ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದಾರ್ಶನಿಕರ ತತ್ವಾದರ್ಶ ಪಾಲಿಸಿ

Lingaraj Badiger
Updated On : 21 Nov 2013, 11:59 am

ಗದಗ: ಮಾನಸಿಕ ಅಶಕ್ತತೆಯ ಕಾರಣ, ಸಮಾಜದಲ್ಲಿ ಮೌಢ್ಯಗಳ ಘನೀಕರಣವಾಗುತ್ತಿದ್ದು, ಇದನ್ನೆಲ್ಲಾ ಹೋಗಲಾಡಿಸಬೇಕಾದಲ್ಲಿ ಕನಕದಾಸರಂತಹ ದಾರ್ಶನಿಕರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ಗದಗ ನಗರದ ಕನಕಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೇಷ್ಠ ದಾರ್ಶನಿಕ, ಕವಿ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಸವಣ್ಣ, ಕನಕ, ಅಲ್ಲಪ್ರಭುಗಳಂತಹ ಮಹಾನ್ ವ್ಯಕ್ತಿಗಳ ಸಂದೇಶವನ್ನು ಸಮರ್ಥವಾಗಿ ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ನಡೆಯಬೇಕಿದೆ. ಸಮಾಜದಲ್ಲಿ ಇಂದು ಮಾನಸಿಕ, ಆಧ್ಯಾತ್ಮಿಕ ವೈರುಧ್ಯಗಳು ಕಂಡು ಬರುತ್ತಿವೆ. ದಾರ್ಶನಿಕರ ಜಯಂತಿಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗುತ್ತಿರುವುದು ವಿಷಾದಕರವಾಗಿದೆ. ಅವರು ಹಾಕಿ ಕೊಟ್ಟ ಮಾರ್ಗದರ್ಶನ ಪ್ರತಿಯೊಬ್ಬರ ಜೀವನದಲ್ಲಿ ನಿತ್ಯ ನೂತನವಾಗಬೇಕು ಅಂದಾಗ ಮಾತ್ರ ನೆಮ್ಮದಿಯ ಬದುಕು ರೂಪಿಸಲು ಸಾಧ್ಯ ಎಂದರು.   ಕೆ.ಬಿ. ತಳಗೇರಿ ಹಾಗೂ ಡಾ. ಶರಣಬಸವ ವೆಂಕಟಾಪೂರ ಅವರಿಂದ ಉಪನ್ಯಾಸ ಜರುಗಿತು. ಬೆಳಗ್ಗೆ ನಗರದ ಕಿತ್ತೂರ ಚನ್ನಮ್ಮ ವೃತ್ತದಿಂದ, ಸಮಾರಂಭದ ಸ್ಥಳ ಕನಕ ಭವನದವರೆಗೂ ಕನಕದಾಸರ ಭಾವಚಿತ್ರ ಹಾಗೂ ವಿವಿಧ ರೂಪಕಗಳ ಮೆರವಣಿಗೆ ನಡೆಯಿತು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಅಧ್ಯಕ್ಷ ಹನಮಪ್ಪ ಇಂಗಳಹಳ್ಳಿ, ಕನಕ ಭವನ ಸಮಿತಿಯ ಗೌರವ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ವಾಸಣ್ಣ ಕುರುಡಗಿ, ಅನೀಲ ಶಿಂಗ್ಟಾಲಕೇರಿ, ರಾಮಣ್ಣ ಹೂವಣ್ಣವರ, ಕಮಲಾ ಹಾದಿಮನಿ, ರುದ್ರಮ್ಮ ಕೆರಕಲಮಟ್ಟಿ, ರೇಣುಕಾ ಪೂಜಾರ, ಡಿಸಿ ಎನ್.ಎಸ್. ಪ್ರಸನ್‌ಕುಮಾರ, ಸಿಇಓ ವೀರಣ್ಣ ತುರಮರಿ, ಕನ್ನಡ ಸಂಸ್ಕೃತಿ ಇಲಾಖೆಯ ಬನಶಂಕರಿ ಅಂಗಡಿ, ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ, ತಹಸೀಲ್ದಾರ್ ಜಯಶ್ರೀ ಶಿಂತ್ರೆ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. ಅಪರ ಜಿಲ್ಲಾಧಿಕಾರಿ ನಾಗರಾಜ ಸ್ವಾಗತಿಸಿದರು. ಕುಮಾರೇಶ್ವರ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತ ಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement