ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಪ್ರೋತ್ಸಾಹ: ಪಾಟೀಲ

Vishwanath S
Updated On : 5 Oct 2013, 11:41 am

ರೋಣ: ಪುರಸಭೆ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದಲ್ಲಿ ಸಹಕಾರ ಪ್ರೋತ್ಸಾಹ ನೀಡಲಾಗುವುದು. ಅಧಿಕಾರವಿದೆ ಎಂದು ಬೇಕಾಬಿಟ್ಟಿಯಾಗಿ ಭ್ರಷ್ಟಾಚಾರದಿಂದ ಕೂಡಿದ ಆಡಳಿತ ನಡೆಸಿದಲ್ಲಿ ಯಾವುದೇ ಕಾರಣಕ್ಕೂ ಸಹಿಸದೇ ತೀವ್ರವಾಗಿ ಖಂಡಿಸಲಾಗುವುದು ಎಂದು ಪುರಸಭೆ ಸದಸ್ಯ ಬಸನಗೌಡ ಪಾಟೀಲ ಹೇಳಿದರು. ಪುರಸಭೆ ವಿರೋಧ ಪಕ್ಷದ ನಾಯಕರಾಗಿ ಬುಧವಾರ ಅಧಿಕಾರ ವಹಿಸಿಕೊಂಡು ಅವರು ಮಾತನಾಡಿದರು. ಪಟ್ಟಣವು ಈ ಹಿಂದೆ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂಬುದು ಶುದ್ದ ಸುಳ್ಳು. ಹಿಂದೆ ಪುರಸಭೆಯು ಕಾಂಗ್ರೆಸ್ ಪಕ್ಷದ ವಶದಲ್ಲಿತ್ತು. ಅವರು ಸಹ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕಾಗಿತ್ತು, ಆದರೆ, ಕಾಂಗ್ರೆಸ್ ಪಕ್ಷದವರು ಆ ರೀತಿ ಮಾಡುವುದರ ಬದಲಾಗಿ ದುರಾಡಳಿತ ನೀಡುವ ಮೂಲಕ ಅನಾವಶ್ಯಕ ಕಾಲಹರಣ ಮಾಡಿದ್ದರು ಎಂಬುದನ್ನು ಮರೆಯಬಾರದು. ಇನ್ನೂದರೂ ಪಟ್ಟಣದ ಅಬಿವೃದ್ಧಿಗೆ ಹೊಸ ಯೋಜನೆಗಳನ್ನು ಹಮ್ಮಿಕೊಂಡಲ್ಲಿ ಪಕ್ಷಬೇದ ಮರೆತು ಅಭಿವೃದ್ಧಿಗೆ ಸಹಕರಿಸಲಾಗುವುದು. ಯಾವುದೇ ಕಾಮಗಾರಿ ಅನುಮೋದನೆಗೊಳ್ಳಲು ಸರ್ವ ಸದಸ್ಯರ ಒಪ್ಪಿಗೆ ಪಡೆಯಬೇಕು ಎಂದರು.
ಕಾಮಗಾರಿ ಗಣಮಟ್ಟದ್ದಾಗಿರಲಿ: ಪುರಸಭೆಯಿಂದ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಸದಸ್ಯರ ಗಮನಕ್ಕೆ ಬಾರದಂತೆ ನಡೆದಲ್ಲಿ ಅಂತವುಗಳನ್ನು ವಿರೋಧಿಸಲಾಗುವುದು. ಪಟ್ಟಣದ ಜನತೆಗೆ ನೀರು, ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಪುರಸಭೆ ಸದಸ್ಯರ ಪಾತ್ರ ಪ್ರಮುಖವಾಗಿದೆ ಎಂದರು. ಬಸವರಾಜ ಹಕಾರಿ ಮಾತನಾಡಿದರು. ಅಶೋಕ ನವಲಗುಂದ, ಮುತ್ತಣ್ಣ ಲಿಂಗನಗೌಡ್ರ, ಅರ್ಜುನ ಕೊಪ್ಪಳ, ಪುರಸಭೆ ಸದಸ್ಯ ಗದಿಗೆಪ್ಪ ಕಿರೇಸೂರ, ನಾಗರಾಜ ಪಲ್ಲೇದ, ಸದಸ್ಯೆ ಶರಣವ್ವ ಜಿಡ್ಡಿಬಾಗೀಲ, ರಾಮಣ್ಣ ದೇಶಣ್ಣವರ, ಸಂಗಪ್ಪ ಜಿಡ್ಡಿಬಾಗೀಲ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement