ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿವೇಶನ, ಉದ್ಯೋಗ ನೀಡಿ: ಪ್ರತಿಭಟನೆ

Mainashree
Updated On : 23 Nov 2013, 11:06 am

ಗಜೇಂದ್ರಗಡ:  ಸಮೀಪದ ಗೋಗೇರಿ ಗ್ರಾಪಂ ವ್ಯಾಪ್ತಿಯ ಮಾಟರಂಗಿ, ನಾಗರಸಕೊಪ್ಪ ತಾಂಡಾ ಜನತೆ ಮನೆ, ನಿವೇಶನ, ಉದ್ಯೋಗಕ್ಕೆ ಆಗ್ರಹಿಸಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಕಾರ್ಯಕರ್ತರು ಗ್ರಾಪಂ ಕಾರ್ಯಾಲಯ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೋಣ ತಾಲೂಕು ಅಧ್ಯಕ್ಷ, ಬಸವರಾಜ ಶೀಲವಂತರ, ಸರ್ಕಾರ ವಿವಿಧ ವಸತಿ ಯೋಜನೆಯಲ್ಲಿ ಸಹಾಯಧನ ಕೋರಿ ಮನೆ ನಿರ್ಮಿಸಲು ಹಲವಾರು ಬಾರಿ ಹೋರಾಟ ಮಾಡಿ ಅರ್ಜಿ ಸಲ್ಲಿಸಿದ್ದರೂ ಗ್ರಾಪಂ ಅಧ್ಯಕ್ಷರ ಕೀಳುಮಟ್ಟದ ರಾಜಕೀಯ, ಹಣ ದಾಹದಿಂದ ಬಡವರಿಗೆ ಮನೆ ಸಿಗದ ಪರಿಸ್ಥಿತಿ ಉಂಟಾಗಿದೆ. ದುಡ್ಡು ಕೊಟ್ಟರೆ ಮಾತ್ರ ಮನೆ ಹಾಕುತ್ತೇನೆ. ಚುನಾವಣೆಯಲ್ಲಿ ದುಡ್ಡು ಹಂಚಿ ಗೆದ್ದಿದ್ದೇನೆ. ಅದನ್ನು ತೆಗೆಯುವುದು ಹೇಗೆ ಎಂದು ಮನೆ ಕೇಳಲು ಹೋದವರಿಗೆ ಉತ್ತರಿಸುತ್ತಿರುವ ಅಧ್ಯಕ್ಷರ ಹಣದಾಸೆ ಎಷ್ಟು ಇದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಆರೋಪಿಸಿದರು. ಮಾಟರಂಗಿ ಗ್ರಾಮ ಘಟಕದ ಕರಿಯಮ್ಮ ಗುರಿಕಾರ, ನಾಗರಸಕೊಪ್ಪ ತಾಂಡಾದ ವಿಜಯ ರಾಠೋಡ ಮುಂತಾದವರು ಮಾತನಾಡಿ, ನಿವೇಶನ ಕಲ್ಪಿಸುವುದರ ಜತೆಗೆ ಪಂಚಾಯಿತಿ ಅಧ್ಯಕ್ಷ ಎಚ್.ಎಚ್. ಕಮ್ಮಾರ ರಾಜಿನಾಮೆ ನೀಡುವವರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸುತ್ತೇವೆ ಎಂದರು. ಧರಣಿ ನಿರತ ಸ್ಥಳಕ್ಕೆ ತಾಪಂ ಅಧಿಕಾರಿ ಪಿ.ಎನ್. ಪಿಡಶೆಟ್ಟಿ ಸಂಜೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿ, ನಿವೇಶನ, ಉದ್ಯೋಗ ಒದಗಿಸುವುದಾಗಿ ಲಿಖಿತ ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು. ಪಿಡಿಒ ಎಂ.ಆರ್. ಪತ್ತಾರ, ಕಾರ್ಯದರ್ಶಿ ಎಸ್.ಆರ್. ಸಂಕನೂರ ಗ್ರಾಮ ಲೆಕ್ಕಾಧಿಕಾರಿ ಕೆ.ಎ. ಮುಲ್ಲಾ ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಕಳಕೇಶ ಉಕ್ಕಿಸಲ, ಬಾಲು ರಾಠೋಡ, ಮಾರುತಿ ಚಿಟಗಿ, ಹನುಮಗೌಡ ಪಾಟೀಲ, ಪೀರು ರಾಠೋಡ, ಇ.ಕೆ. ಬಡಿಗೇರ, ಹುಲಿಗೆವ್ವ ಗುರಿಕಾರ, ಹನುಮಪ್ಪ ಗಡಿಗಿ, ಹೊನ್ನಮ್ಮ ಹಾಜರತಿ, ವಿಜಯ ರಾಠೋಡ, ಶೇಖಪ್ಪ ಚವ್ಹಾಣ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement