ನುಡಿಹಬ್ಬ: ಇಂದು ಉಪನ್ಯಾಸ
ಗದಗ: ಗದಗ ತಾಲೂಕು ಕಸಾಪ ನವೆಂಬರ್ ತಿಂಗಳಾದ್ಯಂತ ನಡೆಯುತ್ತಿರುವ ನುಡಿಹಬ್ಬ ಕಾರ್ಯಕ್ರಮದ ಅಂಗವಾಗಿ ಜ್ಞಾನನಪೀಠ ಪ್ರಶಸ್ತಿ ಪುರಸ್ಕೃತರ ಕುರಿತು ಉಪನ್ಯಾಸಗಳನ್ನು ವಿವಿಧ ಪಪೂ ಕಾಲೇಜುಗಳಲ್ಲಿ ಏರ್ಪಡಿಸಿದೆ. ನ. 21 ರಂದು ಮಧ್ಯಾಹ್ನ 3 ಕ್ಕೆ ಬೆಟಗೇರಿಯ ಹುಯಿಲಗೋಳ ರಸ್ತೆಯಲ್ಲಿರುವ ಮಹಾರಾಣಾ ಪ್ರತಾಪಸಿಂಹ ಪಪೂ ಕಾಲೇಜಿನಲ್ಲಿ ಶಿವರಾಮ ಕಾರಂತರ ಬದುಕು ಬರಹ ಈ ವಿಷಯದ ಕುರಿತು ಉಪನ್ಯಾಸ ಜರುಗುವುದು. ಸಿ.ಎಸ್.ಪಾಟೀಲ ಪ್ರಾಥಮಿಕ ಶಾಲೆಯ ಶಿಕ್ಷಕ ಡಾ. ರಾಮಚಂದ್ರ ಹಂಸನೂರ ಉಪನ್ಯಾಸ ನೀಡುವರು. ಮತ್ತು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ, ಕಾಲೇಜಿನ ಪ್ರಾಚಾರ್ಯ ವೈ.ಆರ್. ಹೀರೆಗೌಡರ ಅತಿಥಿಗಳಾಗಿ ಆಗಮಿಸುವರು. ಮಹಾರಾಣಾ ಪ್ರತಾಪಸಿಂಹ ಸಂಸ್ಥೆಯ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಅಧ್ಯಕ್ಷತೆ ವಹಿಸುವರು. ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ಉಪಸ್ಥಿತರಿರುವರು. ಸಾಹಿತ್ಯ ಪರಿಷತ್ತಿ ಪದಾಧಿಕಾರಿಗಳು, ಆಜೀವ ಸದಸ್ಯರು, ಸಾಹಿತ್ಯಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ ಮತ್ತು ಕೋಶಾಧ್ಯಕ್ಷ ಪ್ರಾ. ಬಿ.ಜಿ. ಹಿರೇಮಠ, ಪ್ರೊ. ದತ್ತಪ್ರಸನ್ನ ಪಾಟೀಲ ಪ್ರಕಟಣೆಯ ಮೂಲಕ ಕೋರಿದ್ದಾರೆ.