ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳ ಮನಸ್ಸಲ್ಲಿ ಹುಳಿ ಹಿಂಡಬೇಡಿ

Lingaraj Badiger
Updated On : 30 Nov 2013, 10:55 am

 ಹೊಳೆಆಲೂರ: ಮಕ್ಕಳ ಮನಸು ಹಾಲಿನಂತೆ, ಅದರಲ್ಲಿ ಹುಳಿ ಹಿಂಡುವ ಕೆಲಸ ಮಾಡದೇ ಅವರಲ್ಲಿ ಜಾತಿಮತ ತೋರದೆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಲಿ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಹಾಬಳೇಶ ಗಾಣಿಗೇರ ನುಡಿದರು.
ಅವರು ಗ್ರಾಮದ ಮುಖ್ಯ ಬಜಾರದಲ್ಲಿರುವ ಸರ್ಕಾರಿ ಶಾಲಾ ಸಮುಚ್ಚಯದಲ್ಲಿ ಈಚೆಗೆ ಸಮೂಹ ಸಂಪನ್ಮೂಲ ಕೇಂದ್ರ ಹೊಳೆಆಲೂರ, ಮಾದರಿ ಕೇಂದ್ರಶಾಲೆ ಮತ್ತು ಕನ್ನಡ ಹೆಣ್ಣುಮಕ್ಕಳ ಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಹೊಳೆಆಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಕಾರ್ಯಕ್ರಮ ರೂಪಿಸಿದೆ. ಅವುಗಳ ಅನುಷ್ಠಾನ ಆಗಿದ್ದರೂ ಅದರ ಸದುಪಯೋಗ ಸರಿಯಾಗಿ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದರು. ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ತಿಪ್ಪವ್ವ ದೊಡಮನಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಬಸಮ್ಮ ವಸ್ತ್ರದ, ತಾಪಂ ಸದಸ್ಯ ಬಸನಗೌಡ ಶಿರಗುಂಪಿ, ಮಾಜಿ ತಾಪಂ ಸದಸ್ಯ ಮಲ್ಲಣ್ಣ ಕೋಳೇರಿ, ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಎಸ್. ಶೆಲ್ಲಿಕೇರಿ, ಅಲ್ಪಸಂಖ್ಯಾತ ಘಟಕದ ಎಫ್.ಎಸ್. ಚಿಕ್ಕಣ್ಣೂರ, ಪ್ರಕಾಶ ಗೌರಿಮಠ, ಪ್ರಕಾಶ ಜಂಬಲದಿನ್ನಿ, ಕೆ.ಎಸ್. ಹೂಗಾರ, ಮಹೇಶಗೌಡ ಪಾಟೀಲ ಮೊದಲಾದವರು ಆಗಮಿಸಿದ್ದರು.
ಮುಖ್ಯಾಧ್ಯಾಪಕ ಎಸ್.ಎ. ಹೆರಕಲ್, ಪಿ.ಎನ್. ಸುಧಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ಎಸ್. ಬಾರಕೇರ ಸ್ವಾಗತಿಸಿದರು. ಎಂ.ಯು. ಮುಲ್ಲಾ ವಂದಿಸಿದರು. ವಿಜಯಲಕ್ಷ್ಮೀ ರುಮ್ಮಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement