ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಠಮಾನ್ಯಗಳಿಂದ ಜನಜೀವನ ಬದಲಾವಣೆ

Lingaraj Badiger
Updated On : 19 Nov 2013, 10:57 am

ಲಕ್ಷ್ಮೇಶ್ವರ: ಸಾರ್ವಜನಿಕರ ಜೀವನದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರುವಲ್ಲಿ ಧಾರ್ಮಿಕ ಗುರುಗಳ ಪಾತ್ರ ಬಹು ಅಮೂಲ್ಯವಾಗಿದೆ. ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮಠಮಾನ್ಯಗಳು ಜನರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಾಧ್ಯವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಅವರು ಈಚೆಗೆ ಸಮೀಪದ ಬಾಲೆಹೊಸೂರು ಗ್ರಾಮದ ದಿಂಗಾಲೇಶ್ವರ ಮಠದಲ್ಲಿ ಶ್ರೀಮಠದ ನೂತನ ಕಟ್ಟಡ ಹಾಗೂ ದಾಸೋಹ ಭವನದ ಉದ್ಘಾಟನೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಬಾಲೆಹೊಸೂರಿನ ಶ್ರೀಗಳು ನಾಡಿನ ತುಂಬ ಪ್ರವಚನದ ಮೂಲಕ ತಮ್ಮ ಭಕ್ತರ ಹಾಗೂ ಸಾರ್ವಜನಿಕರ ಬದುಕಿನಲ್ಲಿ ಹೊಸತನವನ್ನು ಹಾಗೂ ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಮಠ ಮಾನ್ಯಗಳು ಸಾರ್ವಜನಿಕರ ಬದುಕಿನಲ್ಲಿ ತೀರ ಹತ್ತಿರವಾಗಿ ಇರುವುದರಿಂದ ಸಮಾಜದ ಬದಲಾವಣೆಗೆ ತಮ್ಮನ್ನು ತೊಡಗಿಸಿಕೊಂಡು ಗುಣಾತ್ಮಕವಾಗಿ ತಿದ್ದುವ ಕಾರ್ಯ ಮಾಡಬೇಕಾಗಿದೆ.
ಗ್ರಾಮೀಣ ಜನರಲ್ಲಿ ಇರುವ ಬಯಲು ಶೌಚಾಲಯ ಪದ್ಧತಿಯನ್ನು ತೊಡೆದುಹಾಕುವ ಕಾರ್ಯವನ್ನು ಎಲ್ಲ ಧಾರ್ಮಿಕ ಮುಖಂಡರು, ಮಠ ಮಾನ್ಯಗಳು ಮಾಡಬೇಕಾಗಿದೆ. ಬಾಲೆಹೊಸೂರು ಗ್ರಾಮದಲ್ಲಿ ದಿಂಗಾಲೇಶ್ವರ ಶ್ರೀಗಳು ಮಾರ್ಚ್ 7, 8 ಮತ್ತು 9ರಂದು ಹಮ್ಮಿಕೊಂಡಿರುವ ಬೃಹತ್ ಧಾರ್ಮಿಕ ಜಾಗೃತಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗುವಂತೆ ನಾವೆಲ್ಲ ಪ್ರಯತ್ನಿಸುತ್ತೇವೆ. ಅದಕ್ಕಾಗಿ ಗ್ರಾಮಕ್ಕೆ ಬಂದು ಹೋಗುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಾವೆಲ್ಲ ಸಿದ್ಧರಾಗಿದ್ದೇವೆ. ಅಲ್ಲದೆ ತಾಲೂಕಿನ ಎಲ್ಲ ರಸ್ತೆಗಳ ಸುಧಾರಣೆಗೆ ಇಂದಿನಿಂದಲೇ ಸಿದ್ಧತೆಗಳನ್ನು ಮಾಡಿಕೊಂಡು, ಇರುವ ಅಲ್ಪ ಅವಧಿಯಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡುವ ಯೋಜನೆ ಹಾಕಿಕೊಂಡು ಅದನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಗುರುತರ ಜವಾಬ್ದಾರಿ ನಮ್ಮ ಹಾಗೂ ಭಕ್ತರ ಮೇಲಿದೆ ಎಂದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ರಾಜಯೋಗೀಂದ್ರ ಶ್ರೀಗಳು, ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀಗಳು, ಬಾಲೆಹೊಸೂರಿನ ಕುಮಾರ ದಿಂಗಾಲೇಶ್ವರ ಶ್ರೀಗಳು, ಬಿಜಕಲ್‌ನ ಶಿವಯೋಗೀಶ್ವರ ಶ್ರೀಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಿರೇಕೆರೂರಿನ ಶಾಸಕ ಯು.ಬಿ. ಬಣಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ರಾಮಕೃಷ್ಣ ದೊಡ್ಡಮನಿ, ಬ್ಯಾಡಗಿಯ ಶಾಸಕ ಬಸವರಾಜ ಶಿವಣ್ಣನವರ, ಹಾವೇರಿಯ ಶಾಸಕ ರುದ್ರಪ್ಪ ಲಮಾಣಿ, ವಿಪ ಸದಸ್ಯ ಶ್ರೀನಿವಾಸ ಮಾನೆ. ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿ.ಎಸ್.ಗಡ್ಡದೇವರಮಠ, ವಾಯುವ್ಯ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವುಕಾರ, ಶಂಕ್ರಣ್ಣ ಮುನವಳ್ಳಿ, ಭಾರತಿ ಜಂಬಗಿ, ರಾಜೇಶ್ವರಿ ಪಾಟೀಲ, ಟಿ. ಈಶ್ವರ, ಎಲ್.ಸಿ. ಲಿಂಬಯ್ಯಸ್ವಾಮಿಮಠ ಮುಂತಾದವರು ಮಾತನಾಡಿದರು.  ಗದಗ ಜಿಪಂನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ರುದ್ರಯ್ಯ ಪುರಾಣಿಕಮಠ, ಗ್ರಾಪಂ ಅಧ್ಯಕ್ಷೆ ಮಾಲತಿ ಬಾರ್ಕಿ, ಪುಂಡಲೀಕ ಶಿರೂರ, ಚಂದ್ರಣ್ಣ ತಿಳುವಳ್ಳಿ, ಶಿವು ಕಬ್ಬೇರ, ಫಕ್ಕಿರೇಶ ಮ್ಯಾಟಣ್ಣವರ ಮುಂತಾದವರು ಉಪಸ್ಥಿತರಿದ್ದರು. ಬಿ.ಬಸವರಾಜಪ್ಪ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement