ಅನುದಾನ ಸದ್ಬಳಕೆಯಾಗಲಿ: ಪಾಟೀಲ್
ಗಜೇಂದ್ರಗಡ: ಸರ್ಕಾರದ ಅನುದಾನ ಸಮರ್ಪಕ ಸದ್ಬಳಕೆ ಜತೆ ಶೈಕ್ಷಣಿಕ ಕ್ಷೇತ್ರ ಉನ್ನತ ಶಿಖರಕ್ಕೇರಿಸುವ ಜವಾಬ್ದಾರಿಕೆ ಶಿಕ್ಷಕ ಸಮೂಹ ಮೇಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಸೇವೆಗೆ ಮುಂದಾಗಿ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಸ್ಥಳೀಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಅಕ್ಷರ ದಾಸೋಹ ಯೋಜನೆಯಡಿ ಮಂಜುರಾದ ರು. 3.1 ಲಕ್ಷ ಅನುದಾನದ ಬಿಸಿಯೂಟ ಕೊಠಡಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿ ದೇಶದ ಪ್ರತಿ ಮಗುವಿಗೂ ಶಿಕ್ಷಣ ಕಡ್ಡಾಯ ಎಂಬ ಧೈಯದೊಂದಿಗೆ ಉಚಿತ ಪಠ್ಯ ಪುಸ್ತಕ ಸಮವಸ್ತ್ರ, ಸೈಕಲ್, ಬಿಸಿಯೂಟ, ವಸತಿ ಜತೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದಂತಹ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಆ ಮೂಲಕ ಶಿಕ್ಷಣ ಕ್ರಾಂತಿ ಮಾಡಲು ಪಣತೊಟ್ಟ ಸರ್ಕಾರದ ಕನಸು ನನಸಾಗಿಸುವತ್ತ ಶಿಕ್ಷಕ ಸಮೂಹ ಸನ್ನದ್ದರಾಗಬೇಕು ಎಂದರು. ಎಸ್.ಎಂ. ಆರಗಿದ್ದಿ ಮಾತನಾಡಿದರು. ವಿ.ಆರ್. ಗುಡಿಸಾಗರ, ಪುರಸಭೆ ವಿರೋಧ ಪಕ್ಷ ನಾಯಕ ಶಿವರಾಜ ಘೋರ್ಪಡೆ, ಅಂಜುಮನ್ ಇಸ್ಲಾಂ ಕಮಿಟಿ ಮುಖ್ಯಸ್ಥ ಎಂ.ಎಚ್. ಕೋಲಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಪಾಟೀಲ, ಶ್ರೀಧರ ಗಂಜಿಗೌಡ್ರ, ರವಿ ಗಡೇದವರ, ದಾದು ಹಣಗಿ, ಇಮಾಮಸಾಬ್ ಬಾಗವಾನ, ಶರಣಪ್ಪ ಕೊಟಗಿ, ಎಫ್.ಎಸ್. ಕರಿದುರಗನ್ನವರ, ಮುರ್ತುಜಾ ಡಾಲಾಯತ್, ಬಾಬಣ್ಣಿ ನದಾಫ, ಭೀಮಣ್ಣ ತಳವಾರ, ದಾವಲ ಕಳಕಾಪುರ, ಮುಖ್ಯೋಪಾಧ್ಯಾಯ ಎಂ.ಡಿ ಸರಕಾವಸ, ಎ.ಎಂ. ಕೊಪ್ಪಳ ಉಪಸ್ಥಿತರಿದ್ದರು.