ಕಾಲ್ಪನಿಕ ವೇತನ ತೀರ್ಪು ಜಾರಿಗೊಳಿಸಲು ಮುಖ್ಯಮಂತ್ರಿಗೆ ಮನವಿ
ಗದಗ: ಕಾಲ್ಪನಿಕ ವೇತನ ಕುರಿತು ನ್ಯಾಯಾಲಯ ಘೋಷಿಸಿದ ತೀರ್ಪನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಶನಿವಾರ ಕರ್ನಾಟಕ ಪಪೂ ಮಹಾವಿದ್ಯಾಲಯಗಳ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಕರ್ನಾಟಕ ಪಪೂ ಮಹಾವಿದ್ಯಾಲಯಗಳ ನೌಕರರ ಸಂಘದ ಗೌರವಾಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ ಮಾತನಾಡಿ, ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯವರ ಕಾಲ್ಪನಿಕ ವೇತನ ಸಮಸ್ಯೆ ಕುರಿತು ಏಪ್ರಿಲ್ 2006ರಲ್ಲಿ ಸರ್ಕಾರದ ಆದೇಶದಿಂದ ಆದ ಅನ್ಯಾಯ ಸರಿಪಡಿಸಿಕೊಳ್ಳಲು ಸಿಬ್ಬಂದಿಯವರು ಉಚ್ಚನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಿ 6 ವರ್ಷಗಳ ನಂತರ ಸುಮಾರು 300 ಸಿಬ್ಬಂದಿ ಯಶಸ್ಸನ್ನು ಕಂಡಿದ್ದಾರೆ. ಈಗಾಗಲೇ ಈ ಸಿಬ್ಬಂದಿ ಆರ್ಥಿಕವಾಗಿ, ಮಾನಸಿಕವಾಗಿ ಸಾಕಷ್ಟು ಹಿಂಸೆಗೆ ಒಳಗಾಗಿದ್ದಾರೆ. ಕಾರಣ ಸರ್ಕಾರ ಹೆಚ್ಚು ವಿಳಂಬ ಮಾಡದೆ ತಕ್ಷಣ ನ್ಯಾಯಾಲಯದ ತೀರ್ಪನ್ನು ಜಾರಿಗೆಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ, ಎ.ಎಂ.ಅಂಗಡಿ, ಜಿ.ಎಂ. ಹಕಾರಿ, ಆರ್. ಈಶ್ವರಶೆಟ್ಟಿ, ಎಸ್.ಎನ್. ಮಳಲಿ, ಪ್ರಾ. ಎಸ್.ಎನ್. ಹೊಟ್ಟಿನ್, ಆರ್.ಎಸ್. ಪಾಟೀಲ, ಎಸ್.ಸಿ. ಹೆದ್ದೂರಿ, ಎನ್.ಬಿ. ಕಲಾವಂತ, ಪಿ.ಎಸ್. ಕಾಶಪ್ಪನರ, ಕೆ.ಎಸ್. ಬಡಿಗೇರ, ಐ.ಎಸ್. ಮಟ್ಟಿ, ಎನ್.ಬಿ. ತಳ್ಳಹಳ್ಳಿ, ಎಂ.ಎಸ್. ಮಟ್ಟಿ, ಎಂ.ಬಿ. ಮೆಣಸಗಿ, ಎಂ.ಸಿ. ಬೆಲ್ಲದ, ಎನ್.ವಿ. ಜೋಷಿ, ಜಾನಾ ನಾಯಕ, ಎನ್.ಎಫ್. ಚೌಕನವರ, ಟಿ.ಎಸ್. ಬಂಡಿಹಾಳ, ಎನ್.ಎಸ್. ಹಂಜಗಿ, ಸಿ.ಎಸ್. ದೊಡ್ಡಮನಿ ಉಪಸ್ಥಿತರಿದ್ದರು.