ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯೋಗದಿಂದ ಮಾನಸಿಕ, ದೈಹಿಕ ಸ್ವಾಸ್ಥ್ಯ: ಪ್ರಕಾಶ

Lingaraj Badiger
Updated On : 27 Nov 2013, 11:02 am

ಮುಳಗುಂದ: ಪ್ರಾಥಮಿಕ ಹಂತದಿಂದಲೇ ಯೋಗ ಹಾಗೂ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿದರೆ ನಮ್ಮ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಗಟ್ಟಿಗೊಳ್ಳುವುದು ಎಂದು ಯೋಗ ಶಿಕ್ಷಕ ಪ್ರಕಾಶ ಮದ್ದಿನ ಹೇಳಿದರು. ಅವರು ಈಚೆಗೆ ಪತಂಜಲಿ ಯೋಗ ಸಮಿತಿ, ಮಾರುತಿ ಟ್ರಸ್ಟ್ ಕಮಿಟಿ ವತಿಯಿಂದ ಸ್ಥಳೀಯ ಬಸವೇಶ್ವರ ನಗರದಲ್ಲಿ 6 ದಿನಗಳ ಕಾಲ ನಡೆದ ಉಚಿತ ಯೋಗ ಹಾಗೂ ಪ್ರಣಾಯಾಮ ಶಿಬಿರದಲ್ಲಿ ಮಾತನಾಡಿದರು.  ಬಿ.ಎಸ್. ಸಂಗಪ್ಪಶೆಟ್ರ ಮಾತನಾಡಿ, ಇತ್ತೀಚಿಗೆ ಮಾಧ್ಯಮಗಳ ಪ್ರಭಾವ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ನಾವು ಯೋಗಾಭ್ಯಾಸ ಮರೆಯುತ್ತಿದ್ದೇವೆ. ನಿರಂತರ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು. ಯೋಗ ಶಿಬಿರದ ನೇತೃತ್ವ ವಹಿಸಿದ್ದ ಅಶೋಕ ಸರ್ವದೆ ಅವರನ್ನು ಸನ್ಮಾನಿಸಲಾಯಿತು. ದೇವೇಂದ್ರಪ್ಪ ಗುಳೇದ, ಸಿದ್ಧಲಿಂಗಯ್ಯ ಗೋನಾಳಮಠ, ಎಂ.ಬಿ. ಸುಣಗಾರ, ಪ್ರಭು ಬಳಿಗಾರ, ಬಿ.ಬಿ. ಕುಬಸದ, ಮಹಾಂತಪ್ಪ ಕುತ್ನಿ, ಶಾಂತಮ್ಮ ಮಠದ, ಸಿದ್ಧಣ್ಣ ಗೌಳಿ, ಪ್ರಭು ಉಪ್ಪಲದಿನ್ನಿ, ಚಂಬಣ್ಣ ಹಡಪದ, ಶಾಂತಪ್ಪ ಕುತ್ನಿ, ಆನಂದ ಬಳ್ಳಾರಿ, ಬಸವರಾಜ ಕೊಲ್ಲಾರಿ, ಮಹಾಂತಪ್ಪ ಬೆಂತೂರ, ಶರಣಪ್ಪ ಮುರಳಿ, ಬಸವರಾಜ ಉಪ್ಪಲದಿನ್ನಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement