ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮುದಾಯ ಭವನಕ್ಕೆ ರು. 3 ಲಕ್ಷ ಅನುದಾನ

Vishwanath S
Updated On : 1 Dec 2013, 12:23 pm

ಗಜೇಂದ್ರಗಡ: ಸ್ಥಳೀಯ ತೊಗಟವೀರ ಕ್ಷತ್ರಿಯ ಸಮುದಾಯ ಭವನ ನಿರ್ಮಾಣಕ್ಕೆ  ಶಾಸಕರ ನಿಧಿಯಿಂದ ರು. 3 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಜಿ.ಎಸ್. ಪಾಟೀಲ ಭರವಸೆ ನೀಡಿದರು.
ಅವರು ಸ್ಥಳೀಯ ಚೌಡೇಶ್ವರಿ ದೇವಸ್ಥಾನದಲ್ಲಿ ಈಚೆಗೆ ಜರುಗಿದ ಕಾರ್ತಿಕ ದೀಪೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗಜೇಂದ್ರಗಡದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ, ಕ್ರೀಡಾಂಗಣ ನಿರ್ಮಿಸುವುದು ತಮ್ಮ ಮುಂದಿರುವ ಗುರಿಯಾಗಿದೆ. ಜತೆಗೆ ಪುರಸಭೆ ಆಡಳಿತ ಅಭಿವೃದ್ಧಿಯಲ್ಲಿ ರಾಜಕಿಯ ಮಾಡದೇ ಸರ್ಕಾರದಿಂದ ಲಭಿಸುವ ಅನುದಾನ ಕೊಡಿಸಲು ತಾವೂ ಸದಾ ಸಿದ್ಧ ಎಂದರು.
 ಮಂಜುನಾಥ ಮ್ಯಾಕಲ್ ಮಾತನಾಡಿ, ತೊಗಟವೀರ ಕ್ಷತ್ರಿಯ ಸಮುದಾಯ 250 ರಿಂದ 300 ಕುಟುಂಬಗಳು ಕೂಲಿ, ನೇಕಾರಿಕೆ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಚೌಡೇಶ್ವರಿ ದೇವಸ್ಥಾನ ಬಳಿ ಸಮುದಾಯ ಭವನದ ಅವಶ್ಯಕತೆಯಿದೆ. ಈಗಾಗಲೇ ಬಡ ಸಮುದಾಯದಿಂದ ಸಾಧ್ಯವಾದಷ್ಟು ಕೆಲಸವನ್ನು ಪ್ರಾರಂಭ ಮಾಡಿದ್ದೇವೆ. ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆದಿರುವುದಿಲ್ಲ. ಈಗ ಹಣಕಾಸಿನ ತೊಂದರೆಯಿಂದ ಆ ಸಮುದಾಯ ಭವನದ ಕೆಲಸ ಅರ್ಧಕ್ಕೆ ನಿಂತಿದೆ. ಸಮುದಾಯ ಭವನದ ಅಂದಾಜು ವೆಚ್ಚ ಸುಮಾರು ರು. 25 ಲಕ್ಷವಿದ್ದು, ತಾವು ತಮ್ಮ ಅನುದಾನದಡಿಯಲ್ಲಿ, ಸರ್ಕಾರದಿಂದ ಸಮುದಾಯ ಭವನದ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿಸಲು ಶಾಸಕರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಜಿ.ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕೃಷ್ಣ ಮ್ಯಾಕಲ್, ವೀರಣ್ಣ ಸೊನ್ನದ, ರಾಮಚಂದ್ರಪ್ಪ ಕಲಮಶೆಟ್ಟಿ, ಶಂಕ್ರಣ್ಣ ಚಿನ್ನೂರ, ಗುರುಸಿದ್ದಪ್ಪ, ವೆಂಕಟೇಶ ಜೊಲ್ಲದ, ಪರಂದಾನಪ್ಪ ಹುಲಗಟ್ಟಿ, ಲಕ್ಷ್ಮಣಪ್ಪ ಮ್ಯಾಕಲ್, ಬಸವರಾಜ ಭವರಿತ್ತಿ, ನಾರಾಯಣ ನಿಲೂರ, ರಾಘವೇಂದ್ರ ಮ್ಯಾಕಲ್, ಮಂಜು ಯರಗೇರಿ, ಮಂಜುನಾಥ ಚಿನ್ನೂರ,  ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement