ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಸ್ತೆ ಸಾರಿಗೆ ನೌಕರರ ಮೇಲೆ ಒತ್ತಡ ಸಲ್ಲದು

Mainashree
Updated On : 20 Nov 2013, 11:57 am

ಕನ್ನಡಪ್ರಭ ವಾರ್ತೆ, ಗದಗ, ನ. 19
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಸದಾ ಸಾರ್ವಜನಿಕರೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಒತ್ತಡದಲ್ಲಿರುತ್ತಾರೆ. ಆದರೆ, ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕಾರ್ಮಿಕ ಹಾಗೂ ನೌಕರರ ಮೇಲೆ ಸಾಕಷ್ಟು ಒತ್ತಡ ಹೇರುವುದು ಅಸೌಭ್ಯವಾಗಿ ವರ್ತಿಸುವುದು ಸರಿಯಲ್ಲ ಎಂದು ಅಖಿಲ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮಹಾಮಂಡಳದ ಗೌರವಾಧ್ಯಕ್ಷ ವೆಂಕಟೇಶ ದಾಸರ ಹೇಳಿದರು.
ಈಚೆಗೆ ಗದಗ ವಿಭಾಗದಿಂದ ದುರ್ಗಾವಿಹಾರ ಸಭಾಂಗಣದಲ್ಲಿ ಜರುಗಿದ ನೌಕರರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಧಿಕಾರಿಗಳು ನೌಕರರೊಂದಿಗೆ ಸೌಜನ್ಯದಿಂದ ನಡೆದುಕೊಂಡು ಸಾರಿಗೆ ಸಂಸ್ಥೆಯನ್ನು ಬಲಪಡಿಸಬೇಕು. ನೌಕರರೂ ಸಂಸ್ಥೆಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು.  ಗದಗ ವಿಭಾಗದಲ್ಲಿ ಸಾಕಷ್ಟು ಹಳೆ ಬಸ್‌ಗಳಿರುವುದರಿಂದ ಸಾರ್ವಜನಿಕರಿಗೆ ಹಾಗೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ತೊಂದರೆಯಾಗುತ್ತಲಿದ್ದು, ಗದಗ ವಿಭಾಗಕ್ಕೆ ಹೊಸ ಬಸ್ಸುಗಳನ್ನು ಸರ್ಕಾರ ಮಂಜೂರು ಮಾಡುವುದು ಅವಶ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ವಿಭಾಗದ ಅಧ್ಯಕ್ಷ ಎನ್.ಎಚ್. ಕಳಸಣ್ಣವರ, ಗದಗ ವಿಭಾಗದ ನೌಕರರ ಮಹಾಮಂಡಳಕ್ಕೆ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಈ.ಎಸ್. ಕಳಸಗೊಂಡ ಎಂ.ಎಸ್. ಜೋಗಿನ, ಸಂತೋಷ ಕುಲಕರ್ಣಿ, ಜಗದೀಶ ಆದಿ ಇವರನ್ನು ಸಭೆಯಲ್ಲಿ ಆಯ್ಕೆಗೊಳಿಸಿದರು. ಬಸವಣ್ಣಯ್ಯ ಹಿರೇಮಠ ಮಾತನಾಡಿದರು. ಆರ್.ವಿ. ಕುರಿ, ಎಂ.ಎ.ಸಿದ್ದಾಪುರ, ಎಸ್.ಜಿ. ಮುಧೋಳೆ, ಎಸ್.ಎಸ್. ದಾಟನಾಳ, ಎಂ.ಎಂ. ಕರ್ನಾಚಿ, ಸಿ.ಎ. ಕುಂಬಾರ, ಆರ್.ಜಿ. ಅರಮನಿ, ಯು.ಎ. ಬೇವಿನಮರದ, ಆರ್.ಎಚ್. ಭಂಡಾರಿ, ಎಸ್.ಬಿ. ಖಟವಟೆ, ಆರ್.ಬಿ. ಗುಜರತ್ತಿ, ಎನ್.ವಿ. ಹೆಬ್ಬಾಳ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಚ್. ಕಟ್ಟಿ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement