ಕನಕದಾಸರು ಎಲ್ಲ ಜನಾಂಗದ ಕಣ್ಮಣಿ: ಈಶ್ವರ ಬೆಟಗೇರಿ
ನರೇಗಲ್ಲ: ಆಧ್ಯಾತ್ಮಿಕ ಸಾಹಿತ್ಯದ ತಳಹದಿಯನ್ನು ಸಾರಿ ಹೇಳುವ ಮೂಲಕ ದಾಸರಲ್ಲಿಯೇ ಶ್ರೇಷ್ಠರಾದ ಭಕ್ತ ಕನಕದಾಸರು ಎಲ್ಲ ಜನಾಂಗದ ಕಣ್ಮಣಿ ಎಂದು ರೇಣುಕಾಚಾರ್ಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸದಸ್ಯ ಈಶ್ವರ ಬೆಟಗೇರಿ ಹೇಳಿದರು. ಸ್ಥಳೀಯ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸ ಜಯಂತಿ ಅಂಗವಾಗಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮೇಲ್ವರ್ಗದ ಜನತೆಯಲ್ಲಿನ ಅಜ್ಞಾನ ಅಳಿಸಿ ತಮ್ಮನ್ನು ತಾವು ಅರಿತುಕೊಳ್ಳುವಂತೆ ಮಾಡಿದ ಮಹಾನ ಪುರುಷ. ಅಂತಹ ಯೋಗಿಗಳ ಸಾಹಿತ್ಯದ ಭಂಡಾರವನ್ನು ಅರಿತುಕೊಂಡು ವಿದ್ಯಾರ್ಥಿಗಳು ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವಂತೆ ಕೋರಿದರು. ನಿರ್ಮಲಾ ಹಿರೇಮಠ ಪಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಿಕ್ಷಕಿಯರು ಪಾಲ್ಗೊಂಡಿದ್ದರು. ಜಯಶ್ರೀ ಲಕ್ಕನಗೌಡ್ರ ಸ್ವಾಗತಿಸಿದರು. ಅಕ್ಕಮಾದೇವಿ ಬೆಟಗೇರಿ ನಿರೂಪಿಸಿ, ವಂದಿಸಿದರು.