ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 23 Nov 2013, 11:08 am

ಇಂದು ನುಡಿಹಬ್ಬ
ಗಜೇಂದ್ರಗಡ: ಸ್ಥಳೀಯ ವಿಘ್ನೇಶ್ವರ ಪಪೂ ಕಾಲೇಜಿನಲ್ಲಿ ಕಸಾಪ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನ. 23 ರಂದು ಬೆಳಗ್ಗೆ 9.30ಕ್ಕೆ ನುಡಿಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಸಾಪ ರೋಣ ತಾಲೂಕು ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಅಧ್ಯಕ್ಷತೆ ವಹಿಸುವರು. ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಬಸವರಾಜ ಮತ್ತಿಕಟ್ಟಿ ಉದ್ಘಾಟಿಸುವರು. ಕನ್ನಡ ನಾಡು-ನುಡಿಯ ಕುರಿತು ಆರ್.ಕೆ. ಬಾಗವಾನ ಉಪನ್ಯಾಸ ನೀಡುವರು. ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ, ಬಿ.ಎ. ಕೆಂಚರಡ್ಡಿ, ಬಿ.ವಿ. ಕಂಬಳ್ಯಾಳ, ಪುರಸಭೆ ಸದಸ್ಯ ಶರಣಪ್ಪ ರೇವಡಿ, ಪ್ರಭು ಚವಡಿ, ಬಸವರಾಜ ಮೂಲಿಮನಿ, ಪ್ರಾ. ಡಿ.ಎಸ್. ಗಾಳಿ, ಅಮರೇಶ ಗಾಣಿಗೇರ ಪಾಲ್ಗೊಳ್ಳುವರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸನ್ಮಾನ ಸಮಾರಂಭ
ಗಜೇಂದ್ರಗಡ: ಸ್ಥಳೀಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಹಾಗೂ ಪಂಚ ಟ್ರಸ್ಟ್ ಕಮಿಟಿ ವತಿಯಿಂದ ಸ್ಥಳೀಯ ಜಗದಂಬಾ ದೇವಿ ಸಮುದಾಯ ಭವನದಲ್ಲಿ ನ. 23 ರಂದು ಸಂಜೆ 5ಕ್ಕೆ ರೋಣ ಮತಕ್ಷೇತ್ರ ಶಾಸಕ ಜಿ.ಎಸ್. ಪಾಟೀಲರನ್ನು ಸನ್ಮಾನಿಸಲಾಗುವುದು. ಸಮಾಜದ ಅಧ್ಯಕ್ಷ ವಿ.ಡಿ. ಮೇಘರಾಜ ಅಧ್ಯಕ್ಷತೆ ವಹಿಸುವರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕೂಸಾ ಭಾಂಡಗೆ, ಸಿದ್ದುಸಾ ರಾಯಬಾಗಿ, ಸುರೇಂದ್ರಸಾ ರಾಯಬಾಗಿ, ಮೋಹನಸಾ ರಾಯಬಾಗಿ, ರುಕ್ಷ್ಮೀಣಿಬಾಯಿ ಮೇಹರವಾಡೆ, ಹಾಗೂ ಎಸ್.ಎಸ್.ಕೆ ತರುಣ ಸಂಘ, ಹಿತರಕ್ಷಣಾ ಸಮಿತಿ, ಗಾಯತ್ರಿದೇವಿ ಮಹಿಳಾ ಮಂಡಳ, ಸದಸ್ಯರು ಪಾಲ್ಗೊಳ್ಳುವರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಜನಸಂಪರ್ಕ ಕಚೇರಿ ಉದ್ಘಾಟನೆ
ಗಜೇಂದ್ರಗಡ: ಸ್ಥಳೀಯ ಕಾಲಕಾಲೇಶ್ವರ ವೃತ್ತದ ಬಳಿಯ ಹಳೆ ಪ್ರವಾಸಿ ನಿರೀಕ್ಷಣಾ ಮಂದಿರದಲ್ಲಿ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರ ಸರ್ಕಾರಿ ಜನಸಂಪರ್ಕ ಕಾರ್ಯಾಲಯ ನ. 23 ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಶಾಸಕ ಜಿ.ಎಸ್. ಪಾಟೀಲ ಜನಸಂಪರ್ಕ ಕಾರ್ಯಾಲಯ ಉದ್ಘಾಟಿಸುವರು. ಬಳಿಕ 11.30ಕ್ಕೆ ಪಟ್ಟಣದ ಟಿ.ಟಿ.ಡಿ. ಕಲ್ಯಾಣ ಮಂಟಪದಲ್ಲಿ ರೋಣ, ನರೇಗಲ್ಲ, ಗಜೇಂದ್ರಗಡ ಬ್ಲಾಕ್ ಹಾಗೂ ಯುವ ಕಾಂಗ್ರೆಸ್ ಕಮಿಟಿಯ ಕಾರ್ಯಕರ್ತರ ಸಭೆ ನಡೆಯಲಿದೆ. ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ತಾಲೂಕು ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಐ.ಎಸ್. ಪಾಟೀಲ, ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ನರೇಗಲ್ ಬ್ಲಾಕ್ ಅಧ್ಯಕ್ಷ ಬಿ.ಕೆ. ಪಾಟೀಲ, ತಾಲೂಕು ಯುವ ಅಧ್ಯಕ್ಷ ಸಂಗು ನವಲಗುಂದ, ಸ್ಥಳೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೋರ್ಪಡೆ, ಅಂದಾನೇಶ ಅರಹುಣಸಿ ಸೇರಿದಂತೆ ತಾಪಂ, ಪುರಸಭೆ, ಪಪಂ, ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಪಿಎಲ್‌ಡಿ, ಎಪಿಎಂಸಿ, ಎಸ್ಸಿ, ಎಸ್ಟಿ ಅಲ್ಪಸಂಖ್ಯಾತ, ಮತ್ತು ಪಕ್ಷದ ಎಲ್ಲ ಘಟಕದ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರೈತರಿಗೆ ಉಚಿತ ಕೀಟನಾಶಕ ವಿತರಣೆ
ಮುಳಗುಂದ: ನಮ್ಮ ರೈತ ಬಾಂಧವರು ಸರ್ಕಾರದಿಂದ ದೊರೆಯುವ ಸೌಲಭ್ಯದಿಂದ ಉತ್ತಮ ಬೆಳೆ ಬೆಳೆಯಬಹುದಾಗಿದೆ ಎಂದು ಪಪಂ ಸದಸ್ಯ ಆರ್.ಎನ್. ದೇಶಪಾಂಡೆ ಹೇಳಿದರು.
ಅವರು ಈಚೆಗೆ ಸ್ಥಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ತಗಲುವ ಸಮಗ್ರ ರೋಗ ನಿರ್ವಹಣೆಗಾಗಿ ರೈತರಿಗೆ ಉಚಿತವಾಗಿ ನೀಡಿದ 30 ಮಿ.ಲಿ ಕೊರೊಜೆನ್ ಕೀಟನಾಶಕ ವಿತರಿಸಿ ಮಾತನಾಡಿದರು. ಗ್ರಾಮ ಸೇವಕ ಎಂ.ಬಿ. ಸುಂಕಾಪುರ ರೈತರಿಗೆ ಕೀಟನಾಶಕದ ಕುರಿತು ವಿವರಣೆ ನೀಡಿ, ಮುಳಗುಂದ ವ್ಯಾಪ್ತಿಯಲ್ಲಿ 1012 ಎಕರೆ ಪ್ರದೇಶ ಹಿಂಗಾರು ಬೆಳೆ ಕಡಲೆ ಬೆಳೆದಿದ್ದು, ಕೊರೊಜೆನ್ ಕೀಟನಾಶಕವು ಕಡಲೆ ಬೆಳೆಗೆ ಹೆಚ್ಚಿನ ಪರಿಣಾಮಕಾರಿಯಾಗಿದೆ. ಬೆಳೆ 30-40 ದಿವಸವಿದ್ದಾಗ ಪ್ರತಿ ಲೀಟರ ನೀರಿಗೆ 0.15 ಮಿ.ಲಿ ಸಿಂಪರಣೆ ಮಾಡಬೇಕು ಎಂದರು. ಪಪಂ ಸದಸ್ಯ ಸಿ.ಬಿ. ಬಡ್ನಿ ಹಾಗೂ ರೈತರು ಉಪಸ್ಥಿತರಿದ್ದರು.

ಕೆಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಈರನಗೌಡ ಪಾಟೀಲ್ ಆಯ್ಕೆ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 22
ಅವಿಭಜಿತ ಧಾರವಾಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಇಲ್ಲಿನ ಕೆಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ರೋಣ ತಾಲೂಕಿನ ಈರನಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಸವಣೂರು ತಾಲೂಕಿನ ಶೇಖರಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 20 ಜನ ನಿರ್ದೇಶಕರು ಆಯ್ಕೆಯಾಗಿದ್ದರು. ಈ ಪೈಕಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಈರನಗೌಡ ಮತ್ತು ಶೇಖರಗೌಡ ಪಾಟೀಲ ಅವರನ್ನು ಹೊರತುಪಡಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಯಾರೊಬ್ಬರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 4ರ ಸುಮಾರಿಗೆ ಈರನಗೌಡ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಶೇಖರಗೌಡ ಪಾಟೀಲ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ರಾಜ್ಯ ಸರ್ಕಾರದ ಸಹಕಾರದಿಂದ ಈಗಾಗಲೇ ಕೆಸಿಸಿ ಬ್ಯಾಂಕ್ ಅಭಿವೃದ್ಧಿಯತ್ತ ಸಾಗುತ್ತಿದ್ದು, ಮೂರು ಜಿಲ್ಲೆಗಳ ಸಹಕಾರಿಗಳ ಸಹಕಾರದೊಂದಿಗೆ ಬ್ಯಾಂಕ್‌ನ್ನು ಮತ್ತಷ್ಟು ಸುಧಾರಿಸಿ ಮಾದರಿ ಸಹಕಾರಿ ಬ್ಯಾಂಕ್ ಮಾಡುವಲ್ಲಿ ಪ್ರಯತ್ನಿಸುತ್ತೇನೆ. ಇದಕ್ಕೆ ಎಲ್ಲ ನಿರ್ದೇಶಕರ ಸಹಕಾರ ಬೇಕೆಂದು ನೂತನ ಅಧ್ಯಕ್ಷ ಈರನಗೌಡ ಪಾಟೀಲ ಕನ್ನಡಪ್ರಭಕ್ಕೆ ತಿಳಿಸಿದರು.
ಚುನಾವಣಾಧಿಕಾರಿಗಳಾಗಿ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಸಹಕಾರಿ ಸಂಘಗಳ ಉಪನಿಬಂಧಕ ಎಂ.ಪಿ. ಶೆಲ್ಲಿಕೇರಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಮೊರಬ, ಪ್ರಧಾನ ವ್ಯವಸ್ಥಾಪಕ ಎಸ್.ಬಿ. ಮಾತರಂಗಿಮಠ ಹಾಗೂ ಎಲ್ಲ ನಿರ್ದೇಶಕರು ಇದ್ದರು. ನಂತರ ಆಡಳಿತ ಮಂಡಳಿಯ ನಿರ್ದೇಶಕರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಇಂದು ಸಾಹಿತ್ಯ ಸಂಜೆ ಕಾರ್ಯಕ್ರಮ
ಗದಗ:  ನ. 23 ರಂದು ಸಂಜೆ 6ಕ್ಕೆ ಜಿಲ್ಲಾ ಕಸಾಪ ವತಿಯಿಂದ ನಗರದ ತಾಪಂ ಆವರಣದಲ್ಲಿರುವ ಕಸಾಪ ಕಾರ್ಯಾಲಯದಲ್ಲಿ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ಗದುಗಿನ ಕೆ.ಎಸ್.ಎಸ್. ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಅರವಿಂದ ಪೂಜಾರ ಅವರು ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರ ಜೀವನ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ. ನಾಗವಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವಿ.ಎನ್. ಬೇಂದ್ರೆ ಇವರು ಸ್ವರಚಿತ ಕವನ ವಾಚನ ಮಾಡಲಿದ್ದಾರೆ. ಕಾರಣ ಕಸಾಪದ ಆಜೀವ ಸದಸ್ಯರು, ಕನ್ನಡಾಭಿಮಾನಿಗಳು, ಸಾಹಿತ್ಯಾಸ್ತಕರು, ಮಹಿಳಾ ಸಾಹಿತಿಗಳು, ಯುವ ಬರಹಗಾರರು, ಶಾಲಾ ಕಾಲೇಜಿನ ಶಿಕ್ಷಕ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement