ಸಂಭಾಜಿ ಹೇಳಿಕೆ: ಖಂಡನೆ
ಶಿರಹಟ್ಟಿ: ಬೆಳಗಾವಿಯಲ್ಲಿ ಶಾಸಕ ಸಂಭಾಜಿ ಪಾಟೀಲ ಕನ್ನಡಿಗರ, ಸರ್ಕಾರದ ವಿರುದ್ಧ ಕೀಳುಮಟ್ಟದಲ್ಲಿ ಮಾತನಾಡಿದ್ದನ್ನು ಖಂಡಿಸಿ ಶುಕ್ರವಾರ ತಾಲೂಕು ಘಟಕ ರಕ್ಷಣಾ ವೇದಿಕೆ ಕಾರ್ಯದರ್ಶಿ ಬಸವರಾಜ ವಡವಿ, ರಾಜು ಶಿರಹಟ್ಟಿ ನೇತೃತ್ವದಲ್ಲಿ ಪ್ರತಿಭಟಿಸಿ, ಶಾಸಕನ ಗಡಿಪಾರಿಗೆ ಆಗ್ರಹಿಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೆಳಗಾವಿ ಸುವರ್ಣಸೌಧದಲ್ಲಿ ಆಯೋಜಿಸಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ ನಡೆಸುವುದರ ಮೂಲಕ ಶಾಸಕ ಸಂಭಾಜಿ ಅವರು ಮರಾಠಿ ಭಾಷಿಗರನ್ನು ಪ್ರಚೋದಿಸುವುದರ ಜತೆಗೆ ಕನ್ನಡ ಹಾಗೂ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನ ಮಾಡಿದ್ದಾರೆ. ಕನ್ನಡ ನೆಲ, ಜಲ, ಭಾಷೆ, ಅಭಿಮಾನಕ್ಕೆ ದಕ್ಕೆ ಬರುವ ರೀತಿಯಲ್ಲಿ ವರ್ತಿಸುತ್ತಿರುವುದು ಸರಿಯಲ್ಲ. ಪದೇ ಪದೇ ಇದೇ ರೀತಿ ವರ್ತಿಸುತ್ತಿರುವ ಎಂಇಎಸ್ ಶಾಸಕರನ್ನು ವಜಾಗೊಳಿಸಬೇಕು. ಅವರನ್ನು ರಾಜ್ಯದಿಂದ ಗಡಿಪಾರುಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು.
ಕನ್ನಡಿಗರ ಮತ್ತು ಮರಾಠಿಗರ ಮಧ್ಯೆ ಗೊಂದಲ ಸೃಷ್ಟಿಸಿ, ಗಲಭೆಗೆ ಕಾರಣವಾಗುತ್ತಿರುವ ಕನ್ನಡ ದ್ರೋಹಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ನಂತರ ಶಿರಸ್ತೇದಾರ್ ಎಲ್.ಜೆ. ಬಾಗಲಕೋಟೆ ಅವರಿಗೆ ಮನವಿ ಸಲ್ಲಿಸಿದರು. ನಿಂಗರಾಜ ಗೋಡೆಣ್ಣವರ, ಲಕ್ಷ್ಮಣ ಇಟಗಿ, ಮಹಾದೇವ ಪೂಜಾರ, ಹೊನ್ನಪ್ಪ ಬಡೆಣ್ಣವರ, ದೇವರಾಜ ನೀಲಣ್ಣವರ, ಹುಚ್ಚಪ್ಪ ಪೂಜಾರ, ಮರಿಯಪ್ಪ ಮೀನಣ್ಣವರ, ಈರಯ್ಯ ಹಿರೇಮಠ, ಸಿದ್ಧಪ್ಪ ಅಳೇನಿಂಗಣ್ಣವರ, ಹನುಮಂತ ಕಂಟೆಮ್ಮನವರ, ಪರಸು ಕಂಟೆಮ್ಮನವರ, ದುರ್ಗಪ್ಪ ಬಡ್ಡೆಪ್ಪನವರ, ಮರಿಯಪ್ಪ ಬಡ್ಡೆಪ್ಪನವರ, ದೇವಪ್ಪ ಮೀನಣ್ಣವರ, ಲಕ್ಷ್ಮಣ ಗುಡಿಮನಿ, ಲಕ್ಷ್ಮಣ ಕಂಟೆಮ್ಮನವರ, ಶಿವಾನಂದ ಮೀನಣ್ಣವರ, ಮರಿಯಪ್ಪ ಕಂಟೆಮ್ಮನವರ ಇತರರು ಮನವಿ ನೀಡುವಲ್ಲಿ ಇದ್ದರು.