ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಂಇಎಸ್ ಶಾಸಕರ ಗಡಿಪಾರಿಗೆ ಆಗ್ರಹ

Lingaraj Badiger
Updated On : 30 Nov 2013, 11:04 am

ಗಜೇಂದ್ರಗಡ: ಕನ್ನಡ ನಾಡು, ನುಡಿ, ಸಂಸ್ಕೃತಿ ಬಗ್ಗೆ ಉದ್ಧಟತನದಿಂದ ವರ್ತಿಸಿದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲರ ಶಾಸಕತ್ವ ಅನರ್ಹಗೊಳಿಸಿ ನಾಡಿನಿಂದ ಗಡಿಪಾರು ಗೊಳಿಸಬೇಕೆಂದು ಆಗ್ರಹಿಸಿ ಬುಧವಾರ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಿಶೇಷ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆ ಮುಖಂಡ ಎಂ.ಬಿ. ತೋರಗಲ್ ಮಾತನಾಡಿ, ಎಂಇಎಸ್ ಶಾಸಕರು ಮತ್ತು ಕಾರ್ಯಕರ್ತರು ಪದೇ ಪದೇ ಗಡಿ, ಭಾಷೆ ಸಂಬಂಧ ಕನ್ನಡ ವಿರೋಧಿ ಹೇಳಿಕೆ ನೀಡುವ ಮೂಲಕ ಕನ್ನಡಿಗರು ಮರಾಠಿ ಭಾಷಿಕರ ಅನ್ಯೋನ್ಯ ಸಂಬಂಧಕ್ಕೆ ಚ್ಯುತಿ ತರುವ ನಿಟ್ಟಿನಲ್ಲಿ ವರ್ತಿಸುತ್ತಿದ್ದಾರೆ. ಇಂತಹ ನಾಡ ದ್ರೋಹಿಗಳಿಗೆ ರಾಜ್ಯ ಸರ್ಕಾರ ತಕ್ಕ ಶಾಸ್ತಿ ಮಾಡಿ, ನಾಡಿನಿಂದ ಗಡಿಪಾರು ಮಾಡಿ ಮತ್ತೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸದಿದ್ದಲ್ಲಿ ಜಯಕರ್ನಾಟಕ ಸಂಘಟನೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದರು.
ವಿಶೇಷ ತಹಸೀಲ್ದಾರ್ ಸಿ.ಎಂ. ಕಲಹಾಳ ಸಂಘಟಿಕರಿಂದ ಮನವಿ ಸ್ವೀಕರಿಸಿದರು. ಮಂಜುನಾಥ ಹೊಸಮನಿ, ಹನುಮಂತ ಲಕ್ಕಲಕಟ್ಟಿ, ಭೋಗೇಂದ್ರಪ್ಪ ಪೂಜಾರ, ಈರಣ್ಣ ಯಂಕಚಿ, ಮಲ್ಲಪ್ಪ ಜೂಚನಿ, ದುರಗೇಶ ಹೊಸಮನಿ, ಬಸವರಾಜ ಪಾಟೀಲ, ಚಂದ್ರು ಪಾಟೀಲ, ಪ್ರವೀಣ ಬೆಟಗೇರಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement