ಬಾಲಕ ಕಾಣೆ
ಗದಗ: ವಿದ್ಯಾಭ್ಯಾಸ ಮಾಡು ಎಂದು ಬುದ್ಧಿಮಾತು ಹೇಳಿದ್ದಕ್ಕೆ ಬಾಲಕನೋರ್ವ ಮನೆಬಿಟ್ಟು ಹೋಗಿರುವ ಘಟನೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 13 ವರ್ಷದ ರಘು ಯಲ್ಲಪ್ಪ ಕಗ್ಗಲ ಕಾಣೆಯಾದ ಬಾಲಕ. ಮನೆಯಿಂದ ಕಾಣೆಯಾದ ಸಂದರ್ಭದಲ್ಲಿ ಕೆಂಪು ಬಿಳಿ ಬಣ್ಣದ ಶರ್ಟ್, ಹಸಿರು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. 5 ಪುಟ್ ಎತ್ತರ, ಸಾದಾಗಪ್ಪು, ಅಗಲವಾದ ಕಿವಿ, ಹಣೆಮೇಲೆ ಮಾದ ಗಾಯದ ಕಲೆಯಿದ್ದು, ಯಾರಿಗಾದರೂ ಸಿಕ್ಕಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಮೊ. 9611276776 ಇಲ್ಲಿಗೆ ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಟ್ಕಾ: ಓರ್ವನ ಬಂಧನ
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಭೀಮರೆಡ್ಡಿ ವೃತ್ತದ ಬಳಿ ಗ್ರಾಮ ಪಂಚಾಯಿತಿ ಮಳಿಗೆಯ ಕಟ್ಟೆಯ ಮೇಲ ಮಟ್ಕಾ ನಂಬರ್ ಬರೆದುಕೊಳ್ಳುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ಚಂದ್ರಶೇಖರ ಈಟಿ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 540 ಸೇರಿದಂತೆ ಮಟ್ಕಾ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ದೋಚಿದ್ದ ಆರೋಪಿ ಬಂಧನ
ಗದಗ: ರಸ್ತ್ತೆ ಬದಿ ತೆರಳುತ್ತಿದ್ದ ಮಹಿಳೆಯೋರ್ವಳ ಮೈಮೇಲಿನ ಬಂಗಾರದ ಆಭರಣವನ್ನು ದೋಚಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಯಿಲಗೋಳ ಗ್ರಾಮದ ಸಲೀಂಸಾಬ್ ಕದಡಿ ಬಂಧಿತ ಆರೋಪಿಯಾಗಿದ್ದು, ಆರೋಪಿಯಿಂದ ಮಹಿಳೆಯಿಂದ ದೋಚಿಕೊಂಡು ಹೋಗಿದ್ದ ಬಂಗಾರದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಮಲ್ಲಸಮುದ್ರ ಗ್ರಾಮದ ಅನಸೂಯಾ ಶಿವಾನಂದಯ್ಯ ಹಿರೇಮಠ ಇವರು ಮಲಸಮುದ್ರ ಗ್ರಾಮದ ಹತ್ತಿರ ಇರುವ ವೀರಭದ್ರೆಶ್ವರ ದೇವಸ್ಥಾನಕ್ಕೆ ಹೋಗಿ ಮರಳಿ ತನ್ನ ಮಾವ ಮತ್ತು ಅಕ್ಕಳೊಂದಿಗೆ ನಡೆಯುತ್ತಾ ತನ್ನ ಮನೆಗೆ ಹೋಗುತ್ತಿರುವಾಗ ನ. 26 ರಂದು ಈ ಘಟನೆ ನಡೆದಿತ್ತು. ಗದಗ ಗ್ರಾಮೀಣ ಸಿಪಿಐ, ಸಿಬ್ಬಂದಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಗದಗ ಗ್ರಾಮೀಣ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಕ್ಕ ಮೊರಬದ ನಿಧನ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಸಾವಕ್ಕ ಮೊರಬದ (82) ಮಂಗಳವಾರ ನಿಧನರಾದರು. ಮೃತರಿಗೆ 6 ಜನ ಪುತ್ರರು ಮತ್ತು ಅಪಾರ ಬಂದು ಬಳಗ ಇದ್ದಾರೆ. ಮೃತರ ನಿಧನಕ್ಕೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ಮಹಾಲಿಂಗಮ್ಮ ನಿಧನ
ರೋಣ: ಪಟ್ಟಣದ 9ನೇ ವಾರ್ಡ್ ನಿವಾಸಿಯಾದ ಶತಾಯುಷಿ ಮಹಾಲಿಂಗಮ್ಮ ಜಗ್ಗಲ್ ಇವರು ತಮ್ಮ 101ನೇ ವಯಸ್ಸಿನಲ್ಲಿ ಭಾನುವಾರ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗ ಇದ್ದಾರೆ.