ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಟಿಪ್ಪು ಸುಲ್ತಾನ್ ಕೊಡುಗೆ ಅಪಾರ

Mainashree
Updated On : 23 Nov 2013, 11:05 am

ಕನ್ನಡಪ್ರಭ ವಾರ್ತೆ, ರೋಣ, ನ. 22
ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ, ನಾಡ ರಕ್ಷಣೆಗೆ ಪಣ ತೊಟ್ಟು ಹೋರಾಡಿದ ಮೈಸೂರು ಹುಲಿ ಟಿಪ್ಪುಸುಲ್ತಾನ್ ಕೊಡುಗೆ ನಾಡಿಗೆ ಅಪಾರವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಪಟ್ಟಣದ ಹೊಸ ಸಂತೆ ಬಜಾರ್ ಜಾಗೆಯಲ್ಲಿ ಪಟ್ಟಣದ ಟಿಪ್ಪು ಸುಲ್ತಾನ್ ಯುವಕ ಸಂಘದ ಆಶ್ರಯದಲ್ಲಿ ಈಚೆಗೆ ಟಿಪ್ಪು ಸುಲ್ತಾನ್ 263ನೇ ಜನ್ಮ ದಿನಾಚರಣೆ ಅಂಗವಾಗಿ ಜರುಗಿದ ಹಿಂದೂ, ಮುಸ್ಲಿಂ ಭಾವೈಕ್ಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯವಹಿಸಿದ್ದ ಗುಲಗಂಜಿ ಮಠದ ಗುರಪಾದ ಶ್ರೀಗಳು, ದರ್ಗಾ ಶರೀಫ ಸೈಯದ್‌ಶಾ ಸುಲೇಮಾನ ಸಾವಲಿ, ಕೊತಬಾಲ ಗಂಗಾಧರ ಶ್ರೀಗಳು ಆಶೀರ್ವಚನ ನೀಡಿದರು. ಮಿಥುನ್ ಪಾಟೀಲ, ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾಧ್ಯಕ್ಷ ಕೆ.ಐ. ಶೇಖ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಕುರಟ್ಟಿ ಮತ್ತು ಎಫ್.ಸಿ. ಚೇಗರಡ್ಡಿ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ಸದಸ್ಯೆ ನಾಜಬೇಗಂ ಯಲಿಗಾರ, ಮಂಜುನಾಥ ಹಾಳಕೇರಿ, ಖಾದರಸಾಬ್ ಸಂಕನೂರ, ಶಫಿಕ ಮೂಗನೂರ, ಬಸನಗೌಡ ಪಾಟೀಲ, ಯೂಸೂಫ್ ಇಟಗಿ, ಭವಾನಿ ಬೆಟಗೇರಿ, ವಿಶ್ವನಾಥ ಜಿಡ್ಡಿಬಾಗೀಲ, ಪೀರಸಾಬ್ ಮಾರನಬಸರಿ, ಅಪ್ಪು ಗಿರಡ್ಡಿ, ಸಂಜಯ ರಡ್ಡೇರ, ಸಂಗಪ್ಪ ನವಲಗುಂದ, ಬಸವರಾಜ ಕಿರೇಸೂರ, ಇನಾಯತ ತರಪದಾರ, ಮುನ್ನಾ ಕಂಪೌಂಡರ ಮುಂತಾದವರು ಉಪಸ್ಥಿತರಿದ್ದರು.
ಅಜೀಜ ಯಲಿಗಾರ ಸ್ವಾಗತಿಸಿದರು. ಗೌಸು ಪಿರನ್ನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement