ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಲ ಬಾಧೆ: ರೈತ ಆತ್ಮಹತ್ಯೆ

Mainashree
Updated On : 12 Oct 2013, 10:35 am

ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಸಮೀಪದ ಅಕ್ಕಿಗುಂದ ತಾಂಡಾದ ನಿವಾಸಿ ಬದ್ದೆಪ್ಪ ಲಚ್ಚೆಪ್ಪ ಲಮಾಣಿ (33) ಎನ್ನುವ ರೈತ ಸಾಲಬಾಧೆ ತಾಳಲಾರದೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಗಿನ ಜಾವ ಜರುಗಿದೆ. ಮೃತನು ತನ್ನ ಮೂರು ಎಕರೆ ಹೊಲದಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಈಗ ಶೇಂಗಾ ಒಕ್ಕಲಿ ಮಾಡಿದಾಗ ಕೇವಲ 2 ಚೀಲ ಬೆಳೆ ಬಂದಿದೆ. ಇದರಿಂದ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೃತನ ಪತ್ನಿ ತಿಳಿಸಿದ್ದಾಳೆ. ಮೃತನು ಪಟ್ಟಣದ ಸಿಂಡಿಕೇಟ್ ಬ್ಯಾಂಕಿನಲ್ಲಿ ರು. 1 ಲಕ್ಷ ಸಾಲ ಮಾಡಿದ್ದು, ಅಲ್ಲದೇ ಗ್ರಾಮಸ್ಥರಲ್ಲಿ ರು. 3-4 ಲಕ್ಷ ಸಾಲ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement