ಸಂತರ ಸಂದೇಶ ದಾರಿ ದೀಪ: ಪಾಟೀಲ್
ರೋಣ: ಕನಕದಾಸರ ಸಂದೇಶ ನಮಗೆ ದಾರಿ ದೀಪವಾಗಿದೆ. ಅವುಗಳನ್ನು ಅಳವಡಿಸಿಕೊಂಡಾಗ ಬದುಕು ಉಜ್ವಲಗೊಳ್ಳುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಬುಧವಾರ ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಪಂ ಪುರಸಭೆ, ತಾಲೂಕಿನ ವಿವಿಧ ಇಲಾಖೆ ಮತ್ತು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಂತ ಶ್ರೇಷ್ಠ ಕನಕದಾಸರ 526ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನಕದಾಸರು ಅನೇಕ ತತ್ವ, ಉಪದೇಶಗಿಳಿಂದ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು. ಹಿರಿಯ ನ್ಯಾಯವಾದಿ ವಿ.ಆರ್. ಗುಡಿಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಜಿ.ಬಿ. ಕಲ್ಲನಗೌಡ್ರ ಉಪನ್ಯಾಸ ನೀಡಿದರು. ತಾಪಂ ಸದಸ್ಯೆ ಗಾಯತ್ರಿ ನಾಗನೂರ ಮಾತನಾಡಿದರು. ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ಸಿದ್ದಾರೂಢ ಮಠದಿಂದ ಪ್ರಾರಂಭಗೊಂಡ ಕನಕದಾಸರ ಭಾವಚಿತ್ರ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ, ಸದಸ್ಯ ಅಂದಪ್ಪ ಬಿಚ್ಚೂರ, ಶಿವಕುಮಾರ ಸಾಲಮನಿ, ರಾಮಕೃಷ್ಣ ಚೌವ್ಹಾಣ, ಪುರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ಸದಸ್ಯೆ ಕವಿತಾ ಕೊಪ್ಪದ, ಸಿ.ಎಂ. ಕೋರಿ, ಮುದಕಪ್ಪ ಮುಗಳಿ, ಶಿಕ್ಷಕ ಸಿ.ಕೆ. ಕೇಸರಿ, ಸುಭಾಸ ನೀಲಗಾರ, ಸುರೇಶ ಜಗ್ಗಲ, ಈರಪ್ಪ ತಾಳಿ, ಶರಣಪ್ಪ ಡೊಣ್ಣಿಗುಡ್ಡ, ಸಿಡಿಪಿಒ ಬಿ.ಎಸ್. ಮೋಕಾಶಿ, ಬಿಇಒ ಡಿ.ಐ. ಅಸುಂಡಿ, ಎನ್.ಎಸ್. ಕೂಡಲ, ಎಸ್.ಎ. ಸೂಡಿಶೆಟ್ಟರ ಮುಂತಾದವರು ಉಪಸ್ಥಿತರಿದ್ದರು. ತಹಸೀಲ್ದಾರ್ ಎ.ಜಿ. ಪಂಡಿತ ಸ್ವಾಗತಿಸಿದರು. ಎಸ್.ವೈ. ಯಡಳ್ಳಿ ನಿರೂಪಿಸಿದರು. ಡಾ. ಹುಲಗನ್ನವರ ವಂದಿಸಿದರು.