ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

24ರಂದು ಸಮಾನ ಶಿಕ್ಷಣ ನೀತಿಗಾಗಿ ಜನಜಾಗೃತಿ ಆಂದೋಲನ

Lingaraj Badiger
Updated On : 21 Nov 2013, 12:00 pm

ಗದಗ: ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ವ್ಯತಿರಿಕ್ತ ಶೈಕ್ಷಣಿಕ ಪದ್ಧತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಾಮರ್ಥ್ಯಕ್ಕೆ ತಕ್ಕ ಶಿಕ್ಷಣ ದೊರಯದೇ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಯಕರ್ನಾಟಕ ಸಂಘಟನೆಯ ವತಿಯಿಂದ ಏಕರೂಪ ಸಮಾನ ಶಿಕ್ಷಣ ನೀತಿಗಾಗಿ ಆಗ್ರಹಿಸಿ ಜನಜಾಗೃತಿ ಜನಾಂದೋಲನ ಹಮ್ಮಿಕೊಳ್ಳಲಾಗಿದ್ದು ನ. 24 ರಂದು ನಗರಕ್ಕೆ ಶೈಕ್ಷಣಿಕ ತೇರು ಆಗಮಿಸಲಿದೆ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಕಾಂತ ಚವ್ಹಾಣ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಪ್ರತ್ಯೇಕ ಶೈಕ್ಷಣಿಕ ಪದ್ಧತಿಯಿಂದಾಗಿ ಶ್ರೀಮಂತ ಮತ್ತು ಬಡಜನರ ಮಧ್ಯದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಅಂತರ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಏಕರೂಪ ಸಮಾನ ಶಿಕ್ಷಣ ನೀತಿಯಿಂದ ನಾಡಿನ ಅಭಿವೃದ್ಧಿ ಸಾಧ್ಯವಾಗಲಿದೆ. ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಸಂಘಟನೆಯ ಪರವಾಗಿ ಈಗಾಗಲೇ ರಾಜ್ಯದ 25 ಜಿಲ್ಲೆಗಳಲ್ಲಿ ಜನಾಂದೋಲನದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಯಶಸ್ವಿಯಾಗಿ ಸಾಗಿದ್ದು, ಸಮಾಜದ ನಿರ್ಮಾಣಕ್ಕಾಗಿ ಏಕರೂಪ ಶಿಕ್ಷಣ ಪದ್ಧತಿ ಅವಶ್ಯ ಎನ್ನುವುದನ್ನು ಸಾಮಾನ್ಯ ಜನರಿಗೆ ತಿಳಿಹೇಳುವ ಕಾರ್ಯ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.  ನ. 24 ರಂದು ಬೆಳಗ್ಗೆ 11 ಗಂಟೆಗೆ ನಗರದ ಮುನ್ಸಿಪಲ್ ಕಾಲೇಜು ಆವರಣದಿಂದ ಶಿಕ್ಷಣ ತೇರಿನ ಮೆರವಣಿಗೆ ಆರಂಭಗೊಳ್ಳಲಿದ್ದು, ಗಾಂಧಿವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಹತ್ತಿಕಾಳ ಕೂಟ, ದತ್ತಾತ್ರೇಯ ರಸ್ತೆಯ ಮೂಲಕ ಡಂಬಳ ನಾಕಾದ ವರೆಗೆ ಮೆರವಣಿಗೆ ಜರುಗಲಿದೆ. ಮೆರವಣಿಗೆಯಲ್ಲಿ ನಂದಿವೇರಿ ಮಠದ ಶಿವಕುಮಾರ ಶ್ರೀಗಳು, ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವೀರಣ್ಣ ಕೊರಳ್ಳಿ, ಹಾವೇರಿ ಲೋಕಸಭಾ ಕ್ಷೇತ್ರದ ಯುವಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ, ರಾಜ್ಯ ಗೌರವಾಧ್ಯಕ್ಷ ಈಶಪ್ಪ ನಾಯ್ಕರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ, ಪ್ರೊ. ವೆಂಕಟೇಶ ಕಟ್ಟಿಮನಿ, ಎಸ್.ಎ. ಮಕಾಂದಾರ, ರವಿಕಾಂತ ಅಂಗಡಿ. ಐ.ಎಸ್. ಪೂಜಾರ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದರು. ಈಶಪ್ಪ ನಾಯ್ಕರ, ರಮೇಶ ಕುರ್ತಕೋಟಿ, ಬಸವರಾಜ ಗಡ್ಡೆಪ್ಪನವರ, ಮೈಲಾರಪ್ಪ ಕೋಟೆಪ್ಪನವರ, ಪರಮೇಶ ರಾಠೋಡ, ಜೋಶೆಫ್ ಉದೋಜಿ, ಬಾಲರಾಜ ಅರಬದ, ರಾಘವೇಂದ್ರ ಶ್ಯಾವಿ, ರಾಜೇಶ ಮುಟಗಾರ, ಕೃಷ್ಣ ಹುಣಸಿಕಟ್ಟಿ, ವೀರೆಶ ಹಿರೇಮಠ, ಅಬ್ದುಲ್ ನರಸಾಪುರ, ಸುರೇಶ ಮೇದಾರ, ಕಿರಣ ಹಿಡ್ಕಿಮಠ, ಹಾಲಪ್ಪ ವರವಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement