ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶೀಲ ಶಂಕಿಸಿ ಪತ್ನಿ ಕೊಲೆಗೈದ ಪತಿರಾಯ

Mainashree
Updated On : 20 Nov 2013, 11:57 am

ನರಗುಂದ:  ಹೆಂಡತಿಯ ಶೀಲ ಶಂಕಿಸಿ ಗಂಡನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಗ್ಗೆ ಪಟ್ಟಣದ ಜನತಾ ಕಾಲೋನಿಯಲ್ಲಿ ಜರುಗಿದೆ. ಕೊಲೆಯಾದ ಮಹಿಳೆಯನ್ನು ಹನುಮವ್ವ (30) ಎಂದು ಗುರುತಿಸಲಾಗಿದೆ.
ಆರೋಪಿ ರೋಣ ತಾಲೂಕಿನ ಕೌಜಗೇರಿ ಗ್ರಾಮದ ಯಮನಪ್ಪ ಚಿಕ್ಕನಡೆತಯವರ ತಂದೆ ಪಟ್ಟಣದ ನೀರಾವರಿ ಇಲಾಖೆಯಲ್ಲಿ ಸೇವ ಸಲ್ಲಿಸುತ್ತಿದ್ದ, ಇವರ ತಂದೆ ನಿವೃತ್ತಿ ಹೊಂದಿ ನಿಧನರಾದ ನಂತರ ಸ್ವಂತ ಲಾರಿ ಮಾಡಿಕೊಂಡು ನರಗುಂದ ಪಟ್ಟಣದ ಜನತಾ ಕಾಲೋನಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದನು. ಗದುಗಿನ ಹನುಮವ್ವ ಎಂಬುವಳನ್ನು ಮದುವೆಯಾಗಿದ್ದ. ನಂತರ ದಿನಗಳಲ್ಲಿ ಸಂಶಯದಿಂದ ಹನುಮವ್ವ ಅನೈತಿಕ ಸಂಬಂಧದ ಕುರಿತು ಹಲವು ಬಾರಿ ಹೆಂಡತಿಗೆ ತಿಳುವಳಿಕೆ ಹೇಳಿದರೂ ಕೇಳದೇ ಇದ್ದಾಗ ಹೆಂಡತಿ ಹನುಮವ್ವಳನ್ನು ಮಂಗಳವಾರ ಬೆಳಗ್ಗೆ ಇಬ್ಬರ ನಡುವೆ ಮಾತಿನ ಘರ್ಷಣೆ ಜರುಗಿ, ಯಮನಪ್ಪ ರೊಚ್ಚಿಗೆದ್ದು ಕೊಡಲಿಯಿಂದ ಹನುಮವ್ವಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯ ಸಿಪಿಐ ಎಸ್.ಆರ್. ಪಾಟೀಲ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement