ಬೇಡಿಕೆ ಈಡೇರಿಕೆಗೆ ಒತ್ತಾಯ
ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿ, ನಂತರ ಜಿಲ್ಲಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಕಾರ್ಯದರ್ಶಿ ಶಂಕರ ಗುರಿಕಾರ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಹಲವಾರು ಯುವಕರು ಉನ್ನತ ಶಿಕ್ಷಣ ಮುಗಿಸಿ ಸರಿಯಾದ ಉದ್ಯೋಗ ಸಿಗದೆ ಅನಿವಾರ್ಯವಾಗಿ ಈ ಛಾಯಾಗ್ರಾಹಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕೆಲವು ಸರ್ಕಾರಿ ನೌಕರರು ತಮ್ಮ ನಿತ್ಯದ ಕೆಲಸದ ವೇಳೆಯಲ್ಲಿ ತಮ್ಮ ವೃತ್ತಿಯ ಜತೆಗೆ ಛಾಯಾಚಿತ್ರ ತೆಗೆಯುವ ಮೂಲಕ ಛಾಯಾಗ್ರಾಹಕರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದ್ದಾರೆ. ಸರ್ಕಾರಿ ವೃತ್ತಿಯ ಜತೆಗೆ ಛಾಯಾಗ್ರಾಹಕ ವೃತ್ತಿಯಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರತಿವರ್ಷ ಪ್ರವಾಸೋದ್ಯಮ ದಿನಾಚರಣೆ ಮಾಡುವುದರ ಜತೆಗೆ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆ ನಡೆಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ದಿಲೀಪ್ ಮುಂಡರಗಿ, ಜಲಾಶಂಕರ ಶಿದ್ಲಿಂಗ, ವಾದಿರಾಜ ಕುಲಕರ್ಣಿ, ಮಂಜು ಲಕ್ಕಶೆಟ್ಟಿ, ಶಂಕರ ವಡ್ಡಿನ, ರಾಜಶೇಖರ ಖನ್ನೂರ, ಚನ್ನಯ್ಯ ಹಿರೇಮಠ, ಭಗೀರಥ ಮಲಜಿ, ಪ್ರಕಾಶ ವಸ್ತ್ರದ, ಮಂಜು ಮೆರವಾಡೆ, ಉಮೇಶ ಸಜ್ಜನ, ಗಣೇಶ ಮೆರವಾಡೆ, ರಾಮು ವಗ್ಗಿ, ಶರತ್ ಮಹೇಂದ್ರಕರ, ವಿನಾಯಕ ಚೌಡಾಪುರ, ಬನೇಶ ಕುಲಕರ್ಣಿ, ರಾಜು ಬದಿ, ಆಯುಬ್ ಮುತ್ತಗಿ, ಶಿವಾನಂದ ಕೆಂದುರಿ, ರಾಜು ಬಾಕಳೆ, ರವಿ ಜಂಗಮನಿ, ವೀರೇಶ, ಸಂಗಮೇಶ, ಚಂದ್ರು ಗುಡ್ಡಿಮನಿ, ಗಣೇಶ, ತುಳಸಿನಾಥ ಪವಾರ, ಮಂಜು ಪಾಟೀಲ, ಬಿ.ಜಿ. ಕೌದಿ, ರಾಜು ದವಳೆ, ಪ್ರಶಾಂತ ಹೂಲಿ, ಶ್ರೀನಿವಾಸ ಶಾಗಾವಿ, ಕೆ.ಕೆ. ಸ್ಟುಡಿಯೋ, ಸಂತೋಷ ನಾವಳ್ಳಿ, ಶಿವರಾಜ ಹಾಗೂ ತಾಲೂಕಿನ ಎಲ್ಲ ಛಾಯಾಗ್ರಾಹಕರು ಭಾಗವಹಿಸಿದ್ದರು.