ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 26 Nov 2013, 10:51 am

ಎಂ.ಐ. ನವಲೂರ ನೇಮಕ
ಗದಗ: ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಮಿಕ ಪ್ರತಿನಿಧಿ (ನಿರ್ದೇಶಕ)ರಾಗಿ ಗದಗ ನಗರದ ಎಂ.ಐ. ನವಲೂರ ಅವರನ್ನು ನೇಮಕಗೊಳಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ. ನಾಗರತ್ನಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕಾಶ ಭಜಂತ್ರಿ ನೇಮಕ
ಗದಗ: ಕಾಂಗ್ರೆಸ್ ಸಮಿತಿಯ ಗದಗ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾಗಿ ಹೊಳೆಆಲೂರ ಸಮೀಪದ ಗಾಡಗೋಳಿ ಗ್ರಾಮದ ಪ್ರಕಾಶ ಭಜಂತ್ರಿ ಅವರನ್ನು ನೇಮಕಗೊಳಿಸಲಾಗಿದೆ ಎಂದು ಗದಗ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಕಡೇಮನಿ ತಿಳಿಸಿದ್ದಾರೆ.
ಇಸ್ಪೀಟ್: ಐವರ ಬಂಧನ
ಗದಗ: ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ಕೆ.ಇ.ಬಿ. ಗ್ರಿಡ್ ಹತ್ತಿರದಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಐವರು ಇಸ್ಟೀಟ್ ಆಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರು. 5035 ಹಾಗೂ 5 ಮೊಬೈಲ್  ವಶಪಡಿಸಿಕೊಳ್ಳಲಾಗಿದೆ. ಇಲ್ಲಿನ ನಿವಾಸಿಗಳಾದ ಶಿವಕುಮಾರ ಕಳಕಪ್ಪ ಬೇವಿನಕಟ್ಟಿ, ಮುತ್ತಪ್ಪ ನಾಗಪ್ಪ ಶೆಟ್ಟರ, ಹನುಮಪ್ಪ ಬಸಪ್ಪನಾಯಕರ, ಈರಣ್ಣ ಕಳಕಪ್ಪ ಮುದಿಯಣ್ಣವರ, ಕಿರಣಕುಮಾರ್ ಶಂಕ್ರಪ್ಪ ನಾಯಕರ ಬಂಧಿತ ಆರೋಪಿಗಳು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ವ್ಯಕ್ತಿ ಸಾವು
ಗದಗ:  ಬಾಳೆ ತೋಟದಲ್ಲಿ ನೀರು ಹಾಯಿಸುತ್ತಿದ್ದ ವ್ಯಕ್ತಿಯೋರ್ವನ ಕಾಲಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿರುಂಜ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ರಾಮಚಂದ್ರ ಶಿವಪ್ಪ ಹಂಚಿನಾಳ (45) ಮೃತವ್ಯಕ್ತಿ.  ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಉಪನ್ಯಾಸ
ನರಗುಂದ:  ರಾಜ್ಯೋತ್ಸವದ ಅಂಗವಾಗಿ ತಾಲೂಕು ಕಸಾಪ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಜಗಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನ. 26ರ ಮಧ್ಯಾಹ್ನ 2.30ಕ್ಕೆ ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ ಕುರಿತು ಉಪನ್ಯಾಸ ಜರುಗಲಿದೆ. ತಾಲೂಕು ಕಸಾಪ ಅಧ್ಯಕ್ಷ ಪಿ.ಸಿ. ಕಲಹಾಳ, ಸುರೇಶ ಜೈನರ, ಎಫ್.ವೈ. ದೊಡಮನಿ, ಎಸ್. ಸಿದ್ದರಾಜು, ಎಸ್.ಎ. ಖಾಜಿ, ಎಂ.ಕೆ. ಕುರಿ, ಶಿವನಗೌಡ ಹೆಬ್ಬಳ್ಳಿ, ಎಂ.ಡಿ. ಮಾದರ, ಐ.ಆರ್. ಹಡಗಲಿ, ವಿ.ಎನ್. ಭೋಸಲೆ, ಎಂ.ಎಸ್. ಯಾವಗಲ್ ಮತ್ತಿತರರು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement