ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಲ ಮನ್ನಾದ ಸಹಾಯಧನ ಬಿಡುಗಡೆಗೊಳಿಸಿ: ಕುಲಕರ್ಣಿ

Mainashree
Updated On : 23 Nov 2013, 11:06 am

ನರಗುಂದ: ರಾಜ್ಯದಲ್ಲಿ 3 ವರ್ಷದಿಂದ ಬರಗಾಲ ಮುಂದವರೆದಿದ್ದು, ಕೂಡಲೇ ಈ ಹಿಂದೆ ಘೋಷಿಸಿರುವ ರೈತರ ಸಾಲ ಮನ್ನಾದ ಸಹಾಯಧನ ಈ ಕೂಡಲೇ ಬಿಡುಗಡೆಗೊಳಿಸುವಂತೆ ಕಳಸಾ ಬಂಡೂರಿ ಹೋರಾಟ ಸಮಿತಿಯ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದರು. ಅವರು ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ರಾಜ್ಯದಲ್ಲಿ ಹಿಂದಿನ 2 ವರ್ಷ ಭೀಕರವಾದ ಬರಗಾಲದಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರ ರೈತರ ಸಂಕಷ್ಟವನ್ನು ಅರಿತು ರೈತರ ಬ್ಯಾಂಕ್‌ಗಳಲ್ಲಿನ ರು. 25 ಸಾವಿರ ಸಾಲ ಮನ್ನಾ ಮಾಡಲು ಆದೇಶಿಸಿತ್ತು. ಆದರೆ, ಈ ಆದೇಶ ಹೂರಡಿಸಿ 1 ವರ್ಷ ಕಳೆದರೂ ಬ್ಯಾಂಕ್‌ಗಳಿಗೆ ಬರಬೇಕಾಗಿದ್ದ ಹಣ ಇಲ್ಲಿಯವರೆಗೂ ಇಂದಿನ ಕಾಂಗ್ರೆಸ್ ಸರ್ಕಾರ ಬಿಡುಗಡೆಗೊಳಿಸದೇ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಕೂಡಲೇ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ಪೂರ್ಣ ಹಣವನ್ನು ಆಯಾ ಬ್ಯಾಂಕ್‌ಗಳಿಗೆ ನೀಡಬೇಕು. ಇಲ್ಲದೇ ಹೋದಲ್ಲಿ ಬೆಳಗಾವಿಯಲ್ಲಿ ಜರಗುವ ಅಧಿವೇಶನಕ್ಕೆ ರಾಜ್ಯದ ರೈತರೆಲ್ಲ ಕೂಡಿ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಬಸನಗೌಡ ಚಿಕ್ಕನಗೌಡರ, ಅಣ್ಣಪ್ಪಗೌಡ ಪಾಟೀಲ, ಚಳಪ್ಪ ನಾಯ್ಕರ, ಬಸಪ್ಪ ಗುಡೇದರಿ, ಅಲ್ಲಿಸಾಬ ನದಾಫ, ಗುರುಶಾಂತಪ್ಪ ನರಸಾಪುರ, ಟಿ.ಈ. ಈರನಗೌಡ್ರ, ಎ.ಟಿ. ಬದಾಮಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement