ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎನ್ನೆಸ್ಸೆಸ್ ಶಿಬಿರದಿಂದ ಗ್ರಾಮಗಳ ಅಭಿವೃದ್ಧಿ

Lingaraj Badiger
Updated On : 7 Oct 2013, 11:25 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 6
ಗ್ರಾಮದ ಸ್ವಚ್ಛತೆ, ಪರಿಸರ ಜಾಗೃತಿ, ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ, ಪಶು ಚಿಕಿತ್ಸೆ ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಮಾಡುವ ಎನ್ನೆಸ್ಸೆಸ್ ಶಿಬಿರಗಳಿಂದ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಶನಿವಾರ ರಾತ್ರಿ ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದಲ್ಲಿ ಜ. ಅ.ವಿದ್ಯಾ ಸಮಿತಿಯ ಜ. ಅನ್ನದಾನೀಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದಿಂದ ವಿದ್ಯಾರ್ಥಿಗಳಿಗೆ ಶ್ರಮದ ಕುರಿತು ಹಾಗೂ ಇನ್ನೊಬ್ಬರ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದನ್ನು ಕಲಿತುಕೊಳ್ಳಬಹುದಾಗಿದೆ. ಪ್ರತಿವರ್ಷ ಒಂದು ಗ್ರಾಮವನ್ನು ದತ್ತು ಗ್ರಾಮವೆಂದು ಗುರುತಿಸಿಕೊಂಡು ಏಳು ದಿನಗಳ ಕಾಲ ಆ ಗ್ರಾಮದಲ್ಲಿ ಬಹುತೇಕ ಎಲ್ಲ ಸಮಸ್ಯೆಗಳಿಗೂ ಶಿಬಿರದ ವಿದ್ಯಾರ್ಥಿಗಳು ಸ್ಪಂದಿಸುತ್ತಾರೆ. ಇಂದಿನ ವಿದ್ಯಾರ್ಥಿಗಳಿಗೆ ಇಂಥ ಶಿಬಿರಗಳು ಅವಶ್ಯಕವಾಗಿವೆ. ಪ್ರಸ್ತುತ ಶಿಬಿರದಲ್ಲಿ ಅ. 8ರಂದು ಶಿರೋಳ ಗ್ರಾಮದಲ್ಲಿ ವಿಶೇಷ ಸ್ವಚ್ಛತಾ ಕಾರ್ಯಕ್ರಮವನ್ನು ಸಂಘಟಿಸಿದ್ದು, ಅಂದು ಗ್ರಾಮದ ಎಲ್ಲ ಗಣ್ಯರೂ ಉಪಸ್ಥಿತರುವಂತೆ ಮನವಿ ಮಾಡಿಕೊಂಡರು.
ಡಾ೤ ನಾಡೋಜ, ಅನ್ನದಾನೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ಮಹಿಳೆಯರಿಗೆ ಅವಕಾಶಗಳು ದೊರೆತರೆ ಹೆಚ್ಚು ಅಭಿವೃದ್ಧಿ ಸಾಧ್ಯ. ಮಹಿಳೆಯರೂ ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕವಾಗಿ ಎಲ್ಲ ರಂಗಗಳಲ್ಲೂ ಮುಂದೆ ಬರಬೇಕಾಗಿದೆ. ಇಂಥ ರಾಷ್ಟ್ರೀಯ ಯೋಜನೆ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ನಾವು ಇನ್ನೊಬ್ಬರ ಕಷ್ಟ-ಸುಖ, ನೋವು-ನಲಿವುಗಳಲ್ಲಿ ಭಾಗಿಯಾಗಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಕೊಟ್ರೇಶ ಅಂಗಡಿ, ಶಿವನಗೌಡ ಗೌಡ್ರ ಮಾತನಾಡಿದರು. ಕಾಲೇಜು ಮೇಲ್ವಿಚಾರಣಾ ಕಮಿಟಿ ಅಧ್ಯಕ್ಷ ಬಿ.ಎಸ್. ಹಿರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ವಿ.ಎಫ್. ಅಂಗಡಿ, ದೇವೇಂದ್ರಪ್ಪ ಬಂಡಾರಿ, ದೃವಕುಮಾರ ಹೊಸಮನಿ, ಸೊಲಬಣ್ಣ ಜೋಬಾಳ, ಸಣ್ಣ ಸೋಮನಗೌಡ ಗೌಡ್ರ, ಎ.ಪಿ. ದಂಡಿನ, ವೀರಣ್ಣ ಜೋಬಾಳಿ, ಕಣಕಪ್ಪ ಬೆಣಕನಾಳ, ಪ್ರಾಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು. ಎಸ್.ಎಂ. ಹೊಸಮಠ ಸ್ವಾಗತಿಸಿದರು. ಶಿಬಿರಾಧಿಕಾರಿ ಸಿ.ಎಸ್. ಅರಸನಾಳ ನಿರೂಪಿಸಿದರು. ಆರ್.ಆರ್. ಇನಾಮದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement