ಎನ್ನೆಸ್ಸೆಸ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ: ಮಿಥುನ್ ಪಾಟೀಲ
ಗಜೇಂದ್ರಗಡ: ಮಹಾತ್ಮ ಗಾಂಧೀಜಿಯವರ ಕನಸಿನ ಎನ್.ಎಸ್.ಎಸ್‌ನಂತಹ ಯೋಜನೆಯಲ್ಲಿ ಯುವಕರು ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ಪಾಟೀಲ ಹೇಳಿದರು.
ಸಮೀಪದ ವೀರಾಪುರ ಗ್ರಾಮದಲ್ಲಿ ಎಸ್.ಎಂ. ಭೂಮರಡ್ಡಿ ಪಪೂ ಮಹಾವಿದ್ಯಾಲಯ ರಾಷ್ಟೀಯ ಸೇವಾಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ವ್ಹಿ. ಕಂಬಳ್ಯಾಳ ಮಾತನಾಡಿದರು.
ಪ್ರಾಚಾರ್ಯ ಡಾ.ಎಸ್.ಎನ್. ಶಿವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು, ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಗ್ರಾಪಂ ಅಧ್ಯಕ್ಷ ಶರಣಪ್ಪ ಕಡಬಲಕಟ್ಟಿ, ಗ್ರಾಪಂ ಸದಸ್ಯ ಎಂ.ವೈ. ಅವಧೂತ, ನ್ಯಾಯವಾದಿ ಶ್ರೀಕಾಂತ ಅವಧೂತ, ಎನ್‌ಎಸ್‌ಎಸ್ ಯೋಜನಾಧಿಕಾರಿ ಜಿ.ಬಿ. ಗುಡಿಮನಿ ಉಪಸ್ಥಿತರಿದ್ದರು. ವಿ.ಕೆ. ಚಳಗೇರಿ ಸ್ವಾಗತಿಸಿದರು. ಎಸ್.ಎಸ್. ವಾಲಿಕಾರ ನಿರೂಪಿಸಿದರು, ಎಸ್.ಕೆ. ಕಟ್ಟಿಮನಿ ವಂದಿಸಿದರು.