ಸುದ್ದಿ ಸಂಕ್ಷೇಪ
ನುಡಿಚಿತ್ರ ಪ್ರದರ್ಶನ ಇಂದು
ಗದಗ: ಜ. ತೋಂಟದಾರ್ಯ ಮಠದಲ್ಲಿ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನ. 25ರ ಸೋಮವಾರ ಸಂಜೆ 7ಕ್ಕೆ ನಡೆಯುವ 2147ನೇ ಶಿವಾನುಭವದಲ್ಲಿ ರಾಜ್ಯೋತ್ಸವ ಕನ್ನಡ ತಿಂಗಳು ವಿಶೇಷ ಶಿವಾನುಭವಗಳ ಮಾಲಿಕೆ ಅಂಗವಾಗಿ ಕರ್ನಾಟಕ ಭೌಗೋಳಿಕ ವಿಸ್ಮಯಗಳು ಕುರಿತು ನುಡಿಚಿತ್ರ ಪ್ರದರ್ಶನ, ಶಿವಾನುಭವ ಸಮಿತಿ ಚೇರ್ಮನ್ ಎಸ್.ಎನ್. ಆದಿ ಅವರ ವಿಭಿನ್ನ- ಉಪಯುಕ್ತ ವಿಷಯಗಳ ಕುರಿತು ಅಪೂರ್ವ ಭಾಷಣಗಳ ಸಂಗ್ರಹವಾದ ಕನಸುಬಿತ್ತುವ ಭಾಷಣಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉಪನ್ಯಾಸಕರಾಗಿ ಸಾಹಿತಿ-ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಆಗಮಿಸುವರು. ಕಾರಣ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಶಿವಾನುಭವ ಸಮಿತಿ ಚೇರ್ಮನ್ ಪ್ರೊ. ಎಸ್.ಎನ್. ಆದಿ ತಿಳಿಸಿದ್ದಾರೆ.
ವಾಲ್ಮೀಕಿ ಧ್ಯೇಯಾದರ್ಶ ಸ್ಮರಣೀಯ: ನಾಯ್ಕರ
ಗದಗ: ರಾಮಾಯಣ ಕಪೋಲ ಕಲ್ಪಿತವಲ್ಲ. ನೈಜ ಘಟನೆ ಆಧರಿಸಿದ ಜೀವನ ಮೌಲ್ಯಗಳ ಕೃತಿ. ಅಂತಹ ಮಹಾನ್ ಕಾವ್ಯ ಬರೆದ ಮಹರ್ಷಿ ವಾಲ್ಮೀಕಿ ಧ್ಯೇಯಾದರ್ಶಗಳು ಸದಾ ಸ್ಮರಣೀಯ ಎಂದು ಮಹರ್ಷಿ ವಾಲ್ಮೀಕಿ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಯ್ಯಪ್ಪ ನಾಯ್ಕರ ಹೇಳಿದರು.ಸ್ಥಳೀಯ ರಾಜೀವಗಾಂಧಿ ನಗರದಲ್ಲಿ ಸಂಸ್ಥೆ ವತಿಯಿಂದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೇಲ್ವೆ ಬ್ರಾಡ್ಗೇಜ್ ಹೋರಾಟ ಸಮಿತಿ ಸಂಚಾಲಕ ನಿಸ್ಸಾರಅಹ್ಮದ ಖಾಜಿ, ಚಂದ್ರಕಾಂತ ಚೌಹಾಣ್ ಮಾತನಾಡಿದರು. ಎಫ್.ಎಸ್. ಬೆಳವಟಗಿ ವಾಲ್ಮೀಕಿ ಬದುಕು, ಸಾಧನೆ ಕುರಿತು ಉಪನ್ಯಾಸ ನೀಡಿದರು. ಆನಂದ ಚಿಗರಿ ಅವರನ್ನು ಸನ್ಮಾನಿಸಲಾಯಿತು. ಎಂ.ಎಚ್. ಪೂಜಾರ, ಎಸ್.ಕೆ. ನದಾಫ್, ಮಹದೇವಪ್ಪ ತಿರಕಣ್ಣವರ, ಮಂಜುನಾಥ ನಾಯ್ಕರ, ಎಚ್.ಎನ್. ಚಿಗರಿ, ಎಚ್.ಆರ್. ಜಾನಗಾರ, ಗೌರಿ ತಳವಾರ ಇದ್ದರು. ಮಂಜುನಾಥ ಕುರಹಟ್ಟಿ ನಿರೂಪಿಸಿದರು. ಈ.ಆರ್. ಆರಟ್ಟಿ ವಂದಿಸಿದರು.
ನರೇಗಲ್ಲ: ಇಂದು ಸ್ವಾಭಿಮಾನಿ ಕನ್ನಡಿಗರ ಸಮಾವೇಶ
ನರೇಗಲ್ಲ: ರೋಣ ತಾಲೂಕು ಕರವೇ ಹಾಗೂ ನರೇಗಲ್ ನಗರ ಘಟಕದ ವತಿಯಿಂದ ರೋಣ ತಾಲೂಕು ಸ್ವಾಭಿಮಾನಿ ಕನ್ನಡಿಗರ ಸಮಾವೇಶ, ಕನ್ನಡ ರಾಜ್ಯೋತ್ಸವ ಹಾಗೂ ಸನ್ಮಾನ ಸಮಾರಂಭವನ್ನು ನ. 25ರ ಸೋಮವಾರ ಸಂಜೆ 5ಕ್ಕೆ ಸ್ಥಳೀಯ ಹಳೇ ಕೆಸಿಸಿ ಬ್ಯಾಂಕ್ ಹತ್ತಿರ ಹಮ್ಮಿಕೊಳ್ಳಲಾಗಿದೆ. ರೋಣ ಗುಲಗಂಜಿಮಠದ ಗುರುಪಾದ ಶ್ರೀಗಳು ಸಾನ್ನಿಧ್ಯ ವಹಿಸುವರು. ಕರ್ನಾಟಕ ಬೀಜ ನಿಗಮದ ನಿರ್ದೇಶಕ ಐ.ಎಸ್. ಪಾಟೀಲ ಉದ್ಘಾಟಿಸುವರು. ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ ಅಧ್ಯಕ್ಷತೆ ವಹಿಸುವರು. ಕರವೇ ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ, ಪಪಂ ಸದಸ್ಯ ಕಲ್ಮೇಶ ತೊಂಡಿಹಾಳ, ವೀರಪಣ್ಣ ಪಿಡಗೊಂಡ, ಪಪಂ ಸದಸ್ಯ ಶಶಿಧರ ಸಂಕನಗೌಡರ, ಅಶೋಕ ಬೇವಿನಕಟ್ಟಿ, ಡಾ. ಕೆ.ಬಿ. ಧನ್ನೂರ, ಕೆ.ಜಿ. ಉಡುಪಿ, ಬಸನಗೌಡ ಪಾಟೀಲ, ವಿ.ಎ. ದಿಂಡೂರ, ಡಾ. ಶಿವರಾಜ ಗುರಿಕಾರ, ರಾಮಣ್ಣ ಸಕ್ರೋಜಿ, ಪಪಂ ಸದಸ್ಯ ರಜಾಕ ಹೊಸಮನಿ, ದುಂಡಪ್ಪ ನಾಶಿಪುಡಿ, ತಿಮ್ಮಣ್ಣ ಬಂಡಿವಡ್ಡರ, ಮಹಾಲಿಂಗಪ್ಪ ಮ್ಯಾಗೇರಿ, ನಿಂಗಪ್ಪ ಸಿಸ್ತಗಾರ, ಕರವೇ ಜಿಲ್ಲಾ ಪದಾಧಿಕಾರಿಗಳು ಹಾಗೂ ಸನ್ಮಾನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಮೀನುಗಾರಿಕೆ: ಅರ್ಜಿ ಆಹ್ವಾನ
ಗದಗ: ಪುರುಷರಿಗೆ ಡಿಸೆಂಬರ್ 16, 2013ರಿಂದ 36ನೇ ತಂಡದ ಒಳನಾಡು ಮೀನುಗಾರಿಕೆ ತರಬೇತಿ ಆರಂಭವಾಗಲಿದೆ. ಈ ತಂಡದಲ್ಲಿ ಸುಮಾರು 40 ಗ್ರಾಮೀಣ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ತರಬೇತಿ 2 ತಿಂಗಳ ಅವಧಿಯದ್ದಾಗಿದ್ದು, ಪ್ರತಿ ಅಭ್ಯರ್ಥಿಗೆ ಮಾಸಿಕ ರು. 1 ಸಾವಿರ ಶಿಷ್ಯ ವೇತನ ಕೊಡಲಾಗುವುದು. ಅಭ್ಯರ್ಥಿ 18-40 ವರ್ಷ ಒಳಗಿರಬೇಕು. ಅರ್ಜಿದಾರರು ಬೀದರ್, ಗುಲ್ಬರ್ಗ, ಯಾದಗಿರಿ, ಚಿತ್ರದುರ್ಗ, ರಾಯಚೂರು, ಧಾರವಾಡ, ಬಿಜಾಪುರ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಗದಗ, ಕೊಪ್ಪಳ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ ಜಿಲ್ಲೆಯವರಾಗಿರಬೇಕು. ಅರ್ಜಿ ಸಲ್ಲಿಸಲು ಡಿ. 10 ಕೊನೆಯ ದಿನವಾಗಿದೆ. ಜಿಲ್ಲೆ, ತಾಲೂಕು ಮಟ್ಟದ ಮೀನುಗಾರಿಕೆ ಕಚೇರಿಗಳಲ್ಲಿ ಇರುವ ಅರ್ಜಿ ನಮೂನೆಗಳನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲೆ, ತಾಲೂಕು ಮಟ್ಟದ ಮೀನುಗಾರಿಕೆ ಕಚೇರಿಗಳು, ಜಿಪಂ, ಜಿಲ್ಲಾಧಿಕಾರಿ ಕಚೇರಿಯ ನೋಟಿಸ್ ಬೋರ್ಡ್ನಲ್ಲಿ ಪ್ರಕಟಣೆ ನೋಡಬಹುದು.