ಸಹಕಾರಿ ಕ್ಷೇತ್ರದಿಂದ ಹೆಚ್ಚಿದ ಕೀರ್ತಿ
ಮುಂಡರಗಿ: ಕಣಗಿನಹಾಳದಂತಹ ಚಿಕ್ಕಗ್ರಾಮದಲ್ಲಿ ಅನೇಕ ವರ್ಷಗಳ ಹಿಂದೆಯೇ ಸಿದ್ಧನಗೌಡ ಪಾಟೀಲರು ಸಹಕಾರಿ ಸಂಘವನ್ನು ಹುಟ್ಟು ಹಾಕುವ ಮೂಲಕ ಗದಗ ಜಿಲ್ಲೆ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಈಚಗೆ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರಿ ಯೂನಿಯನ್ ಗದಗ, ಸಹಕಾರಿ ಇಲಾಖೆ ಗದಗ, ಕೆಸಿಸಿ ಬ್ಯಾಂಕ್ ಧಾರವಾಡ, ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಗಂಗಾಪುರ, ಪಿ.ಎಲ್.ಡಿ. ಬ್ಯಾಂಕ್ ಮಂಡರಗಿ, ಟಿ.ಎ.ಪಿ.ಸಿ.ಎಂ.ಎಸ್. ಮುಂಡರಗಿ, ಮುಂಡರಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಇತರೆ ಸಹಕಾರಿ ಸಂಘಗಳ ಆಶ್ರಯದಲ್ಲಿ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 60ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಮಟ್ಟದಲ್ಲಿರುವ ಸಹಕಾರಿ ಬ್ಯಾಂಕ್ಗಳ ಮೂಲಕ ರೈತರು ಸಾಲ ಪಡೆಯುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಈ ಬ್ಯಾಂಕುಗಳಿಂದ ಪಡೆದ ಸಾಲದಲ್ಲಿ ಹೈನು ಉತ್ಪಾದನೆ, ಹಾಲಿನ ಕೇಂದ್ರ, ಪಡಿತರ ಆಹಾರಧಾನ್ಯ ವಿತರಣೆಯ ಅಂಗಡಿ ಸೇರಿದಂತೆ ಅನೇಕ ಉದ್ಯೋಗಗಳನ್ನು ಮಾಡಬಹುದು. ಇದರಿಂದ ರೈತರ ಬದುಕು ಸಹ ನೆಮ್ಮದಿಯ ಬದುಕಾಗುತ್ತದೆ. ರೈತರು ಸಹಕಾರಿ ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಬೇರೆ ರೈತರಿಗೆ ಅನುಕೂಲವಾಗುವಂತೆ ಮಾಡಿ ಕೊಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ್, ಎಸ್.ವಿ. ನಾಯಕ ಉಪನ್ಯಾಸ ನೀಡಿದರು. ಐ.ಎಸ್. ಪಾಟೀಲ, ಎಂ.ಎಫ್. ಕಲಗುಡಿ, ಸಿ.ಕೆ. ಮಾಳಶೆಟ್ಟಿ, ಸುನಿಲ್ ಜಿ. ಮಹಾಂತಶೆಟ್ಟರ, ಮಲ್ಲನಗೌಡ ತಿಮ್ಮನಗೌಡ್ರ ಹಾಗೂ ಎಲ್ಲ ವಿ.ಎಸ್.ಎಸ್. ಬ್ಯಾಂಕಿನ ಅಧ್ಯಕ್ಷರನ್ನು ಹಾಗೂ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.
ವೈ.ಎನ್. ಗೌಡರ್, ಕರಬಸಪ್ಪ ಹಂಚಿನಾಳ, ಹಾಲಪ್ಪ ಕಬ್ಬೇರಹಳ್ಳಿ, ಹಾಲಪ್ಪ ಉಳ್ಳಾಗಡ್ಡಿ, ವಿ.ಎಸ್. ಯರಾಶಿ, ರಂಗಪ್ಪ ಕ್ಯಾದಿಗಿಹಳ್ಳಿ, ಎಎಸ್.ಎಸ್. ಪದಕಿ, ಮಂಜುಳಾ ಶೀಗೆನಹಳ್ಳಿ, ಎಸ್.ಬಿ. ಬಾರಿಕಾಯಿ, ಯು.ಆರ್. ಕುಲಕರ್ಣಿ, ಸಾವಿತ್ರಿ ಕಡಿ, ಸುಮಾ ಹಿರೇಮಠ, ಬಿ.ಎಸ್. ಹಿರೇಗೌಡ್ರ, ವಿಜಯಕುಮಾರ ಶಿಳ್ಳಿನ, ಬಸವಂತಪ್ಪ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು. ಶಿವಕುಮಾರಗೌಡ ಪಾಟೀಲ ಸ್ವಾಗತಿಸಿದರು. ಡಾ. ನಿಂಗು ಸೊಲಗಿ ನಿರೂಪಿಸಿದರು. ನಾಗರಾಜ ವಂದಿಸಿದರು.