ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೇಲ್ವೆ ಬೇಡಿಕೆ ಈಡೇರಿಸಲು ಸಚಿವ ಖರ್ಗೆಗೆ ಮನವಿ

Vishwanath S
Updated On : 3 Oct 2013, 11:19 am

ಕನ್ನಡಪ್ರಭ ವಾರ್ತೆ, ಗದಗ, ಅ. 2
ಗದಗ ಭಾಗದ ರೇಲ್ವೆ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಈಚೆಗೆ ರೇಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುಧವಾರ ಹುಬ್ಬಳ್ಳಿಯಲ್ಲಿ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಗದಗ-ವಾಡಿ, ಗದಗ-ಹಾವೇರಿ, ಗದಗ -ಮುಂಡರಗಿ-ಹರಿಹರ ನೂತನ ರೈಲು ಮಾರ್ಗಗಳ ಶೀಘ್ರ ಪ್ರಾರಂಭ, ಗದಗ ರೇಲ್ವೆ ನಿಲ್ದಾಣವನ್ನು ವಿಶ್ವ ದರ್ಜೆ ನಿಲ್ದಾಣವನ್ನಾಗಿ ಪರಿವರ್ತಿಸಲು ಗದಗದಿಂದ ಸೊಲಾಪುರ ಗುಂತಕಲ್ಲ, ಮಿರಜ್ ಕಡೆಗೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಪ್ಯಾಸೆಂಜರ್ ರೈಲು ಒದಗಿಸಬೇಕು. ದೆಹಲಿ -ಮುಂಬೈ-ಚೆನ್ನೈ-ಹೈದ್ರಾಬಾದ್-ಗೋವಾ-ಅಜ್ಮೀರ ಪ್ರಮುಖ ನಗರಗಳಿಗೆ ರೈಲು ಸೌಕರ್ಯ, ಪುಣೆಯಿಂದ ಹುಬ್ಬಳ್ಳಿ, ಬೆಂಗಳೂರು, ಹುಬ್ಬಳ್ಳಿಯಿಂದ ಗದಗ ಗುಂತಕಲ್ಲ ಸಿಕಂದರಾಬಾದ್, ಸೊಲಾಪುರ ವಿದ್ಯುತ್ ರೈಲು, ಗದಗ ರೇಲ್ವೆ ನಿಲ್ದಾಣದ ಹತ್ತಿರ ಬೃಹತ್ ಪ್ರಮಾಣದ ಸರಕು ಸಾಗಾಣಿಯ ಕಟ್ಟಡ ನಿರ್ಮಾಣ, ಗದಗ ಸುತ್ತಲಿನ ರೇಲ್ವೆ ಗೇಟುಗಳಿಗೆ ಮೇಲುಸೇತುವೆ ನಿರ್ಮಿಸುವುದು, ಕನ್ನಡ ಸಾಹಿತ್ಯ ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿ, ಅಂಧರ ಬಾಳಿಗೆ ಬೆಳಕು ನೀಡಿದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ರೈಲೊಂದಕ್ಕೆ ನಾಮಕರಣ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ರೇಲ್ವೆ ಅಭಿವೃದ್ಧಿಯ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಪಿ. ಸುಬ್ರಮಣ್ಯಂ ರಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ನಿಸ್ಸಾರ ಅಹ್ಮದ ಖಾಜಿ, ಎನ್.ಕೆ. ಕೊರ್ಲಹಳ್ಳಿ, ಸಿ.ಜಿ.ಬಿ. ಹಿರೇಮಠ, ಮಹೇಶ ಕರಬಿಷ್ಠಿ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement