ಇಂದು ಎನ್ನೆಸ್ಸೆಸ್ ಶಿಬಿರ
ಗದಗ: ಆದರ್ಶ ಶಿಕ್ಷಣ ಸಮಿತಿ ವಾಣಿಜ್ಯ ಮಹಾವಿದ್ಯಾಲಯದಿಂದ ತಾಲೂಕಿನ ಅಂತೂರು-ಬೆಂತೂರಲ್ಲಿ ಹಮ್ಮಿಕೊಳ್ಳಲಾಗಿರುವ ಎನ್ನೆಸ್ಸೆಸ್ ಶಿಬಿರನಿಮಿತ್ತ ಅ. 7ರ ಸಂಜೆ 6ಕ್ಕೆ ಕನ್ನಡ ಭಾಷೆಯ ಮಹತ್ವ ಕುರಿತು ಕಸಾಪ ಜಿಲ್ಲಾಧ್ಯಕ್ಷ ಡಾ ಶಿವಪ್ಪ ಕುರಿ ಉಪನ್ಯಾಸ ನೀಡುವರು. ಪ್ರೊ. ಸಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಿವರು. ಲಲಿತಾ ಬಡಿಗೇರ, ಸೈಯದಸಾಬ್ ಮುಲ್ಲಾನವರ, ಹನುಮಂತಪ್ಪ ಆಲೂರ, ಯಮನಪ್ಪ ಜಿನಗಿ, ಎಸ್.ಬಿ. ಜಾದವ್, ಶೈಲಜಾ ಬೇತಲ್ ಆಗಮಿಸುತ್ತಾರೆಂದು ಶಿಬಿರದ ಅಧ್ಯಕ್ಷ ಪ್ರಾ. ಎಂ.ಎಲ್. ಗುಳೇದಗುಡ್ಡ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 6
ಸ್ಥಳೀಯ ಎಸ್.ಎಂ. ಭೂಮರಡ್ಡಿ ಪಪೂ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವು ಅ. 7ರ ಸಂಜೆ 6 ಗಂಟೆಗೆ ದತ್ತುಗ್ರಾಮ ವೀರಾಪುರದಲ್ಲಿ ನಡೆಯಲಿದೆ.
ಅ. 7ರಂದು ಬೆಳಗ್ಗೆ 10ಕ್ಕೆ ರಾಜರಾಜೇಶ್ವರಿ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನಡೆಯುವ ವನಮಹೋತ್ಸವ ಕಾರ್ಯಕ್ರಮವನ್ನು ಎ.ಎಫ್. ಹಿರೇಮಠ ಚಾಲನೆ ನೀಡುವರು.
ಪ್ರೊ. ಬಿ.ಕೆ. ಮಾದಿ ಜಾನಪದ ಸಾಹಿತ್ಯ ಕುರಿತು ಹಾಗೂ ಕೃಷಿತಜ್ಞ ಅಯ್ಯಪ್ಪ ಮಸ್ಕಿ ಮಳೆ ನೀರು ಸಂಗ್ರಹಣೆ ಮತ್ತು ಅಂತರ್ಜಲ ಕುರಿತು ಉಪನ್ಯಾಸ ನೀಡುವರು.
ಭೀಮಪ್ಪ ಕಿಲ್ಲೇದಾರ ಅದ್ಯಕ್ಷತೆ ವಹಿಸುವರು. ಬಸಪ್ಪ ಬಡಿಗೇರ, ಪವಾಡೆಪ್ಪ ಗುಡದೂರ, ತುಕಾರಾಮಪ್ಪ ಇಂಗಳಗಿ, ವೀರಪ್ಪ ಮೋಹಿತೆ, ರಾಜಪ್ಪ ಗೌಡರ, ಹುಚ್ಚೀರಪ್ಪ ಹಡಪದ ಮುಂತಾದವರು ಪಾಲ್ಗೊಳ್ಳುವರೆಂದು ಎನ್ನೆಸ್ಸೆಸ್ ಘಟಕದ ಸಂಯೋಜನಾಧಿಕಾರಿ ಜಿ.ಬಿ. ಗುಡಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.