ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಲಕ್ಷ್ಮೇಶ್ವರ: ಇಂದು ಉಡಿ ತುಂಬುವ ಕಾರ್ಯಕ್ರಮ

Lingaraj Badiger
Updated On : 9 Oct 2013, 11:42 am

ಲಕ್ಷ್ಮೇಶ್ವರ:  ಪಟ್ಟಣದ ಬಸ್ತಿಬಣದಲ್ಲಿನ ಪಾರ್ವತಿ ಮಕ್ಕಳ ಬಳಗದ ಹತ್ತಿರವಿರುವ ಸಣ್ಣ ದ್ಯಾಮವ್ವ ದೇವಿಯ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ. 9ರ ಬೆಳಗ್ಗೆ 7.40ಗಂಟೆಗೆ ದ್ಯಾಮವ್ವ ದೇವಿಯ ಘಟಸ್ಥಾಪನಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ನಂತರ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಸಂಜೆ 7 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್. ಬಾಳಿಹಳ್ಳಿಮಠ ಹಾಗೂ ಸದಸ್ಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ದೀಪದಾನ, ವಾರ್ಷಿಕ ಸ್ನೇಹ ಸಮ್ಮೇಳನ
ನರಗುಂದ: ಪಟ್ಟಣದ ಯಡೆಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದ(ಬಿಇಡಿ) 2012-13ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭವು ಅ. 9ರ ಸಂಜೆ 4.30ಕ್ಕೆ ಬಿ.ಇಡಿ. ಕಾಲೇಜು ಆವರಣದಲ್ಲಿ ಜರುಗಲಿದೆ. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಂಸ್ಥಾಪಕಾಧ್ಯಕ್ಷ ವಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಅಜ್ಜನಗೌಡ ಪಾಟೀಲ, ರವಿಂದ್ರ ಪಂತ, ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಪಿ.ಎಫ್. ಸೊಲಾಪುರಿ, ಮಹೇಶ ಪಾಟೀಲ, ಹೊನ್ನಪ್ಪಗೌಡ ಪಾಟೀಲ, ಈರನಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಶಿಲ್ಪಾ ಹಳೇಮನಿ, ಶ್ರೀಧರ ಪೂಜಾರ ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಮಹಾಮಂಗಳಾರತಿ
ನರಗುಂದ: ಪಟ್ಟಣದ ಸೋಮಾಪುರದ ನಾಗಲಿಂಗ ಸಭಾ ಮಂಟಪದಲ್ಲಿ ಡಾ. ಜಯದೇವ ಗುರುಗಳು ಹಮ್ಮಿಕೊಂಡಿರುವ ಶರ ನವರಾತ್ರಿ ಮಹೋತ್ಸವದ ನಿಮಿತ್ತ ಅ. 9ರ ಬೆಳಗ್ಗೆ 7 ಗಂಟೆಗೆ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರವರ ಪೌರೋಹಿತ್ಯದಲ್ಲಿ ನವಗ್ರಹ ಹೋಮ, ಗಣಹೋಮ ಹಾಗೂ ದುರ್ಗಾಹೋಮ ನೆರವೇರುವುದು ನಂತರ ಮಹಾಮಂಗಳಾರತಿ, ಮಹಾಪ್ರಸಾದ ಜರುಗುವದು ಎಂದು ಪ್ರಕಟಣೆ ತಿಳಿಸಿದೆ.
ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಗದಗ: ನಗರ ಸೇರಿದಂತೆ ಜಿಲ್ಲೆಯ 24 ಯಾತ್ರಾರ್ಥಿಗಳು ಈಚೆಗೆ ಗದಗ ರೇಲ್ವೆ ನಿಲ್ದಾಣದಿಂದ ಹಜ್ ಯಾತ್ರೆಗೆ ಪ್ರಯಾಣ ಬೆಳೆಸಿದರು. ಜಿಲ್ಲೆಯ ಅನೇಕ ಮುಸ್ಲಿಂ ಸಮಾಜದ ಗಣ್ಯರು ಯಾತ್ರಾರ್ಥಿಗಳನ್ನು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಬೆಟಗೇರಿ ಈದ್ಗಾ ಕಮಿಟಿ ಚೇರ್‌ಮನ್ ಎಂ.ಆರ್. ಅಣ್ಣಿಗೇರಿ, ಕೆಪಿಸಿಸಿ ಅಲ್ಪಸಂಖ್ಯಾತರ ಕಾರ್ಯದರ್ಶಿ ಉಮರ ಫಾರೂಕ್ ಹುಬ್ಬಳ್ಳಿ, ಅನ್ವರ ಶಿರಹಟ್ಟಿ, ಮೌಲಾಸಾಬ ಹುಬ್ಬಳ್ಳಿ, ಗೌಸ್ ಮುಲ್ಲಾ, ಅಬುಬಕ್ಕರ್ ಅಣ್ಣಿಗೇರಿ, ಸಲೀಂ ಬಳ್ಳಾರಿ, ಸರ್ಫರಾಜ ಬಬರ್ಚಿ, ಇರ್ಫಾನ್ ಡಂಬಳ, ಶಮೀರ ಚಟ್ನಾಳ, ವಾಜಿದ ಬಬರ್ಚಿ, ರಿಯಾಜ ಬ್ಯಾಳಿರೊಟ್ಟಿ, ರಜಾಕ್ ಶಿರಹಟ್ಟಿ, ಮಹಮ್ಮದಅಲಿ ದೂಡ್ಡಮನಿ, ಗೌಡಪ್ಪ, ಜಾವಿದ ನೂರಭಾಷ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement