ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಳೆ ಸಾಯಿಬಾಬಾ ಜನ್ಮದಿನ ಆಚರಣೆ, ಮೆರವಣಿಗೆ

Lingaraj Badiger
Updated On : 22 Nov 2013, 11:52 am

ನರಗುಂದ: ಸತ್ಯಸಾಯಿ ಸೇವಾ ಸಂಸ್ಥೆ ಗದಗ-ನರಗುಂದ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಗವಾನ ಸತ್ಯಸಾಯಿ ಬಾಬಾರವರ 88ನೇ ಜನ್ಮದಿನ ಆಚರಣೆ ನ. 23ರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಟಿ.ಎಂ. ರಸ್ತೆಯಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ಜರಗಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಸಾಯಿಬಾಬಾರ ಭಾವಚಿತ್ರ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಸತ್ಯಸಾಯಿ ಸೇವಾ ಸಮಿತಿ ಗದಗ ಜಿಲ್ಲಾಧ್ಯಕ್ಷ ಬಿ.ಎಂ. ಬಂದಕ್ಕನವರ ಅಧ್ಯಕ್ಷತೆ ವಹಿಸುವರು.
ಅಶೋಕ ಗುಡಿಸಾಗರ, ಡಾ. ಎಸ್.ಎಚ್. ಹುರಳಿ, ಡಾ. ಆದರ್ಶ ಪಡಿಯಾರ, ಗೋವಿಂದರಾಜ ಗುಡಿಸಾಗರ, ವಾಸಣ್ಣ ಬೋನಗೇರ, ಕೃಷ್ಣಮೂರ್ತಿ ಆನೇಗುಂದಿ, ತಾಲೂಕಿನ ಸತ್ಯಸಾಯಿ ಸೇವಾ ಸಮಿತಿ ಸರ್ವ ಸದಸ್ಯರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement