ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕನಕದಾಸರು ಅಗ್ರಗಣ್ಯರು: ವಾಲ್ಮೀಕಿ

Lingaraj Badiger
Updated On : 22 Nov 2013, 11:58 am

ಗದಗ: ಭಕ್ತ ಕನಕದಾಸರು ಕರ್ನಾಟಕ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ಪಪೂ ವಿಭಾಗದ ಉಪನ್ಯಾಸಕ ಎಸ್.ಆರ್. ವಾಲ್ಮೀಕಿ ಹೇಳಿದರು.
ಅವರು ಬುಧವಾರ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ್ ಶಿಕ್ಷಣ ಸಂಸ್ಥೆಯ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕನಕದಾಸರ 526ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರು ಏನಿದ್ದರೇನು ಎಲ್ಲವೂ ನಶ್ವರ ಎಂಬ ಭಾವನೆ ತಾಳಿ ದಾಸನಾಗಿ ದೀಕ್ಷೆ ಪಡೆದು ಹರಿಸೇವೆ ಮಾಡುತ್ತಾ ಪದಗಳನ್ನು ಹಾಡುತ್ತಾ ವ್ಯಾಸರಾಯರ ಬಳಿಗೆ ಹೋಗಿ ಶಿಷ್ಯತ್ವವನ್ನು ಕೇಳಿದಾಗ ಅವರು ಇವರ ಪಾಂಡಿತ್ಯ, ಭಕ್ತಿ, ಶಕ್ತಿ ಗುರುತಿಸಿ ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು. ಕನಕದಾಸರ ಜೀವನದ ಅನೇಕ ಮೈಲಿಗಲ್ಲುಗಳ ಬಗ್ಗೆ ವಿವರಿಸುತ್ತ ಉಡುಪಿಯ ಶ್ರೀಕೃಷ್ಣನ ದೇವಸ್ಥಾನದಲ್ಲಿನ ಕನಕನ ಕಿಂಡಿಯ ಮಹತ್ವ ಕುರಿತು ಮಕ್ಕಳಿಗೆ ತಿಳಿಸಿದರು.  ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ವೈ.ಆರ್. ಹಿರೇಗೌಡರ ಸ್ವಾಗತಿಸಿದರು. ಡಿ.ಎಸ್. ನಾಯಕ ನಿರೂಪಿಸಿದರು. ಎ.ಎ. ಹದ್ಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement