ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೂಪ್‌ಚಂದ್ ಜೈನ್ ನಿಧನ

Lingaraj Badiger
Updated On : 21 Nov 2013, 12:11 pm

ಮುಂಡರಗಿ: ವ್ಯಾಪಾರಸ್ಥರು, ಮೂಲತಃ ರಾಜಸ್ಥಾನದವರಾದ ರೂಪ್‌ಚಂದ್ ಜೈನ್ (72) ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದರು. ಇವರ ನಿಧನಕ್ಕೆ ಮಾಜಿ ಶಾಸಕ ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಪಾರಸ್‌ಮಲ್ ಮೆಹೆತಾ, ಗೌತಮ್‌ಚಂದ್ ಚೋಪ್ರಾ, ನಾರಾಯಣಪ್ಪ ಇಲ್ಲೂರ, ಎಸ್.ವಿ. ಪಾಟೀಲ, ಆರ್.ಎಂ. ತಪ್ಪಡಿ, ಸುರೇಶ ಕ್ಯಾದಿಗಿಹಳ್ಳಿ, ವಿ.ಟಿ. ಮೇಟಿ, ಪ್ರಕಾಶ ಪಾಟೀಲ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ  
ಮುಂಡರಗಿ: ಗುಣಮಟ್ಟದ ಶಿಕ್ಷಣಕ್ಕಾಗಿ ನ. 6 ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಪ್ರಾರಂಭಿಸಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಂಡರಗಿ ತಾಲೂಕಿನ ಶೈಕ್ಷಣಿಕ ಬ್ಲಾಕ್‌ನ 13 ಕ್ಲಸ್ಟರ್‌ಗಳ ವ್ಯಾಪ್ತಿಯಲ್ಲಿ 2 ಹಂತದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಹಾಗೂ ಕುಟುಂಬದ ಸಮೀಕ್ಷೆ ನಡೆಸುತ್ತಿದ್ದು, ಕೊನೆಯ ದಿನವಾದ ಭಾನುವಾರವೂ ಸಹ ಶಿಕ್ಷಕರು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಗಣತಿದಾರರನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಎಂ.ಎ. ರಡ್ಡೇರ, ನ. 6 ಹಾಗೂ 7 ರಂದು ಶಾಲಾ ಹಂತದಲ್ಲಿ ಸಮೀಕ್ಷೆ ನಡೆದಿದ್ದು, ನ. 13 ರಿಂದ 17ರ ವರೆಗೆ 2ನೇ ಹಂತದಲ್ಲಿ ಕುಟುಂಬ ಸಮೀಕ್ಷೆ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಸಿದ್ದು, ಮುಂಡರಗಿ ಪಟ್ಟಣದಲ್ಲಿ 46 ಶಿಕ್ಷಕರು, 23 ಇತರೆ ಇಲಾಖೆ ಸಿಬ್ಬಂದಿ ಹಾಗೂ 23 ಎನ್‌ಜಿಒ ಪ್ರತಿನಿಧಿಗಳು ಪಾಲ್ಗೊಂಡು ಸುಮಾರು 5500 ಕುಟುಂಬಗಳ ಸಮೀಕ್ಷೆ ನಡೆಸಿರುವುದಾಗಿ ತಿಳಿಸಿದರು.  ಜಿಲ್ಲಾ ಡೈಯಟ್‌ನ ಹಿರಿಯ ಉಪನ್ಯಾಸಕ ಎಸ್.ಎನ್. ಹಳ್ಳಿಗುಡಿ, ಪುರಸಭೆ ಸದಸ್ಯ ಮುದಿಯಪ್ಪ ಕುಂಬಾರ, ಬಿ.ಆರ್.ಪಿ. ಎಚ್.ಜಿ. ಗದ್ದಿಗೌಡ್ರ, ಸಿ.ಆರ್.ಪಿ. ಬಿ.ವಿ. ನಂದಗಾವಿ, ಆರ್.ಬಿ. ಮುಳ್ಳೊಳ್ಳಿ, ಎಂ.ಟಿ. ಮಾಳಾಪುರ, ಗಣತಿದಾರರಾದ ವಿ.ಜಿ. ಡೊಳ್ಳಿನ, ಬಿ.ಎಸ್. ಬಳಗಾನೂರ, ಆರ್.ಎಸ್. ಚವಡಿ, ಎಸ್.ಕೆ. ಕಂಚಗಾರ, ಎ.ಎ. ಓದಿಸೋಮಠ, ಸಿ.ಎ. ಲಾಲ್‌ಪಡಿ, ಎಚ್.ಎಸ್. ಗುಜ್ಜಲ ಮುಂತಾದವರು ಉಪಸ್ಥಿತರಿದ್ದರು.
ಭಾರತರತ್ನ ಪುರಸ್ಕೃತರಿಗೆ ಅಭಿನಂದನೆ
ಗದಗ:   ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಗೌರವಕ್ಕೆ ಪಾತ್ರರಾದ ಕನ್ನಡದ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಪ್ರಶಸ್ತಿ ದೊರೆತಿರುವುದು ಇಡೀ ದೇಶದ ಜನತೆಗೆ ಸಿಕ್ಕ ಗೌರವವಾಗಿದೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಅಭಿನಂದಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರೊ. ಸಿ.ಎನ್.ಆರ್. ರಾವ್ ಹಾಗೂ ಸಚಿನ್ ತೆಂಡೂಲ್ಕರ್‌ಗೆ ಕೇಂದ್ರ ಸರ್ಕಾರ  ಭಾರತ ರತ್ನ ಪ್ರಶಸ್ತಿ ನೀಡಿರುವುದು ರಾಜ್ಯ ಹಾಗೂ ದೇಶದ ಜನತೆಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಶತಾಯುಷಿ ನೀಲಮ್ಮ ಮಾಸ್ತಗಟ್ಟಿ ನಿಧನ
ಗಜೇಂದ್ರಗಡ:  ಸಮೀಪದ ನೆಲ್ಲೂರ ಗ್ರಾಮದ ನಿವಾಸಿ ಶತಾಯುಷಿ ನೀಲಮ್ಮ ಮಾಸ್ತಗಟ್ಟಿ (110) ಈಚೆಗೆ ನಿಧನರಾದರು. ಮೃತರಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದರು.

ಧರ್ಮ ಮಾರ್ಗದಲ್ಲಿ ನಡೆದರೆ ಶಾಂತಿ: ಶಾಸಕ ಜಿ.ಎಸ್. ಪಾಟೀಲ
ರೋಣ: ಯೋಗ, ಧ್ಯಾನ, ದಾನಗಳಿಂದ, ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದರಿಂದ ನೆಮ್ಮದಿ ಸಿಗುತ್ತದೆ. ಜತೆಗೆ ಭಾವೈಕ್ಯತೆ ಭಾವನೆ ಮೂಡುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.  ಅವರು ತಾಲೂಕಿನ ಹಿರೇಮಣ್ಣೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ತಾಯಮ್ಮದೇವಿ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ಈಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.   ಜಾತ್ಯತೀತ, ನೈತಿಕ ಹಾಗೂ ತಾತ್ವಿಕ ತಳಹದಿಯ ಮೇಲೆ ಧರ್ಮ ನಿಂತಿದೆ. ಎಲ್ಲ ನಾಗರಿಕರು ಪರಸ್ಪರ ಪ್ರೀತಿ, ವಿಶ್ವಾಸ, ಧರ್ಮದಿಂದ ನಡೆಯಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು. ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಶ್ರೀಗಳು ಆಶೀರ್ವಚನ ನೀಡಿದರು. ಸಚಿವ ಎಚ್.ಕೆ. ಪಾಟೀಲ, ರಂಗರಾಜ ವನದುರ್ಗ, ರಾಮಣ್ಣ ಫಲದೊಡ್ಡಿ, ಸಣ್ಣವೀರಪ್ಪ ಹಳ್ಳೆಪ್ಪನವರ, ಯಲ್ಲಪ್ಪ ಚೊಳಣ್ಣವರ, ಐ.ಎಸ್. ಪಾಟೀಲ, ಬಸವಂತಪ್ಪ ತಳವಾರ, ಸದಾಶಿವಯ್ಯ ಪುರಾಣಿಕಮಠ, ಷಡಕ್ಷರಯ್ಯ ಹಿರೇಮಠ, ಬಸಯ್ಯಸ್ವಾಮಿ ನೀಲಕಂಠಮಠ, ವೀರಯ್ಯ ನೆಲ್ಲೂರ, ದೇವಕ್ಕ ಕುರಿಯವರ, ಪರಪ್ಪ ಹೂವಿನಹಾಳ, ಬಸವರಾಜ ಕಪ್ಪಲಿ, ರತ್ನಾಕರ ಕುಕನೂರ, ಭೀಮಪ್ಪ ತಳವಾರ, ರಾಮಪ್ಪ ಓಲೇಕಾರ, ಬಸವರಾಜ ಸಂಗಳದ, ಶಿವರಾಜ ಹುಲ್ಲೂರ, ಶಿವಪ್ಪ ಓಲೇಕಾರ, ಅಂದಪ್ಪ ಜಿಗಳೂರ, ಮಾಲಿಂಗಪ್ಪ ಓಲೇಕಾರ ಮುಂತಾದವರು ಉಪಸ್ಥಿತರಿದ್ದರು. ಜೆ.ಎಸ್. ತಳವಾರ ಸ್ವಾಗತಿಸಿದರು. ಅಂಕಲೆಪ್ಪ ಓಲೇಕಾರ ನಿರೂಪಿಸಿದರು. ನಾಗರಾಜ ಓಲೇಕಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement