ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಪೂ ಕಾಲೇಜುಗಳ ವಾಲಿಬಾಲ್

Vishwanath S
Updated On : 5 Oct 2013, 11:43 am

ಮುಂಡರಗಿ: ಅ.ವಿದ್ಯಾ ಸಮಿತಿಯ ಜ.ಅ.ಸಂ.ಪ.ಪೂ ಕಾಲೇಜಿನ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ಈಚೆಗೆ ನಡೆಯಿತು.
ಬಾಲಕರ ವಿಭಾಗದಲ್ಲಿ ಗದಗದ ಎ.ಎಸ್.ಎಸ್.ಪ.ಪೂ ಕಾಲೇಜು ಪ್ರಥಮ ಸ್ಥಾನ, ಗದಗನ ಜೆ.ಟಿ ಪ.ಪೂರ್ವ ಕಾಲೇಜ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಚಿಕ್ಕನರಗುಂದದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ, ಗದಗದ ಎಚ್.ಇ.ಎಸ್.ಇ ಪ.ಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಬಾಲಕರ 6 ತಂಡಗಳು ಮತ್ತು ಬಾಲಕಿಯರ 6 ತಂಡಗಳು ಭಾಗವಹಿಸಿದ್ದವು. ಬಾಲಕರ ಪಂದ್ಯ ಕೆ.ಆರ್. ಬೆಲ್ಲದ ಕಾಲೇಜಿನ ದೈಹಿಕ ನಿರ್ದೇಶಕ ಪ್ರೊ.ಎ.ವೈ. ನವಲಗುಂದ ಉದ್ಘಾಟಿಸಿದರು. ಬಾಲಕಿಯರ ಪಂದ್ಯಗಳನ್ನು ಕಾಲೇಜು ಮೇಲ್ವಿಚಾರಣಾ ಕಮಿಟಿಯ ಸದಸ್ಯ ಎಸ್.ಬಿ. ಹಿರೇಮಠ ಉದ್ಘಾಟಿಸಿದರು.
ಬಿ.ಎಸ್. ಹಿರೇಗೌಡರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ವಿ.ಎಫ್. ಅಂಗಡಿ, ಎಸ್.ಎಸ್. ಪಾಟೀಲ,  ಆರ್.ಆರ್. ಇನಾಮದಾರ, ಪಿ.ಬಿ. ಹಿರೇಮಠ ಹಾಜರಿದ್ದರು. ಪ್ರಾ.ವಿ.ಎಫ್. ಅಂಗಡಿ ಸ್ವಾಗತಿಸಿದರು. ಆರ್.ಆರ್. ಇನಾಮದಾರ ನಿರೂಪಿಸಿ, ವಂದಿಸಿದರು.
ನಾಳೆ ಮುಕ್ತ ಚದುರಂಗ ಸ್ಪರ್ಧೆ
ಗದಗ: ರೋಣ ತಾಲೂಕಿನ ಗಜೇಂದ್ರಗಡ ಪಟ್ಟಣದಲ್ಲಿ ಸಮನ್ವಯ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಅ. 6ರಂದು ಬೆಳಗ್ಗೆ 10ಕ್ಕೆ ಪಟ್ಟಣದ ಎಂಸಿಎಸ್ ಶಾಲೆ ನಂ. 1ರಲ್ಲಿ ಮುಕ್ತ ಚದುರಂಗ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ ರು. 2001, ದ್ವಿತೀಯ ರು. 1001, ತೃತೀಯ ರು. 701 ಹಾಗೂ ಚತುರ್ಥ ಬಹುಮಾನ ರು. 501 ನೀಡಲಾಗುವುದು. ಪ್ರವೇಶ ಫೀ ರು. 75. ಭಾಗವಹಿಸುವವರು ಪ್ರಕಾಶ ದೊಡ್ಡಮನಿ-8050319971, ಶಾಮ ರಾಯಭಾಗಿ-9844470679, ಎಸ್.ಟಿ. ಪೂಜಾರ-9449635031 ಇವರನ್ನು ಸಂಪರ್ಕಿಸಬಹುದು.
ಪುರಸಭೆ ಜಾಗ ಅತಿಕ್ರಮಿಸಿ ಕಟ್ಟಡ ನಿರ್ಮಾಣ: ದಾದಾಪೀರ್ ಆರೋಪ
ಲಕ್ಷ್ಮೇಶ್ವರ: ಪಟ್ಟಣದ ಹುಲಗೇರಿ ಬಣದ ವಾರ್ಡ್ ನಂ-21ರಲ್ಲಿ ಸಾರ್ವಜನಿಕರೊಬ್ಬರು ಪುರಸಭೆ ಜಾಗೆ ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈ ವಿಷಯ ಪುರಸಭೆ ಅಧಿಕಾರಿಗಳಿಗೆ ಗೊತ್ತಿದ್ದು ಯಾವುದೇ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪುರಸಭೆ ಸದಸ್ಯ ದಾದಾಪೀರ್ ಮುಚ್ಚಾಲೆ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಟ್ಟಣದ ವಾರ್ಡ್ ನಂ 21ರಲ್ಲಿ ಮಕಬೂಸಾಬ್ ಗದಗ ಎನ್ನುವವರು ಪುರಸಭೆ ಜಾಗೆ ಅತಿಕ್ರಮಣ ಮಾಡಿಕೊಂಡು ಕಟ್ಟಣ ನಿರ್ಮಾಣ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಮಾಡಲು ಪುರಸಭೆಯಿಂದ ಯಾವುದೇ ಪರವಾನಿಗೆ ಪಡೆದುಕೊಂಡಿಲ್ಲ. ಅಲ್ಲದೇ ಕಟ್ಟಡವನ್ನು ರಸ್ತೆಯ ಮೇಲೆ ನಿರ್ಮಾಣ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ. ಅದಕ್ಕಾಗಿ ಪುರಸಭೆ ಅಧಿಕಾರಿಗಳು ಕಟ್ಟಡ ನಿರ್ಮಾಣ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಪುರಸಭೆ ಸದಸ್ಯ ದಾದಾಪೀರ ಮುಚ್ಚಾಲೆ ತಿಳಿಸಿದ್ದಾರೆ.
ಇಂದಿನಿಂದ ಎನ್ನೆಸ್ಸೆಸ್ ಶಿಬಿರ
ನರೇಗಲ್ಲ: ಸ್ಥಳಿಯ ಅನ್ನದಾನೇಶ್ವರ ಪಪೂ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ 7 ದಿನಗಳವರೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಸಮೀಪದ ತೋಟಗಂಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭ ಅ. 5ರ ಸಂಜೆ 6.30ಕ್ಕೆ ಜರುಗಲಿದೆ. ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದ ಅನ್ನದಾನ ಶ್ರೀಗಳು ಸಾನ್ನಿಧ್ಯ ವಹಿಸುವರು. ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸುವರು. ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ವೈ.ಸಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಆತಿಥಿಗಳಾಗಿ ಅನ್ನದಾನೇಶ್ವರ ಪಪೂ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಸಿ.ಕೆ. ಹಿರೇಮಠ, ಪಪಂ ಸದಸ್ಯ ಶಣ್ಮುಖ ಮಡಿವಾಳರ, ಎ.ಆರ್. ಮಲ್ಲನಗೌಡ್ರ, ಸರ್ಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ವಡ್ಡಿನ, ಗುರಪ್ಪ ಗಿರಡ್ಡಿ, ಎನ್.ಎನ್. ಪಾಟೀಲ, ಎಲ್.ಎಲ್. ವೆಂಕಾನಾಯ್ಕ, ಗವಿಸಿದ್ದಯ್ಯ ಹಿರೇಮಠ, ಮಲ್ಲನಗೌಡ ಬೂದಿಹಾಳ, ಪಿ.ಎನ್. ಪಾಟೀಲ ಇತರರು ಉಪಸ್ಥಿತರಿರುವರು.
ಆರಾಧನಾ ಮಹೋತ್ಸವ
ನರೇಗಲ್ಲ:  ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ ಬ್ರಹ್ಮಾನಂದ ಆರಾಧನಾ ಮಹೋತ್ಸವವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ಕಾಕಡಾರುತಿ ಮೂಲಕ ಆರಾಧನೆಗೆ ಚಾಲನೆ ನೀಡಲಾಯಿತು. ದತ್ತಾತ್ರೇಯ ಹಾಗೂ ಬ್ರಹ್ಮಾನಂದರಿಗೆ ಅಭಿಷೇಕ ಜರುಗಿತು. ನಂತರ ಉಡುಪಿರಾವ್ ಕುಲಕರ್ಣಿ ಅವರು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ ಅರ್ಚನಾ ಕೊಂಡಿ, ದತ್ತಭಕ್ತ ಮಂಡಳಿ ಅಧ್ಯಕ್ಷ ಅರುಣ ಕುಲಕರ್ಣಿ(ಕುರಗಡ್ಡಿ), ಶೇಷಗಿರಿ ಕುಲಕರ್ಣಿ, ವಿಶ್ವನಾಥ ಗ್ರಾಮಪುರೋಹಿತ, ಆನಂದ ಕಾಳೆ, ವಿನಾಯಕ ಗ್ರಾಮಪುರೋಹಿತ, ಬಾಬು ಕಾಳೆ, ಮಂಜುನಾಥ ಗ್ರಾಮಪುರೋಹಿತ, ಆನಂದ ಕುಲಕರ್ಣಿ, ಗುರುರಾಜ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement