪಾಧ್ಯಕ್ಷ ಶರಣಪ್ಪ ಆಡೂರ, ಶಿವಪುತ್ರಪ್ಪ ಮಾದರ, ಮಂಜಪ್ಪ ಸೊರಟೂರ, ಲಕ್ಷ್ಮೀದೇವಿ ಮಾದರ, ಬಸವಂತಪ್ಪ ಕೊಡ್ಲಿ, ಕುಮಾರಸ್ವಾಮಿ ಮಠದ, ವೀರಣ್ಣ ಕೆಲೂರ, ಪಿಡಿಒ ಕೃಷ್ಣಮ್ಮ ಹಾದಿಮನಿ ಮುಂತಾದವರು ಇದ್ದರು. ಮುಖ್ಯೋಪಾಧ್ಯಾಯ ಎಲ್.ಆರ್. ಜಯರಾಮ ಸ್ವಾಗತಿಸಿದರು. ಎಸ್.ಎಸ್. ತೋರಾತ ನಿರೂಪಿಸಿದರು. ಎಸ್.ಟಿ. ಶಿರಹಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement