ರಾಷ್ಟ್ರ ಮಟ್ಟದ ಅಟ್ಯಾ-ಪಟ್ಯಾದಲ್ಲಿ ತೃತೀಯ ಸ್ಥಾನ
ನರೇಗಲ್ಲ: ಪಟ್ಟಣದ 6 ವಿದ್ಯಾರ್ಥಿನಿಯರನ್ನು ಒಳಗೊಂಡಿದ್ದ ರಾಜ್ಯ ಅಟ್ಯಾಪಟ್ಯಾ ತಂಡವು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ ಗಳಿಸಿದೆ ಎಂದು ತರಬೇತುದಾರ ಕೆ.ಸಿ. ಜೋಗಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್‌ನ ಛತ್ರಪತಿ ಶಿವಾಜಿ ಮಹಾರಾಜ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ಅಟ್ಯಾ-ಪಟ್ಯಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವು ನರೇಗಲ್ಲದ ಲಕ್ಷೀ ಯಕ್ಕುಂಡಿ ನಾಯಕತ್ವದಲ್ಲಿ ಭಾಗವಹಿಸಿತ್ತು. ತಂಡದಲ್ಲಿ ನೇತ್ರಾ ರೋಣದ, ವೀಣಾಶ್ರೀ ಮರಿನಾಯ್ಕರ, ಪುಷ್ಪಾ ಗೋಡಿ. ವಿಜಯಲಕ್ಷೀ ಜೋಗಿ, ಸೌಮ್ಯ ಹೊಸಮನಿ (ನರೇಗಲ್ಲನ 6 ವಿದ್ಯಾರ್ಥಿನಿಯರು) ಸವಿತಾ ಕುಲಕರ್ಣಿ, ಪೂಜಾ ಗಾಳಿ (ಯಾವಗಲ್), ಸವಿತಾ, ಕೆಂಚಮ್ಮ (ಹುಬ್ಬಳ್ಳಿ) ಸಿಂಧು (ಬೆಳಗಾವಿ), ಗಿರಿಜಾ (ಗೋಕಾಕ) ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅತ್ಯಂತ ತುರುಸಿನಿಂದ ಕೂಡಿದ್ದ ಈ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವು ಆರಂಭದಲ್ಲಿ ಓಡಿಸ್ಸಾ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳ ತಂಡಗಳನ್ನು ಸೋಲಿಸಿ ಸೆಮಿಫೈನಲ್ ಪಂದ್ಯದಲ್ಲಿ ಪಾಂಡಿಚೇರಿ ವಿರುದ್ಧ ರಾಜ್ಯ ತಂಡವು ಪರಾಭವನ್ನು ಹೊಂದುವ ಮೂಲಕ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತು. ತಂಡದೂಂದಿಗೆ ತರಬೇತುದಾರ ಶಿಕ್ಷಕ ಕೆ.ಸಿ. ಜೋಗಿ, ಕೆ.ಟಿ. ನಡಮನಿ, ಆರ್.ಎಚ್. ರೇವಡಿಗಾರ ತೆರಳಿದ್ದರು.