ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಜ್ಯಮಟ್ಟಕ್ಕೆ ಆಯ್ಕೆ

Lingaraj Badiger
Updated On : 7 Oct 2013, 11:25 am

ರೋಣ: ತಾಲೂಕಿನ ಮುದೇನಗುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಹನುಮಂತಪ್ಪ ನರಗುಂದ ಈಚೆಗೆ ಗದಗ ನಗರದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟದ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಅರ್ಜಿ ಆಹ್ವಾನ
ರೋಣ: ತಾಲೂಕಿನ ಸೂಡಿಯ ಜುಕ್ತಿಹಿರೇಮಠ ಜಾತ್ರಾ ಮಹೋತ್ಸವದ ಅಂಗವಾಗಿ 2 ಡಿಸೆಂಬರ್, 2012ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಗಳನ್ನು ಗಳಿಸಿದ ಸೂಡಿ ಗ್ರಾಮದ ಮಕ್ಕಳಿಗೆ ಶಿಕ್ಷಕರ ವೇದಿಕೆ ಸೂಡಿಯ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ಅ. 10ರಂದು ಜುಕ್ತಿಹಿರೇಮಠದ ಮಠದಲ್ಲಿ ನೀಡಲಾಗುವುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರೋಣ ತಾಲೂಕಿನಲ್ಲಿ ವ್ಯಾಸಂಗ ಮಾಡಿರಬೇಕು. ಪಿಯುಸಿ ದ್ವಿತೀಯ ವರ್ಷವನ್ನು ರಾಜ್ಯದ ಯಾವುದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿರಬೇಕು. ಅರ್ಜಿ ಸಲ್ಲಿಸುವವರು ದೃಢೀಕೃತ ಅಂಕಪಟ್ಟಿಯನ್ನು ಅ. 9ರೊಳಗಾಗಿ ಕೆ.ವಿ. ಜುಕ್ತಿಹಿರೇಮಠ, ನಿವೃತ್ತ ಶಿಕ್ಷಕರು ಸೂಡಿ ತಾಲೂಕು ರೋಣ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ: 9481125884, 9916847420 ಇಲ್ಲಿಗೆ ಸಂಪರ್ಕಿಸುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ
ಮನೆ ಕಳ್ಳತನ
ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ ಮನೆಯೊಂದರಲ್ಲಿ ರಾತ್ರಿ ವೇಳೆ ಮನೆಯ ಬಾಗಿಲು ಮುರಿದ ಕಳ್ಳರು, ಮನೆಯಲ್ಲಿನ ರು. 89,500 ಮೌಲ್ಯದ ಬಂಗಾರದ ಆಭರಣ, ಮೊಬೈಲ್ ಹಾಗೂ ರು. 25 ಸಾವಿರ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಹಾಲವ್ವ ಚಂದ್ರಾ ನಾಯ್ಕ ಎಂಬುವರ ಮನೆ ಕಳ್ಳತನವಾಗಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಗದಗ: ಸಾರಾಯಿಗೆ ದಾಸನಾಗಿದ್ದ ವ್ಯಕ್ತಿಯೋರ್ವನು ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಚ್.ಎಸ್. ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಎಚ್.ಎಸ್. ವೆಂಕಟಾಪುರ ಗ್ರಾಮದ ನಿವಾಸಿ ವೀರಪ್ಪ ಕರ್ಲವಾಡ(40) ಎಂದು ಗುರುತಿಸಲಾಗಿದ್ದು, ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಮನಸ್ಸು: ಪತಿ ಆತ್ಮಹತ್ಯೆ
ಗದಗ: ಮನೆಯಲ್ಲಿ ಹೆಂಡತಿ ಜೊತೆ ಮೈಮನಸ್ಸು ಇದ್ದಿದ್ದರಿದ ನೊಂದ ಗಂಡನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ನಾಗರಸಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಹನಮಪ್ಪ ಪಡೇಗೌಡರ(38) ಮೃತ ದುರ್ದೈಯಿಯಾಗಿದ್ದು, ಮೃತನ ಹೆಂಡತಿಯು ತವರು ಮನೆಗೆ ಹೋದವಳು ಬಾರದಿದ್ದರಿಂದ ಅವಳನ್ನು ಕರೆಯಲಿಕ್ಕೆ 2-3 ಬಾರಿ ಹೋದರೂ ಅವಳು ಬಾರದೇ ಇರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement