ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಸದ ತೊಟ್ಟಿಯಲ್ಲಿ ಮೃತ ನವಜಾತ ಶಿಶು

Mainashree
Updated On : 4 Oct 2013, 10:12 am

ಗಜೇಂದ್ರಗಡ: ಪಟ್ಟಣದ ಮೈಸೂರ ಮಠ ಬಳಿ ನವಜಾತ ಗಂಡು ಶಿಶುವೊಂದು ಕಸದ ತೊಟ್ಟಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶುಕ್ರವಾರ ಬೆಳಗ್ಗೆ 6 ಗಂಟೆಗೆ ಬೀದಿ ನಾಯಿ ಹಾಗೂ ಹಂದಿಗಳು ಶಿಶುವಿನ ತಲೆ ಮತ್ತು ಕಾಲನ್ನು ಎಳೆದಾಡುತ್ತಿರುವುದನ್ನು ಸಾರ್ವಜನಿಕರು ಕಂಡಾಗ ವಿಷಯ ಬೆಳಕಿಗೆ ಬಂದಿದೆ. ನಂತರ ಅವುಗಳನ್ನು ಓಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮೃತ ಶಿಶುವನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಶಿಶು ಯಾರದ್ದು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಇಂದು ಮಂತ್ರಾಲಯ ಶ್ರೀಗಳ ಪುರಪ್ರವೇಶ
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಸುಯತೀಂದ್ರ ತೀರ್ಥರು ಹಾಗೂ ಅವರ ಉತ್ತರಾಧಿಕಾರಿ ಶ್ರೀಸುಭುದೇಂದ್ರ ತೀರ್ಥರು ಅ.5 ರಂದು ಪುರಪ್ರವೇಶ ಹಾಗೂ ಗುರುವಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಲಿದ್ದಾರೆ. ನಂತರ ಅ.6ರಂದು ನಗರದ ಎಲ್‌ವಿಡಿ ಕಾಲೇಜಿನ ಮುಂಭಾಗದ ಯಾದವ ಸಂಘದ ಶ್ರೀಕೃಷ್ಣ ಮಂದಿರದ ಆವರಣದಲ್ಲಿ ಉಭಯ ಶ್ರೀಗಳ ತುಲಾಭಾರ, ಮುತ್ತಿನ ಅಭಿಷೇಕ ನಡೆಯಲಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement