ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಡಗೀತೆ ಕತ್ತರಿಗೆ ಕರವೇ ಖಂಡನೆ

Lingaraj Badiger
Updated On : 8 Oct 2013, 11:30 am

ಗಜೇಂದ್ರಗಡ: ರಾಷ್ಟ್ರಕವಿ ಕುವೆಂಪು ರಚಿಸಿದ ನಾಡು ನುಡಿ ಸಂಸ್ಕೃತಿ ಬಿಂಬಿಸುವ ನಾಡಗೀತೆಗೆ ಕತ್ತರಿ ಹಾಕುವ ಮೂಲಕ ಸರ್ಕಾರ ನಾಡಿಗೆ ಅಗೌರವ ತೋರುತ್ತಿದ್ದು, ಕೂಡಲೆ ನಾಡಗೀತೆಯನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರ.ಬಣ) ಕಾರ್ಯಕರ್ತರು ಸೋಮವಾರ ಸ್ಥಳೀಯ ವಿಶೇಷ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಕರವೇ ತಾಲೂಕು ಉಪಾಧ್ಯಕ್ಷ ಶರಣಪ್ಪ ಪೂಜಾರ ಮಾತನಾಡಿ, ರಾಷ್ಟ್ರಕವಿ ಕುವೆಂಪುರವರು ರಚಿಸಿದ ಜಯಭಾರತ ಜನನಿಯ ತನುಜಾತೆ ನಾಡಗೀತೆ ನಾಡಿನ ಹೆಮ್ಮಯ ಪ್ರತೀಕ. ಗೀತೆಯ ಪ್ರತಿಯೊಂದು ಶಬ್ದವು ನಾಡಿನ ಹಿರಿಮೆ ಹೆಚ್ಚಿಸುವಂತದ್ದು, 6.30 ನಿಮಿಷಗಳ ನಾಡಗೀತೆಗೆ ಕತ್ತರಿ ಹಾಕಲು ಹೊರಟಿರುವುದು ಖಂಡನೀಯ ಎಂದರು.
ತಾಲೂಕು ಕಾರ್ಯದರ್ಶಿ ಅಲ್ಲಭಕ್ಷಿ ಮುಚ್ಚಾಲಿ ಮಾತನಾಡಿ, ಸರ್ಕಾರ 6 ಕೋಟಿ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ರಾರಾಜಿಸುತ್ತಿರುವ ನಾಡಗೀತೆಯನ್ನು ಕೇವಲ 2.30 ನಿಮಿಷಕ್ಕೆ ಸೀಮಿತಗೊಳಿಸಲು ಮುಂದಾಗಿರುವ ಸರ್ಕಾರ ತನ್ನ ನಿರ್ಧಾರ ಕೈ ಬಿಡದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದರು. ರಾಘು ಹೂಗಾರ, ರವಿ ಭಜಂತ್ರಿ, ಮಾತನಾಡಿದರು. ವಿಶೇಷ ತಹಸೀಲ್ದಾರ್ ಸಿ.ಎಂ. ಕಲಹಾಳ ಮನವಿ ಸ್ವೀಕರಿಸಿ ಕೂಡಲೇ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದೆಂದರು. ಅಶೋಕ ಭಜಂತ್ರಿ, ಉಮೇಶ ಕರೇಕಲ್, ಅಂದಪ್ಪ ಕೇರಿ, ನಾಗರಾಜ ಹೊಸಮನಿ, ತಾಯಪ್ಪ ಮಾತೀನ, ಮಹಾಂತೇಶ ಹೂಗಾರ, ಮೂಕಪ್ಪ ಮಾತೀನ, ನಾಗರಾಜ ಮಲಜಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement