ಧಾರ್ಮಿಕ ಕೇಂದ್ರಗಳಿಂದ ಭಕ್ತಿ ಭಾವ
ಗದಗ: ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜನತೆಯಲ್ಲಿ ಭಕ್ತಿ, ಭಾವ ಸೌಹಾರ್ದತೆ ಮೂಡಿಸುತ್ತವೆ ಎಂದು ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಗದುಗಿನ ತಾಜ್ ನಗರದ ಹಿರಾ ಇಸ್ಲಾಮಿಕ್ ಸೆಂಟರ್‌ಗೆ ಭೇಟಿ ನೀಡಿ ಸೆಂಟರ್‌ನ ಕಾರ್ಯವೈಖರಿ ಹಾಗೂ ಪ್ರಾರ್ಥನಾ ಮಂದಿರದ ವಿಶಿಷ್ಠತೆ ವೀಕ್ಷಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಸೀದಿ ಅಲ್ಹಾಹನ ಆರಾಧನಾ ಕೇಂದ್ರವಾಗಿದ್ದು, ಧಾರ್ಮಿಕ ಶೃದ್ಧಾ ಕೇಂದ್ರಗಳು ಸ್ವಚ್ಚತೆ ಮತ್ತು ಶುಭ್ರತೆ ಹೇಗಿರಬೇಕೆಂಬುದಕ್ಕೆ ಇದು ಮಾದರಿಯಾಗಿದ್ದು, ಧಾರ್ಮಿಕ ಶ್ರದ್ಧ ಕೇಂದ್ರಗಳು ಜನರಲ್ಲಿ ಭಕ್ತಿಭಾವ ಮೂಡಿಸುವುದರೊಂದಿಗೆ ಇತರೇ ಶ್ರದ್ಧಾ ಕೇಂದ್ರಗಳಿಗೆ ಮಾದರಿಯಾಗಿರಬೇಕು ಎಂದರು.
ಇಸ್ಲಾಮಿಕ್ ವೆಲ್ಪೇರ್ ಟ್ರಸ್ಟ್‌ನ ಅಧ್ಯಕ್ಷ ಕೆ.ಐ. ಶೇಖ, ಎ.ಎಸ್. ಖವಾಸ, ಎಂ.ಎನ್. ಮಕಾನದಾರ, ಎ.ಎ. ತಡಸ, ಜುನೇದ ಉಮಚಗಿ, ರಾಜಅಹ್ಮದ ಇಲಕಲ್, ಡಾ. ಎಂ.ಎಸ್.ಮಕಾನದಾರ ಪಾಲ್ಗೊಂಡಿದ್ದರು.