ನಾಳೆ ಪಂಚಮಸಾಲಿ ಸಮಾಜದ ಸಮಾವೇಶ
ಗದಗ: ರೋಣ ತಾಲೂಕಿನ ಹುಲ್ಲೂರು ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಜಾಗೆಯಲ್ಲಿ ನ. 26ರ ಮಂಗಳವಾರ ಬೆಳಗ್ಗೆ 11.30ಕ್ಕೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಗದಗ ಜಿಲ್ಲಾ ಘಟಕ, ಹುಲ್ಲೂರು ಗ್ರಾಮಘಟಕದ ಅಡಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ 190ನೇ ವಿಜಯೋತ್ಸವ ಹಾಗೂ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಎಂ. ಬಸಪ್ಪ ತಿಳಿಸಿದ್ದಾರೆ.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಯೋಧ ದಿ. ವೆಂಕನಗೌಡ ಕೆಂಚನಗೌಡ ವೇದಿಕೆಯಲ್ಲಿ ಜರಗುವ ಸಮಾವೇಶದ ಸಾನ್ನಿಧ್ಯವನ್ನು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ವಹಿಸುವರು. ಮಾಜಿ ಸಚಿವ ಸಿ.ಸಿ. ಪಾಟೀಲ ಉದ್ಘಾಟಿಸುವರು. ನಿವೃತ್ತ ಪ್ರಾಧ್ಯಾಪಕ ಸಿ.ಎಲ್. ಹೆರಕಲ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಾಜಿ ಸಚಿವ ಮುರಗೇಶ ನಿರಾಣಿ, ಕಳಕಪ್ಪ ಬಂಡಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ, ಡಾ. ಕಲ್ಲಪ್ಪ ಹೆರಕಲ್, ಮಾಜಿ ಶಾಸಕ ಐ.ಎಸ್. ಪಾಟೀಲ, ರಾಜಶೇಖರ ಮೆಣಸಿನಕಾಯಿ, ನೀಲಕಂಠ ಅಸೂಟಿ, ಎಂ. ಬಸಪ್ಪ, ಶಿವಣ್ಣ ಪಲ್ಲೇದ, ಎಂ.ಎಸ್. ಚಿನ್ನೂರ, ಸೋಮನಗೌಡ ಪಾಟೀಲ ಉಪಸ್ಥಿತರಿರುವರು ಎಂದರು. ಸುದ್ದಿಗೋಷ್ಠಿಯಲ್ಲಿ ಬಸನಗೌಡ ಮೆಣಸಗಿ, ಶಶಿಧರ ದಿಂಡೂರ, ನಿವೃತ್ತ ಶಿಕ್ಷಕ ಇ.ಎಫ್. ಜಾಲಿಹಾಳ, ಎಂ.ಎಸ್. ಚಿನ್ನೂರ, ಎಂ.ಎಸ್. ಮಲ್ಲಾಪುರ ಇತರರಿದ್ದರು.