ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾಸಿರಿ ಯೋಜನೆ ಪಜಾ, ಪಪಂ ವಿದ್ಯಾರ್ಥಿಗಳಿಗೆ ವಿಸ್ತರಿಸಿ

Vishwanath S
Updated On : 6 Oct 2013, 11:33 am

 ಗದಗ: ರಾಜ್ಯ ಸರ್ಕಾರದ ಯೋಜನೆಯಾದ ವಿದ್ಯಾಸಿರಿ ಯೂಜನೆಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿಸ್ತರಿಸುವಂತೆ ಆಗ್ರಹಿಸಿ ಈಚೆಗೆ ಗದಗ ಜಿಲ್ಲಾ ದಲಿತ ವಿದ್ಯಾರ್ಥಿ ಪರಿಷತ್‌ನ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಸತಿ ನಿಲಯಗಳ ಲಭ್ಯತೆ ವಿದ್ಯಾರ್ಥಿಗಳ ಪ್ರಮಾಣ ತಕ್ಕಂತೆ ವಸತಿ ನಿಲಯಗಳ ಸಾಕಾಗುತ್ತಿಲ್ಲ. ಈ ರೀತಿ ಅವಕಾಶ ವಂಚಿತರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿನೂತನ ವಿದ್ಯಾಸಿರಿ ಯೋಜನೆಯನ್ನು ಇದೇ ಮಂಗಳವಾರ ಜಾರಿಗೊಳಿಸಿದೆ. ವಿದ್ಯಾಸಿರಿ ಯೋಜನೆ ಅಡಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತಿಂಗಳಿಗೆ ರು. 1,500 ನೀಡಲಾಗುತ್ತಿದ್ದು, ಈ ಯೋಜನೆಯನ್ನು ಪಜಾ, ಪಪಂ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು. ಏಕೆಂದರೆ ಈ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ನಿರೀಕ್ಷೆಗೆ ತಕ್ಕತೆ ಎಲ್ಲ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಸ್ಥಳಾವಕಾಶ ಸಿಗುತ್ತಿಲ್ಲ. ಕಾರಣ ವಿದ್ಯಾಸಿರಿ ಯೋಜನೆಯನ್ನು ಪಜಾ, ಪಪಂ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಜಯಶ್ರೀ ಶಿಂತ್ರೆ ಅವರಿಗೆ ಮನವಿ ಸಲ್ಲಿಸಲಾಯಿತು.  ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾಧ್ಯಕ್ಷ ಪ್ರಕಾಶ ವೀರಾಪುರ ಹಾಗೂ ಪದಾಧಿಕಾರಿಗಳಾದ ವಸಂತ ಚವಡಣ್ಣವರ, ರಮೇಶ ಕಡೆಮನಿ, ಚಂದ್ರಶೇಖರ ಹರಿಜನ, ಸುರೇಶ ಚಲವಾದಿ, ಮುತ್ತು ಬಿಳೇಯಲಿ, ಮರಿಯಪ್ಪ ಹರಿಜನ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement